ಕೆಂಪುಕೋಟೆಯಲ್ಲಿ ನೇತಾಜಿ ಮ್ಯೂಸಿಯಂ ಉದ್ಘಾಟಿಸಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Subhash-Chandra-Boseನವದೆಹಲಿ, ಜ.23 (ಪಿಟಿಐ)- ಸ್ವಾತಂತ್ರ ಸಂಗ್ರಾಮದ ವೀರ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ 122ನೇ ಜನ್ಮ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ನೇತಾಜಿ ಅವರ ಮ್ಯೂಸಿಯಂ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಯಾದ್-ಎ-ಜಲಿಯನ್ ಮ್ಯೂಸಿಯಂ(ಜಲಿಯನ್‍ವಾಲಾ ಬಾಗ್ ಮತ್ತು ಒಂದನೇ ಮಹಾ ಯುದ್ಧ ಕುರಿತ ವಸ್ತು ಪ್ರದರ್ಶನಾಲಯ) ಸಹ ಲೋಕಾರ್ಪಣೆಯಾಯಿತು.

ಅಲ್ಲದೇ ಮೋದಿ ಅವರು ರೆಡ್ ಪೋರ್ಟ್ ಕಾಂಪ್ಲೆಕ್ಸ್‍ನಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಸ್ತು ಪ್ರದರ್ಶನ ಮತ್ತು ಭಾರತೀಯ ಕಲೆ ಕುರಿತ ದೃಶ್ಯ ಕಲಾ ಮ್ಯೂಸಿಯಂಗಳನ್ನೂ ಸಹ ಉದ್ಘಾಸಿದರು.

ಬೋಸ್ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ಮ್ಯೂಸಿಯಂನಲ್ಲಿ ನೇತಾಜಿ ಮತ್ತು ಐಎನ್‍ಎಗೆ ಸಂಬಂಧಪಟ್ಟ ವಿವಿಧ ವಸ್ತುಗಳಿವೆ. ಸುಭಾಷ್ ಚಂದ್ರ ಬೋಸ್ ಬಳಸುತ್ತಿದ್ದ ಮರದ ಕುರ್ಚಿ ಮತ್ತು ಖಡ್ಗ, ಪದಕಗಳು, ಬ್ಯಾಡ್ಜ್‍ಗಳು, ಸಮವಸ್ತ್ರ ಹಾಗೂ ಸೇನೆಗೆ ಸಂಬಂಧಪಟ್ಟ ಇತರ ಅಪರೂಪದ ವಸ್ತುಗಳನ್ನು ಇಲ್ಲಿ ನೋಡಬಹುದಾಗಿದೆ.

ಬೋಸ್ ಮತ್ತು ಐಎನ್‍ಎ ಕುರಿತ ಸಾಕ್ಷ್ಯಚಿತ್ರವು ಮ್ಯೂಸಿಯಂಗೆ ಭೇಟಿ ನೀಡುವವರಿಗೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾಹಿತಿ ನೀಡುತ್ತಿದೆ. ಈ ಸಾಕ್ಷ್ಯಚಿತ್ರಕ್ಕೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಿನ್ನಲೆ ಧ್ವನಿ ನೀಡಿದ್ದಾರೆ.  ಯಾದ್-ಎ-ಜಲಿಯನ್ ಮ್ಯೂಸಿಯಂ 13ನೇ ಏಪ್ರಿಲ್, 1919ರಲ್ಲಿ ನಡೆದ ಜಲಿಯನ್‍ವಾಲಾ ಬಾಗ್ ಘೋರ ಹತ್ಯಾಕಾಂಡದ ನೆನಪು ಮಾಡುತ್ತದೆ.

Facebook Comments