ನರೋಡಾ ಪಾಟಿಯಾ ಹತ್ಯಾಕಾಂಡ ನಾಲ್ವರಿಗೆ ಜಾಮೀನು

ಈ ಸುದ್ದಿಯನ್ನು ಶೇರ್ ಮಾಡಿ

Supreme Courtನವದೆಹಲಿ,ಜ.23 (ಪಿಟಿಐ)-ಕಳೆದ 2002ರಲ್ಲಿ ಭುಗಿಲೆದ್ದಿದ್ದ ಗಲಭೆಯಲ್ಲಿ ಉದ್ರಿಕ್ತ ಸಮೂಹಕ್ಕೆ 97 ಮಂದಿ ಬಲಿಯಾಗಿದ್ದ ಗುಜರಾತ್‍ನ ನರೋಡಾ ಪಾಟಿಯಾ ಹತ್ಯಾಕಾಂಡಕ್ಕೆ ಸಂಬಂಧಿಸಿ ನಾಲ್ವರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.

ಉಮೇಶ್‍ಭಾಯಿ ಸುರಾಭಾಯಿ ಭರವಾಡ, ರಾಜ್‍ಕುಮಾರ್, ಪದ್ಮೇಂದ್ರ ಸಿನ್ಹ ಜಸ್ವಂತ್ ಸಿನ್ಹ ರಾಜಪೂತ್ ಮತ್ತು ಹರ್ಷದ್ ಅಲಿಯಾಸ್ ಮುಂಗ್‍ಡಾ ಜಿಲಾ ಗೋವಿಂದ್ ಛಾರಾ ಪರಮಾರ್ ಜಾಮೀನು ಪಡೆದ ದೋಷಿಗಳು.  ಗುಜರಾತ್ ಹೈಕೋರ್ಟ್ ಕಳದ ವರ್ಷ ಏಪ್ರಿಲ್ 20ರಂದು 29 ಮಂದಿ ಆರೋಪಿಗಳಲ್ಲಿ 12 ಮಂದಿ ದೋಷಿ ಎಂದು ತೀರ್ಪು ನೀಡಿತ್ತು.

Facebook Comments