BIG NEWS : ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕ ಗಾಂಧಿ ಎಂಟ್ರಿ..! ಕಾಂಗ್ರೆಸ್ ನಲ್ಲಿ ಸಂಚಲನ

ಈ ಸುದ್ದಿಯನ್ನು ಶೇರ್ ಮಾಡಿ

Priyanaka--Gandhi

ನವದೆಹಲಿ, ಜ.23-ಲೋಕಸಭೆ ಚುನಾವಣೆಗಾಗಿ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷದ ಪುನರ್‍ಸಂಘಟನೆ ಮತ್ತು ಬಲವರ್ಧನೆಗೂ ಒತ್ತು ನೀಡಿದೆ. ಇದೇ ವೇಳೆ ಗಾಂಧಿ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕ ಗಾಂಧಿ ವಾದ್ರಾ ಸಕ್ರಿಯ ರಾಜಕೀಯ ಪ್ರವೇಶಿಸಿದ್ದಾರೆ.

ಪ್ರಿಯಾಂಕ ಅವರನ್ನು ಇಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.  ಎಐಸಿಸಿ ಅಧ್ಯಕ್ಷ ರಾಹುಲ್ ತಮ್ಮ ಸಹೋದರಿ ಪ್ರಿಯಾಂಕ ಅವರನ್ನು ಉತ್ತರ ಪ್ರದೇಶ ಪೂರ್ವ ಭಾಗದ ಐಎಸಿಸಿ ಜನರಲ್ ಸೆಕ್ರೆಟರಿಯನ್ನಾಗಿ ನೇಮಕ ಮಾಡಿದರು.

ಇವರು ಫೆಬ್ರವರಿ ಮೊದಲ ವಾರ ಈ ಹುದ್ದೆಯನ್ನು ಅಧಿಕೃತವಾಗಿ ವಹಿಸಿಕೊಳ್ಳಲಿದ್ದು, ಉತ್ತರ ಪ್ರದೇಶದಲ್ಲಿ ಪಕ್ಷದ ಸಂಘಟನೆಗೆ ಶ್ರಮಿಸಲಿದ್ದಾರೆ.

ಪ್ರಿಯಾಂಕ ಸಕ್ರಿಯ ರಾಜಕೀಯ ರಂಗ ಪ್ರವೇಶಿಸಬೇಕೆಂಬುದು ಕಾಂಗ್ರೆಸ್ ಧುರೀಣರು ಮತ್ತು ಅಸಂಖ್ಯಾತ ಕಾರ್ಯಕರ್ತರ ಅಭಿಲಾಷೆಯಾಗಿತ್ತು. ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಿಯಾಂಕ ಅವರನ್ನು ಈಗ ರಾಜಕೀಯಕ್ಕೆ ಕರೆತರಲಾಗಿದ್ದು, ಮುಂದಿನ ಬೆಳವಣಿಗೆ ಕುತೂಹಲಕಾರಿಯಾಗಿದೆ.

ಎಐಸಿಸಿನಲ್ಲಿ ಮಹತ್ವದ ನೇಮಕ:  ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಅಜಾದ್ ಅವರನ್ನು ಪಕ್ಷದ ಹರ್ಯಾಣದ ಉಸ್ತುವಾರಿಯನ್ನಾಗಿ (ಎಐಸಿಸಿ ಪ್ರಧಾನ ಕಾರ್ಯದರ್ಶಿ) ನೇಮಕ ಮಾಡಲಾಗಿದೆ.

ಯುವ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಉತ್ತರ ಪ್ರದೇಶದ ಪಶ್ಚಿಮ ವಿಭಾಗದ ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಕೆ.ಸಿ.ವೇಣುಗೋಪಾಲ್ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿ ನೇಮಿಸಲಾಗಿದೆ. ಈ ಹುದ್ದೆಯನ್ನು ಈ ಹಿಂದೆ ಅಶೋಕ್ ಗೆಲ್ಹೋಟ್ ನಿರ್ವಹಿಸುತ್ತಿದ್ದರು.

Facebook Comments