ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ನಾಲ್ವರು ವಿಶೇಷ ವ್ಯಕ್ತಿಗಳು..!?

ಈ ಸುದ್ದಿಯನ್ನು ಶೇರ್ ಮಾಡಿ

INAನವದೆಹಲಿ,ಜ.24- ಜನವರಿ 26ರಂದು ನಡೆಯಲಿರುವ 70ನೇ ಗಣರಾಜ್ಯೋತ್ಸವದ ಪರೇಡ್‍ನಲ್ಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ವರು ವಿಶೇಷ ವ್ಯಕ್ತಿಗಳು ಪಾಲ್ಗೊಳ್ಳುತ್ತಿದ್ದಾರೆ.

ಈ ವಿಶೇಷ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸುಭಾಷ್ ಚಂದ್ರಬೋಸ್ ನೇತೃತ್ವದ ಇಂಡಿಯನ್ ನ್ಯಾಷನಲ್ ಆರ್ಮಿಯ (ಐಎನ್‍ಎ) ಭಾಗವಾಗಿದ್ದವರು.

ವಿಶೇಷವೆಂದರೆ ಈ ನಾಲ್ವರು ಸುಮಾರು 97ರಿಂದ 100 ವರ್ಷ ವಯಸ್ಸಿನವರಾಗಿದ್ದಾರೆ. ಅವರಲ್ಲಿ ಹಿರಿಯರೆಂದರೆ 100 ವರ್ಷ ವಯಸ್ಸಿನ ಹರಿಯಾಣದ ಮನೆಸಾರ್ ನಿವಾಸಿ ಭಗ್ಮಾಲ್. ಇವರು 1942ರಲ್ಲಿ ಐಎನ್‍ಎಗೆ ಸೇರಿದ್ದರು.

ಅಲ್ಲದೆ ಪಂಚಕುಲದ ಲಲ್ತಿ ರಾಮ್ (98), ಹರಿಯಾಣದ ನಾರ್ನಾಲ್‍ನ ಹಿರಾ ಸಿಂಗ್ (97) ಮತ್ತು ಚಂಡೀಗಢದ ಪರ್ಮಾನಂದ ಯಾದವ್ ಕೂಡ ಪರೇಡ್‍ನಲ್ಲಿ ಭಾಗವಹಿಸಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪರೇಡ್‍ನ ಉಪ ಕಮಾಂಡರ್ ಮೇಜರ್ ಜನರಲ್ ರಾಜ್‍ಪಾಲ್ ಪೂನಿಯಾ , ಇದೇ ಮೊದಲ ಸಲ ಐಎನ್‍ಎದಲ್ಲಿ ಸೈನಿಕರಾಗಿದ್ದವರು ಪರೇಡ್‍ನಲ್ಲಿ ಭಾಗಿಯಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದಿದ್ದಾರೆ.

ಪರೇಡ್‍ನಲ್ಲಿ ಐಎನ್‍ಎನಿಂದ ಈ ನಾಲ್ವರು ಮಾತ್ರ ಯಾಕೆ ಭಾಗವಹಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಪೂನಿಯಾ, ಐಎನ್‍ಎನಲ್ಲಿ ಸೇವೆ ಸಲ್ಲಿಸಿದ್ದ ಸೈನಿಕರನ್ನು ಗುರುತಿಸುವುದು, ಅವರಲ್ಲಿ ಯಾರ್ಯಾರು ಬದುಕ್ಕಿದ್ದಾರೆ ಎಂಬುದನ್ನು ಕಂಡುಹಿಡಿಯುವುದು ಕಷ್ಟಕರ ಎಂದಿದ್ದಾರೆ.

ಇನ್ನು ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್?ಎ) 1942ರಲ್ಲಿ ರಾಸ್ ಬಿಹಾರಿ ಬೋಸ್ ಅವರಿಂದ ಅಸ್ತಿತ್ವಕ್ಕೆ ಬಂದಿತ್ತು. ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಐಎನ್‍ಎ ನೇತೃತ್ವ ವಹಿಸಿದ್ದರು.

Facebook Comments