ನಾರಾಯಣ ನೇತ್ರಾಲಯಕ್ಕೆ ಶಾಸಕ ಆನಂದ್‍ಸಿಂಗ್ ಶಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Anand-Singh-01
ಬೆಂಗಳೂರು, ಜ.24- ಶಾಸಕರ ಹೊಡೆದಾಟದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಆನಂದ್‍ಸಿಂಗ್ ಕಣ್ಣಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆಯಲ್ಲಿ ಅವರನ್ನು ನಾರಾಯಣ ನೇತ್ರಾಲಯಕ್ಕೆ ಶಿಫ್ಟ್ ಮಾಡಲಾಗಿದೆ.

ಶೇಷಾದ್ರಿಪುರದ ಅಪಲೋ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಆನಂದ್‍ಸಿಂಗ್ ಕಣ್ಣಿಗೆ ಬಲವಾಗಿ ಪೆಟ್ಟಾಗಿದ್ದು, ಇನ್ನೂ ಊತ ಕಡಿಮೆಯಾಗಿಲ್ಲ.

ಜತೆಗೆ ರಕ್ತ ಹೆಚ್ಚು ಗಟ್ಟಿಯಾಗಿರುವುದರಿಂದ ಕಣ್ಣಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸ್ಥಳಾಂತರಿಸಲಾಗಿದೆ.

ಆನಂದ್‍ಸಿಂಗ್ ಕುಟುಂಬದವರು ಅವರ ಕಣ್ಣಿನ ಚಿಕಿತ್ಸೆಯನ್ನು ನಾರಾಯಣ ನೇತ್ರಾಲಯದ ಡಾ.ಭುಜಂಗಶೆಟ್ಟಿ ಅವರಲ್ಲಿ ಮಾಡಿಸಲು ಇಚ್ಛಿಸಿರುವುದರಿಂದ ಅಪಲೋ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆ ಸೌಲಭ್ಯವಿದ್ದರೂ ನಾರಾಯಣ ನೇತ್ರಾಲಯಕ್ಕೆ ಆನಂದ್‍ಸಿಂಗ್ ಅವರನ್ನು ಶಿಫ್ಟ್ ಮಾಡಲಾಗಿದೆ.

Facebook Comments

Sri Raghav

Admin