ಕೇವಲ13 ರೂ. ಸಾಲಮನ್ನಾ ಮಾಡಿದ ಸರ್ಕಾರ, ರೈತನಿಗೆ ದಿಗ್ಬ್ರಾಂತಿ..!

ಈ ಸುದ್ದಿಯನ್ನು ಶೇರ್ ಮಾಡಿ

Formenr--01

ಭೂಪಾಲ್,ಜ.24- ರೈತರ ಸಾಲಮನ್ನಾ ಅಸ್ತ್ರದಿಂದ ಗದ್ದುಗೆ ಹಿಡಿದ ಕಾಂಗ್ರೆಸ್‍ನ ಮುಖ್ಯಮಂತ್ರಿ ಕಮಲ್‍ನಾಥ್ ಕೈಗೊಂಡ ಸಾಲಮನ್ನಾ ಕ್ರಮದಿಂದ ರೈತರೊಬ್ಬರ ಸಾಲ ಮನ್ನಾ ಆಗಿದ್ದೂ ಅದರ ಮೊತ್ತ ಎಷ್ಟು ಎಂಬುದು ಮಾತ್ರ ದಿಗ್ಬ್ರಾಂತಿ ಮೂಡಿಸಿದೆ.

ಮಧ್ಯಪ್ರದೇಶದ ರೈತ ಶಿವಲಾಲ್ ಕಠಾರಿಯಾ ಅವರು ಮಾಡಿದ್ದ 23,815 ರೂ. ಸಾಲಮನ್ನಾ ಆಗಬೇಕಿತ್ತು. ಆದರೆ ಸಾಲಮನ್ನಾ ಆಗಿರುವ ಮೊತ್ತ ಕೇವಲ 13 ರೂ. ಮಾತ್ರ. ಇದರಿಂದ ತನ್ನ ಸಾಲ ತೀರಲಿದೆ ಎಂದು ಹಂಬಲಿಸಿದ್ದ ರೈತ ಕಂಗಾಲಾಗಿದ್ದಾನೆ.

ಸಾಲಮನ್ನಾ ಪಟ್ಟಿಯಲ್ಲಿ ಇವರ ಹೆಸರಿನ ಮುಂದೆ ಕೇವಲ 13 ರೂ. ಸಾಲಮನ್ನಾ ಎಂದು ನಮೂದಾಗಿದೆ. ಇದನ್ನು ಕಂಡ ರೈತ ಸರ್ಕಾರ 2 ಲಕ್ಷ ರೂ.ವರೆಗಿನ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿತ್ತು.

ಆದರೆ ನನ್ನ ಸಾಲ ಕೇವಲ 23.815 ರೂ ಮಾತ್ರ ಅದು ಸಹ ಪೂರ್ಣವಾಗಿ ಮನ್ನವಾಗದೆ 13 ರೂ. ಮನ್ನವಾಗಿರುವುದು ಯಾವ ನ್ಯಾಯ ಎಂದು ಕಿಡಿಕಾರಿದ್ದಾರೆ.

Facebook Comments