ನ್ಯೂಜಿಲೆಂಡ್- ಭಾರತ ಪಂದ್ಯಕ್ಕೆ ಅಡ್ಡಿಯಾದ ‘ಸೂರ್ಯ’ದೇವ..!

ಈ ಸುದ್ದಿಯನ್ನು ಶೇರ್ ಮಾಡಿ

Sun---01

ನೇಪಿಯರ್, ಜ. 23- ಮಳೆ ಅಥವಾ ಕೆಟ್ಟ ವಾತಾವರಣದಿಂದ ಕ್ರಿಕೆಟ್ ಪಂದ್ಯಗಳು ನಿಂತಿರುವ ಅನೇಕ ನಿದರ್ಶನಗಳಿವೆ. ಆದರೆ ಬಿಸಿಲಿನ ತಾಪದಿಂದಾಗಿ ಪಂದ್ಯ ನಿಲ್ಲುವ ಮೂಲಕ ಅಚ್ಚರಿ ಮೂಡಿಸಿದೆ.

ಅತ್ಯಂತ ತಂಪು ವಾತಾವರಣವಿರುವ ನೇಪಿಯರ್ ನಲ್ಲಿ ನ್ಯೂಜಿಲೆಂಡ್ ಹಾಗೂ ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದ ಭೋಜನ ವಿರಾಮದ ನಂತರ ಭಾರತದ ದಾಂಡಿಗರಾದ ರೋಹಿತ್‍ಶರ್ಮಾ ಹಾಗೂ ಶಿಖರ್‍ಧವನ್ ಅವರು ಬ್ಯಾಟಿಂಗ್ ಮಾಡಲು ಬಂದಾಗ ಸೂರ್ಯನ ಪ್ರಖರತೆ (ಬೆಳಕು) ನೇರವಾಗಿ ಆಟಗಾರರ ಕಣ್ಣಿಗೆ ಬೀಳುತ್ತಿದ್ದರಿಂದ ಬ್ಯಾಟಿಂಗ್‍ಗೆ ಯೋಗ್ಯವಲ್ಲದ ವಾತಾವರಣ ಸೃಷ್ಟಿ ಆಗಿತ್ತು.

ಸೂರ್ಯನ ಬೆಳಕು ನೇರವಾಗಿ ಬ್ಯಾಟ್ಸ್‍ಮನ್‍ಗಳ ಕಣ್ಣಿಗೆ ಬೀಳುತ್ತಿದ್ದುದರಿಂದ ರೋಹಿತ್‍ಶರ್ಮಾ ಚೆಂಡಿನ ಗತಿಯನ್ನು ಅರಿಯದೆ ಔಟಾದರು.

ಕೆಲ ಹೊತ್ತಿನ ನಂತರ ಅಂಪೈರ್‍ಗಳು ವಾತಾವರಣ ಬ್ಯಾಟಿಂಗ್ ಗೆ ಯೋಗ್ಯವಲ್ಲ ಎಂಬುದನ್ನು ಅರಿತು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪಂದ್ಯವನ್ನು ತಡೆಹಿಡಿದರು.

ನ್ಯೂಜಿಲೆಂಡ್ ಹಾಗೂ ಬಾಂಗ್ಲಾ ದೇಶ ವಿರುದ್ಧ ಟ್ವೆಂಟಿ-20 ಪಂದ್ಯ ಹಾಗೂ ಜನವರಿ 19 ರಂದು ನಡೆದ ಪಂದ್ಯವು ಕೂಡ ಸೂರ್ಯನ ಬೆಳಕಿನಿಂದ ಆಟವನ್ನು ಸ್ಥಗಿತಗೊಳಿಸಲಾಗಿತ್ತು.

Facebook Comments

Sri Raghav

Admin