ಶಾಸಕ ರೇಣುಕಾಚಾರ್ಯಗೆ ಬಿಎಸ್‍ವೈ ಹಿಗ್ಗಾಮುಗ್ಗಾ ಕ್ಲಾಸ್..!

ಈ ಸುದ್ದಿಯನ್ನು ಶೇರ್ ಮಾಡಿ

Renukacharya

ಬೆಂಗಳೂರು,ಜ.24-ಸಚಿವ ಸಾ.ರಾ.ಮಹೇಶ್ ಹಾಗೂ ಐಪಿಎಸ್ ಅಧಿಕಾರಿ ದಿವ್ಯಾ ಗೋಪಿನಾಥ್ ಮಧ್ಯೆ ನಡೆದ ವಾಗ್ವಾದದಲ್ಲಿ ಮೂಗು ತೂರಿಸಿದ ಬಿಜೆಪಿ ಶಾಸಕ ಎಸ್.ಪಿ. ರೇಣುಕಾಚಾರ್ಯಗೆ ರಾಜ್ಯಾಧ್ಯಕ್ಷ ಯಡಿ ಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಕ್ರಿಯಾಸಮಾಧಿ ವೇಳೆ ಸಚಿವ ಸಾ.ರಾ. ಮಹೇಶ್ ಮತ್ತು ದಿವ್ಯಾ ಗೋಪಿನಾಥ್ ವಾಗ್ವಾದ ನಡೆದಾಗ ಸಚಿವರು ಅವಾಜ್ ಹಾಕಿದ್ದರು. ಇದರಿಂದ ನೊಂದ ದಿವ್ಯ ಕಣ್ಣೀರು ಹಾಕಿದ್ದರು.

ಈ ಸಂದರ್ಭದಲ್ಲಿ ಎಂ.ಪಿ.ರೇಣುಕಾಚಾರ್ಯ ದಿವ್ಯಾ ಅವರನ್ನು ಸಮಾಧಾನಪಡಿಸಿದ್ದರು. ಈ ಕೆಲಸಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಿ.ಎಸ್.ಯಡಿಯೂರಪ್ಪ ಇಬ್ಬರ ನಡುವೆ ಗಲಾಟೆ ನಡೆಯುವಾಗ ಮಧ್ಯಪ್ರವೇಶಿಸಿದ ರೇಣುಕಾಚಾರ್ಯ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ನಿಮಗೆ ಅಲ್ಲಿ ಏನು ಕೆಲಸವಿತ್ತು? ನೀವೇಕೆ ಅವರಿಬ್ಬರ ಗಲಾಟೆಯಲ್ಲಿ ಭಾಗಿಯಾದಿರಿ? ಎಂದು ಪ್ರಶ್ನಿಸಿದ್ದಾರೆ. ಸಚಿವ ಸಾ.ರಾ.ಮಹೇಶ್‍ಗೆ ಯಾರೊಂದಿಗೆ ಹೇಗೆ ನಡೆದುಕೊಳ್ಳ ಬೇಕೆಂಬ ಬಗ್ಗೆ ತಿಳಿದಿಲ್ಲ.

ಕೊಡಗು ಜಿಲ್ಲೆಯಲ್ಲಿ ಉಂಟಾದ ಭೀಕರ ಪರಿಸ್ಥಿತಿ ಅವಲೋಕನಕ್ಕೆ ಆಗಮಿಸಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಹೇಶ್ ಹೇಗೆ ನಡೆದುಕೊಂಡಿದ್ದರು ಎಂಬುದು ನಿಮಗೂ ಗೊತ್ತಿದೆ. ಅಂಥವರ ಪರ ನಿಂತಿರುವುದು ಸರಿಯೇ ಎಂದು ಕಿಡಿಕಾರಿದ್ದಾರೆ.

ಇನ್ನು ಮುಂದೆ ಯಾರ ವಿಚಾರದಲ್ಲೂ ಮೂಗು ತೂರಿಸುವ ಕೆಲಸ ಮಾಡಬೇಡಿ. ವಿನಾಕಾರಣ ಇಂಥ ಪ್ರಕರಣಗಳಲ್ಲಿ ಮಾಧ್ಯಮಗಳ ಮುಂದೆ ಬರಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಅಥವಾ ಕಾಂಗ್ರೆಸ್ ನಾಯಕರ ಮಧ್ಯೆ ನಡೆಯುವ ಜಗಳ ಗಳಲ್ಲಿ ತಾವು ತಲೆ ಹಾಕುವುದು ಬೇಡ. ಸರ್ಕಾರದ ಅಂಗಗಳೆಂದೇ ಹೇಳಲಾಗುವ ಸಚಿವರು ಯಾವ ರೀತಿ ವರ್ತಿಸುತ್ತಿದ್ದಾರೆ ಎಂಬುದು ಅರ್ಥವಾಗಬೇಕಿದೆ. ಮಧ್ಯೆ ತಲೆ ಹಾಕುವುದು ಬೇಡ ಎಂದು ಪಾಠ ಹೇಳಿದ್ದಾರೆ.

Facebook Comments