ವಾಲಿದ 3 ಅಂತಸ್ತಿನ ಕಟ್ಟಡ, ಹೊರಗೆ ಓಡೋಡಿ ಬಂದ ಜನ, ತಪ್ಪಿದ ದುರಂತ..!

ಈ ಸುದ್ದಿಯನ್ನು ಶೇರ್ ಮಾಡಿ

building

ಬೆಂಗಳೂರು, ಜ.23- ಆರ್.ಟಿ.ನಗರದ ಚಾಮುಂಡಿನಗರದ ನೀಲಕಂಠೇಶ್ವರ ದೇವಾಲಯ ಸಮೀಪದ ಖಾಲಿ ಜಾಗದಲ್ಲಿ ಪಾಯ ತೆಗೆಯುತ್ತಿದ್ದಾಗ ಪಕ್ಕದಲ್ಲಿದ್ದ 3 ಅಂತಸ್ತಿನ ಹಳೇ ಕಟ್ಟಡ ವಾಲಿದ್ದು, ಮನೆಯವರೆಲ್ಲರೂ ತಮ್ಮ ವಸ್ತುಗಳನ್ನೆಲ್ಲ ಹೊರ ತಂದಿದ್ದು, ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮೂರು ಅಂತಸ್ತಿನ ಕಟ್ಟಡವೊಂದು ನೋಡ ನೋಡುತ್ತಿದ್ದಂತೆ ವಾಲಿದ ಪರಿಣಾಮ ತಕ್ಷಣ ಎಚ್ಚೆತ್ತುಕೊಂಡು, ಕಟ್ಟಡದಲ್ಲಿ ವಾಸವಿದ್ದವರೆಲ್ಲರೂ ಮನೆಯ ಸಾಮಗ್ರಿಗಳ ಸಮೇತ ಹೊರಬಂದಿದ್ದಾರೆ.

ಆರ್.ಟಿ.ನಗರದ ಚಾಮುಂಡಿನಗರದ ನೀಲಕಂಠೇಶ್ವರ ದೇವಾಲಯ ಸಮೀಪದ ಖಾಲಿ ಜಾಗದಲ್ಲಿ ಇಂದು ಬೆಳಗ್ಗಿನಿಂದ ಪಾಯ ತೆಗೆಯಲಾಗುತ್ತಿತ್ತು. ಮಧ್ಯಾಹ್ನದ ಸುಮಾರಿಗೆ ಪಕ್ಕದಲ್ಲಿದ್ದ 3 ಅಂತಸ್ತಿನ ಹಳೇ ಕಟ್ಟಡ ವಾಲಿದೆ.

ತಕ್ಷಣ ಈ ಕಟ್ಟಡದಲ್ಲಿ ವಾಸವಾಗಿದ್ದ ಮನೆಯವರೆಲ್ಲರೂ ತಮ್ಮ ವಸ್ತುಗಳನ್ನೆಲ್ಲ ಹೊರ ತಂದಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Facebook Comments

Sri Raghav

Admin