‘ಭಾರತ್ ಕೋ ತುಕಡೇ ತುಕಡೇ ಕರೋಂಗಿ’ ಅಂದವರನ್ನು ಕರೆತಂದು ಕಾರ್ಯಕ್ರಮ : ಪ್ರಿಯಾಂಕ್ ಖರ್ಗೆ ಕ್ಷಮೆಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Prahlad-Joshiಹುಬ್ಬಳ್ಳಿ,ಜ.23- ಭಾರತ್ ಕೋ ತುಕಡೇ ತುಕಡೇ ಕರೋಂಗಿ ಅಂದವರನ್ನು ಕರೆದುಕೊಂಡು ಬಂದು ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮ ಮಾಡಿದ್ದಾರೆ.

ರಾಜ್ಯ ಸರ್ಕಾರ ರಜೆ ಹಾಗೂ ಶೋಕಾಚರಣೆ ಘೋಷಣೆ ಮಾಡಿದ್ದರು ಈ ರೀತಿ ಮಾಡಿರುವುದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ. ಶೀಘ್ರವೇ ಕ್ಷಮೆಯಾಚನೆ ಮಾಡಬೇಕ  ಎಂದು ಸಂಸದ ಜೋಶಿ ಆಗ್ರಹಿಸಿ ದರು.

ನಗರದಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನೈತಿಕತೆ ಎನ್ನೊದು ಕಾಂಗ್ರೆಸ್ ಅವರಿಗೆ ಗೊತ್ತೆ ಇಲ್ಲ. ಹೀಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎನ್ನೋದು ಪ್ರಸ್ತುತ.

ಕೂಡಲೆ ಕಾಂಗ್ರೆಸ್ ಅಧ್ಯಕ್ಷ ಈ ಘಟನೆ ಬಗ್ಗೆ ಕ್ಷಮೆ ಕೇಳಬೇಕು. ಅಲ್ಲದೆ ಸಿಎಂ, ಡಿಸಿಎಂ ಉತ್ತರ ಕೊಡಬೇಕು ಎಂದರು.  ರೆಸಾರ್ಟ್‍ನಲ್ಲಿ ಶಾಸಕರ ಗಲಾಟೆ ಪ್ರಕರಣ ಕುರಿತು ಮಾತನಾಡಿ, ಇದು ಕಾಂಗ್ರೆಸ್ ಪಾರ್ಟಿಯ ಡ್ರಾಮಾ, ಎಲ್ಲರನ್ನ ಅಲ್ಲಿಗೆ ಕರೆದುಕೊಂಡು ಹೋಗಿದ್ದು ಏಕೆ ಎಂದು ಪ್ರಶ್ನಿಸಿ ಎಲ್ಲಾ ಡ್ರಾಮಾ ಮುಗಿದ ಮೇಲೆ 307 ಕೇಸ್ ಹಾಕಿದ್ದಾರೆ.

ಹೀಗಾಗಿ ಎಲ್ಲರ ಮೇಲೆ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.  ಬಿಜೆಪಿ ಯಾವುದೇ ಜಾತಿ ರಾಜಕಾರಣ ಮಾಡಿಲ್ಲ. ಜಾತಿ ರಾಜಕಾರಣ ಮಾಡುವುದು ಕಾಂಗ್ರೆಸಿಗರು. ನಗರದ ಅಭಿವೃದ್ಧಿ ವಿಚಾರದಲ್ಲಿ ಒಂದು ಸಮುದಾಯವನ್ನು ಎತ್ತಿಕಟ್ಟಿ ಬಿಜೆಪಿಯವರ ಹೆಸರನ್ನು ಹಾಳು ಮಾಡಲು ಹುನ್ನಾರ ನಡೆಸುತ್ತಿದ್ದಾರೆ.

ಇಂತಹ ಅನಾವಶ್ಯಕ ರಾಜಕಾರಣ ತಂತ್ರ ಬಳಸದೆ ನಗರದ ಹಾಗೂ ಸಾರ್ವಜನಿಕರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ನನ್ನ ಮೇಲೆ ಕಾಂಗ್ರೆಸ್‍ನವರು ದೂರು ದಾಖಲಿಸುವುದಾದರೇ ದಾಖಲಿಸಲಿ ನಾನು ಮುಂದಿನ ವಿಚಾರಣೆಯನ್ನು ಕೋರ್ಟ್‍ನಲ್ಲಿ ನೋಡಿಕೊಳ್ಳುತ್ತೇನ ಎಂದು ಅವರು ತಿಳಿಸಿದರು.

ಯಾವುದೇ ರಾಜಕೀಯ ಉದ್ದೇಶ ಇಲ್ಲ; ಇಂದು ನಾನು ನಗರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದು ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಸಂಸದ ರಾಘವೇಂದ್ರ ಹೇಳಿದರು. ಹುಬ್ಬಳ್ಳಿಯ ಸಂಸದ ಪ್ರಹ್ಲಾದ್ ಜೋಶಿ ಇದೇ ವೇಳೆ ರಾಘವೇಂದ್ರ ಅವರನ್ನು ಸನ್ಮಾನಿಸಿದರು.

Facebook Comments