ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

Dhavan--1

ನೇಪಿಯರ್. ಜ.23: ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ ಭರ್ಜರಿ ಗೆಲುವು ದಾಖಲಿಸುವ ಮೂಲಕ ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಈ ಮೂಲಕ  5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ಗೆ ಆರಂಭದಲ್ಲಿ ಮೊಹಮ್ಮದ್ ಶಮಿ ದಾಳಿಗೆ ತತ್ತರಿಸಿದರೆ, ಬಳಿಕ ಕುಲ್ದೀಪ್ ಯಾದವ್ ಸ್ಪಿನ್ ಮೋಡಿ ಮಾಡಿದರು. ಹೀಗಾಗಿ ನ್ಯೂಜಿಲೆಂಡ್ 38 ಓವರ್‌ಗಳಲ್ಲಿ 157 ರನ್‌ಗೆ ಆಲೌಟ್ ಆಯಿತು.

ನ್ಯೂಜಿಲೆಂಡ್ ತಂಡವನ್ನ ಅಲ್ಪಮೊತ್ತಕ್ಕೆ ಆಲೌಂಟ್ ಮಾಡಿ 158 ರನ್ ಟಾರ್ಗೆಟ್ ಪಡೆದಿದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆರಂಭಿಸಿತು.

ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಮೋಡಿ ಮಾಡಿದರೆ, ಬ್ಯಾಟಿಂಗ್‌ನಲ್ಲಿ ಶಿಖರ್ ಧವನ್ ಅಬ್ಬರಿಸಿದರು. ಈ ಮೂಲಕ ಮೊದಲ 34.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಭಾರತ ಜಯ ಸಾಧಿಸಿತು. ಧವನ್ ಅಜೇಯ 75 ರನ್ ಸಿಡಿಸಿದರೆ, ರಾಯುಡು 13 ರನ್ ಸಿಡಿಸಿದರು. ನಾಯಕ ಕೊಹ್ಲಿ 45 ರನ್ ಸಿಡಿಸಿ ಔಟಾದರು. ಶಿಖರ್ ಧವನ್ 26ನೇ ಏಕದಿನ ಅರ್ಧಶತಕ ದಾಖಲಿಸಿದರು.

ನಾಯಕ ಕೇನ್ ವಿಲಿಯಮ್ಸನ್‌ 64 ರನ್ ಹೊರತು ಪಡಿಸಿದರೆ ಇನ್ಯಾವ ಬ್ಯಾಟ್ಸ್‌ಮನ್‌ಗಳು ಹೋರಾಟ ನೀಡಲಿಲ್ಲ. ಭಾರತದಪರ ಕುಲ್ದೀಪ್ ಯಾದವ್ 4, ಮೊಹಮ್ಮದ್ ಶಮಿ 3, ಯಜುವೇಂದ್ರ ಚೆಹಾಲ್ 2 ಹಾಗೂ ಕೇದಾರ್ 1 ವಿಕೆಟ್ ಕಬಳಿಸಿದರು.

# ನ್ಯೂಜಿಲೆಂಡ್- ಭಾರತ ಪಂದ್ಯಕ್ಕೆಗಿದ್ದ ‘ಸೂರ್ಯ’ದೇವ
ನೇಪಿಯರ್, ಜ. 23- ಮಳೆ ಅಥವಾ ಕೆಟ್ಟ ವಾತಾವರಣದಿಂದ ಕ್ರಿಕೆಟ್ ಪಂದ್ಯಗಳು ನಿಂತಿರುವ ಅನೇಕ ನಿದರ್ಶನಗಳಿವೆ. ಆದರೆ ಬಿಸಿಲಿನ ತಾಪದಿಂದಾಗಿ ಪಂದ್ಯ ನಿಲ್ಲುವ ಮೂಲಕ ಅಚ್ಚರಿ ಮೂಡಿಸಿದೆ.

ಅತ್ಯಂತ ತಂಪು ವಾತಾವರಣವಿರುವ ನೇಪಿಯರ್ ನಲ್ಲಿ ನ್ಯೂಜಿಲೆಂಡ್ ಹಾಗೂ ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದ ಭೋಜನ ವಿರಾಮದ ನಂತರ ಭಾರತದ ದಾಂಡಿಗರಾದ ರೋಹಿತ್‍ಶರ್ಮಾ ಹಾಗೂ ಶಿಖರ್‍ಧವನ್ ಅವರು ಬ್ಯಾಟಿಂಗ್ ಮಾಡಲು ಬಂದಾಗ ಸೂರ್ಯನ ಪ್ರಖರತೆ (ಬೆಳಕು) ನೇರವಾಗಿ ಆಟಗಾರರ ಕಣ್ಣಿಗೆ ಬೀಳುತ್ತಿದ್ದರಿಂದ ಬ್ಯಾಟಿಂಗ್‍ಗೆ ಯೋಗ್ಯವಲ್ಲದ ವಾತಾವರಣ ಸೃಷ್ಟಿ ಆಗಿತ್ತು.

ಸೂರ್ಯನ ಬೆಳಕು ನೇರವಾಗಿ ಬ್ಯಾಟ್ಸ್‍ಮನ್‍ಗಳ ಕಣ್ಣಿಗೆ ಬೀಳುತ್ತಿದ್ದುದರಿಂದ ರೋಹಿತ್‍ಶರ್ಮಾ ಚೆಂಡಿನ ಗತಿಯನ್ನು ಅರಿಯದೆ ಔಟಾದರು.ಕೆಲ ಹೊತ್ತಿನ ನಂತರ ಅಂಪೈರ್‍ಗಳು ವಾತಾವರಣ ಬ್ಯಾಟಿಂಗ್ ಗೆ ಯೋಗ್ಯವಲ್ಲ ಎಂಬುದನ್ನು ಅರಿತು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪಂದ್ಯವನ್ನು ತಡೆಹಿಡಿದರು.

ನ್ಯೂಜಿಲೆಂಡ್ ಹಾಗೂ ಬಾಂಗ್ಲಾ ದೇಶ ವಿರುದ್ಧ ಟ್ವೆಂಟಿ-20 ಪಂದ್ಯ ಹಾಗೂ ಜನವರಿ 19 ರಂದು ನಡೆದ ಪಂದ್ಯವು ಕೂಡ ಸೂರ್ಯನ ಬೆಳಕಿನಿಂದ ಆಟವನ್ನು ಸ್ಥಗಿತಗೊಳಿಸಲಾಗಿತ್ತು.

# ಲಾರಾ ದಾಖಲೆ ಸರಿಗಟ್ಟಿದ ಶಿಖರ್ ಧವನ್
ಭಾರತ ಎಡಗೈ ಆರಂಭಿಕ ದಾಂಡಿಗ ಶಿಖರ್ ಧವನ್ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಾನಾಡಿದ 118ನೇ ಇನಿಂಗ್ಸ್ ನಲ್ಲಿ 5,000 ರನ್ ಪೂರೈಸಿದರು. ಈ ಮೂಲಕ ವೆಸ್ಟ್‌ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ದಾಖಲೆಯನ್ನು ಸರಿಗಟ್ಟಿದರು. ಲಾರಾ ಕೂಡ 118ನೇ ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ತಲುಪಿದ್ದರು.

ನ್ಯೂಝಿಲೆಂಡ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 10 ರನ್ ಗಳಿಸಿದ ತಕ್ಷಣವೇ ಧವನ್ ಈ ಸಾಧನೆ ಮಾಡಿದರು. ನಾಯಕ ವಿರಾಟ್‌ಕೊಹ್ಲಿ ಬಳಿಕ ಅತ್ಯಂತ ವೇಗವಾಗಿ 5,000 ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲ ಅತ್ಯಂತ ವೇಗವಾಗಿ 5,000 ರನ್ ಪೂರೈಸಿದ ವಿಶ್ವದ ಮೊದಲ ದಾಂಡಿಗನಾಗಿದ್ದಾರೆ. ಅಮ್ಲ ಕೇವಲ 101 ಇನಿಂಗ್ಸ್‌ಗಳಲ್ಲಿ ಐದು ಸಹಸ್ರ ರನ್ ಗಳಿಸಿದ್ದರು.

ಕೊಹ್ಲಿ ಹಾಗೂ ವಿವಿಯನ್ ರಿಚರ್ಡ್ಸ್(ತಲಾ 114 ಇನಿಂಗ್ಸ್)ವೇಗವಾಗಿ 5,000 ರನ್ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನ ಹಂಚಿಕೊಂಡಿದ್ದಾರೆ. ಲಾರಾ ಹಾಗೂ ಧವನ್(ತಲಾ 118 ಇನಿಂಗ್ಸ್)3ನೇ ಸ್ಥಾನ ಹಂಚಿಕೊಂಡಿದ್ದಾರೆ. ವಿಲಿಯಮ್ಸನ್ 119 ಇನಿಂಗ್ಸ್‌ಗಳಲ್ಲಿ 5 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

Facebook Comments

Sri Raghav

Admin