ಅಥಣಿ ಶಾಸಕ ಮಹೇಶ್ ಕಮಟಹಳ್ಳಿ ನಾಪತ್ತೆ, ಹುಡುಕಿಕೊಟ್ಟವರಿಗೆ 10,000 ಬಹುಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

Mahesh-Kamatakkai--01

ಅಥಣಿ,ಜ.24- ಕಾಂಗ್ರೆಸ್ ಶಾಸಕ ಮಹೇಶ್ ಕಮಟಳ್ಳಿ ಅವರನ್ನು ಹುಡುಕಿಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ ವೈರಲ್ಲಾಗಿದೆ.
ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಿಳ್ಳಿ ಅವರು ಹಲವಾರು ದಿನಗಳಿಂದ ಕಾಣೆಯಾಗಿದ್ದು ಅವರನ್ನು ಹುಡುಕಿಕೊಟ್ಟವರಿಗೆ ಹತ್ತು ಸಾವಿರ ರೂ.ಬಹುಮಾನ ಕೊಡುವುದಾಗಿ ಎಂಬ ಪೋಸ್ಟ್ ಗಳು ಹರಿದಾಡುತ್ತಿವೆ.

ಶಾಸಕರು ಅಧಿಕಾರಕ್ಕಾಗಿಯೋ ಅಥವಾ ಹಣದಾಸೆಗಾಗಿ ಯಾವುದೇ ಆಸೆಗೆ ಒಳಗಾಗಿ ಈ ರೀತಿಯಾಗಿ ಕ್ಷೇತ್ರವನ್ನು ತೊರೆದು ಹೋಗಿರುವುದು ನಾಚಿಕೆಗೇಡು. ಈ ರೀತಿಯಾಗಿ ಜನತೆಯನ್ನು ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಅಳಲನ್ನು ಲೆಕ್ಕಿಸದೆ ಹೋಗಿರುವುದು ಖೇದಕರ ಸಂಗತಿ.

ತಾಲೂಕು ಒಂದೆಡೆ ಬರಗಾಲದ ಬವಣೆಯಲ್ಲಿ ಮುಳುಗಿದೆ. ಇನ್ನೊಂದೆಡೆ ರೈತ ಸಂಕಷ್ಟದಲ್ಲಿದ್ದಾರೆ.  ನಿತ್ಯ ಹತ್ತು ಹಲವಾರು ಅಭಿವೃದ್ಧಿ ಕಾಮಗಾರಿಗಳತ್ತ ಗಮನ ಹರಿಸಬೇಕಾದ ಶಾಸಕರೇ ಕಾಣದಾಗಿರುವುದು ಕ್ಷೇತ್ರದ ಜನತೆಗೆ ನೋವನ್ನುಂಟು ಮಾಡಿದೆ.

ಕ್ಷೇತ್ರ ಯಜಮಾನನಿಲ್ಲದ ಮನೆಯಂತಾಗಿದೆ. ಇನ್ನಾದರೂ ಶಾಸಕರು ಮತ ಕ್ಷೇತ್ರದತ್ತ ಗಮನ ಹರಿಸಿ ಇತ್ತ ಬೇಗನೆ ಮರಳಲಿ ಎನ್ನುವುದು ಕ್ಷೇತ್ರದ ಜನತೆಯ ಆಶಯವಾಗಿದೆ.

ನೀವು ನಿಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಆಗಿರಲಿ ಕ್ಷೇತ್ರದ ಹಿತಕ್ಕಾಗಿಯೇ ಆಗಿರಲಿ ಯಾವುದೇ ಕಾರಣಕ್ಕಾಗಿ ತಾವು ಹೋಗಿರಲಿ ಬೇಗನೆ ನಿಮ್ಮ ಮತಕ್ಷೇತ್ರದತ್ತ ಮರಳಿ ನೋಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

Facebook Comments

Sri Raghav

Admin