ತ್ರೈಮಾಸಿಕ ವಹಿವಾಟಿನಲ್ಲಿ ವಿಜಯಾ ಬ್ಯಾಂಕ್‍ಗೆ 143 ಕೋಟಿ ಲಾಭ

ಈ ಸುದ್ದಿಯನ್ನು ಶೇರ್ ಮಾಡಿ

Vijaya-Bank--01
ಬೆಂಗಳೂರು, ಜ.23- ದೇಶದ ಪ್ರತಿಷ್ಠಿತ ವಿಜಯಾ ಬ್ಯಾಂಕ್ ಡಿ.31ಕ್ಕೆ ಅಂತ್ಯಗೊಂಡಂತೆ ತ್ರೈಮಾಸಿಕ ವಹಿವಾಟಿನಲ್ಲಿ 143 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ.

ಕಳೆದ ಸಾಲಿಗೆ ಹೋಲಿಸಿದರೆ ಇದೇ ಅವಧಿಯಲ್ಲಿ ಒಟ್ಟಾರೆ ವಹಿವಾಟಿನಲ್ಲಿ ಶೇ.23ರಷ್ಟು ಹೆಚ್ಚಳ ಕಂಡಿದ್ದು, ಹೂಡಿಕೆಯಲ್ಲೂ ಶೇ.26ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಶಂಕರನಾರಾಯಣನ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.

ಸಾಲದ ಮೇಲಿನ ಬಡ್ಡಿ ಆದಾಯ 1187 ಕೋಟಿ ದಾಖಲಾಗಿದ್ದು, ಎನ್‍ಪಿಎ ಕೂಡ 614 ಕೋಟಿ ಇಳಿದಿದೆ ಎಂದರು.

ಗ್ರಾಹಕ ಸ್ನೇಹಿಯಾಗಿ ಬ್ಯಾಂಕ್ ಮತ್ತಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಬ್ಯಾಂಕಿನ ಪ್ರಗತಿಗೆ ಸಿಬ್ಬಂದಿಗಳ ಸಹಕಾರವನ್ನು ಸ್ಮರಿಸಿ ಅಭಿನಂದಿಸಿದರು. ಕಾರ್ಯಕಾರಿ ನಿರ್ದೇಶಕರಾದ ಮುರಳಿ ರಾಮಸ್ವಾಮಿ, ವೈ.ನಾಗೇಶ್ವರರಾವ್ ಮತ್ತಿತರರು ಹಾಜರಿದ್ದರು.

vijaya-Maban

Facebook Comments

Sri Raghav

Admin