ಕೆಜಿಎಫ್‍ನಲ್ಲಿ ಮತ್ತೆ ಕಂಪಿಸಿದ ಭೂಮಿ..!

ಈ ಸುದ್ದಿಯನ್ನು ಶೇರ್ ಮಾಡಿ

KGF-01

ಕೆಜಿಎಫ್, ಜ.24- ಬಹಳ ವರ್ಷಗಳ ನಂತರ ನಗರದಲ್ಲಿ ಮತ್ತೊಮ್ಮೆ ಭೂಮಿ ನಡುಗಿದ ಘಟನೆ ವರದಿಯಾಗಿದೆ. ಚಿನ್ನದ ಗಣಿ ನಡೆಯುತ್ತಿದ್ದ ಸಂದರ್ಭದಲ್ಲಿ ಸರ್ವೆಸಾಮಾನ್ಯವಾಗಿದ್ದ ಭೂ ಕಂಪನ, ಚಿನ್ನದ ಗಣಿ ಮುಚ್ಚಿದ ಮೇಲೆ ಕಡಿಮೆಯಾಗಿತ್ತು. ಈಗ ಮತ್ತೆ ಎರಡು ಬಾರಿ ಭೂಮಿ ನಡುಗಿದೆ.

ನಗರದಲ್ಲಿ ರಾಕ್ ಬಸ್ರ್ಟ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಕ್ರಿಯೆ ಚಿನ್ನದ ಗಣಿ ನಡೆಯುತ್ತಿದ್ದ ಸಂದರ್ಭದಲ್ಲಿ ಕಲ್ಲುಗಳ ಸ್ಥಾನ ಪಲ್ಲಟದಿಂದ ಹೆಚ್ಚಾಗಿತ್ತು.

ಗಣಿ ಮುಚ್ಚಿದ ಮೇಲಿ ಈ ಕ್ರಿಯೆ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಭೂ ಕಂಪನ ಅನುಭವ ಜನತೆಗೆ ಆಗಿರಲಿಲ್ಲ.

ಭೂ ಕಂಪನದಿಂದ ಯಾವುದೇ ಅನಾಹುತ ಎಲ್ಲೂ ನಡೆದಿಲ್ಲ. ಬಹುದಿನಗಳ ನಂತರ ಮತ್ತೆ ಭೂ ಕಂಪನ ಆಗಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.

Facebook Comments

Sri Raghav

Admin