ಪಕ್ಷಬೇಧ ಮರೆತು ಸಿಎಂ ಮಗನ ಸಿನಿಮಾ ನೋಡಿದ ಆಡಳಿತ-ವಿಪಕ್ಷ ನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

Sinimaa--01

ಬೆಂಗಳೂರು. ಜ. 24 : ಕರ್ನಾಟಕದಾದ್ಯಂತ ಅದ್ದೂರಿಯಾಗಿ “ಸೀತಾರಾಮ ಕಲ್ಯಾಣ” ಚಿತ್ರ ನಾಳೆ ಬಿಡುಗಡೆ ಆಗುತ್ತಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿರ್ಮಾಣದಲ್ಲಿ ಸಿದ್ಧವಾಗಿರುವ ಈ “ಸೀತಾರಾಮ ಕಲ್ಯಾಣ” ಚಿತ್ರದ ಪೂರ್ವ ಭಾವಿ ಪ್ರದರ್ಶನದಲ್ಲಿ ಎಲ್ಲಾ ಪಕ್ಷಗಳ ಶಾಸಕರಾದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ , ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಶಾಸಕರಾದ ಕೆ.ಎಸ್. ಈಶ್ವರಪ್ಪ , ಸಚಿವರಾದ ಆರ್.ವಿ. ದೇಶಪಾಂಡೆ , ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವು ನಾಯಕರು ಒರಾಯನ್ ಮಾಲ್ ನ ಪಿ.ವಿ.ಆರ್ ನಲ್ಲಿ ಚಿತ್ರವನ್ನು ವೀಕ್ಷಿಸಿದ್ದಾರೆ.

ಇದೇ ವೇಳೆ ಆಪರೇಷನ್ ಕಮಲ, ರಾಜಕೀಯ ವೈಷಮ್ಯ ಮರೆತು ನಾಯಕರು ಹರಟೆಯಲ್ಲಿ ತೊಡಗಿಕೊಂಡಿದ್ದು ವಿಶೇಷವಾಗಿತ್ತು. ಟ್ರೇಲರ್ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸೀತಾರಾಮ ಕಲ್ಯಾಣ ನಾಳೆ 300ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

‘ಜಾಗ್ವಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ನಿಖಿಲ್. ಆದರೆ, ಸಿನಿಮಾ ನೀರಿಕ್ಷೆಯ ಮಟ್ಟ ತಲುಪಲು ವಿಫಲವಾಗಿತ್ತು. ಈ ಚಿತ್ರ ತೆರೆಕಂಡು ಬರೋಬ್ಬರಿ 3 ವರ್ಷಗಳಾಗಿವೆ. ಈಗ ಅವರು ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

ಟೀಸರ್, ಟ್ರೈಲರ್ನಲ್ಲಿ ‘ಸೀತಾರಾಮ’ ಹೇಗಿರಲಿದ್ದಾನೆ ಎನ್ನುವ ಚಿಕ್ಕ ಝಲಕ್ ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕ ಎ. ಹರ್ಷ. ಈ ಮೊದಲಿನ ಚಿತ್ರದಲ್ಲಿ ಪಕ್ಕಾ ಆ್ಯಕ್ಷನ್ ಮೆರೆದಿದ್ದ ನಿಖಿಲ್ ಈ ಬಾರಿ, ಮಾಸ್ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಹಿಡಿದು ಬಂದಿದ್ದಾರೆ.

ಅನಿತಾ ಕುಮಾರಸ್ವಾಮಿ ನಿರ್ಮಾಣದ ಈ ಚಿತ್ರಕ್ಕೆ ಸುನಿಲ್ ಗೌಡ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್. ಸ್ವಾಮಿ ಜೆ ಕ್ಯಾಮರಾ ಕೈಚಳಕ ಹೊಂದಿರುವ ಈ ಚಿತ್ರಕ್ಕೆ ಅನೂಪ್ ರುಬೆನ್ಸ್ ಸಂಗೀತ ನೀಡಿದ್ದಾರೆ. ರಾಮ್ ಲಕ್ಷಣ್ ಸಾಹಸ, ಗಣೇಶ್ ಸಂಕಲನ ಚಿತ್ರಕ್ಕಿದೆ. ಈ ಚಿತ್ರಕ್ಕೆ ‘ಜಯಣ್ಣ ಕಂಬೈನ್ಸ್’ ಹಂಚಿಕೆದಾರರು.

WhatsApp Image 2019-01-24 at 8.29.53 PM(1)

WhatsApp Image 2019-01-24 at 8.30.00 PM

WhatsApp Image 2019-01-24 at 8.30.01 PM(1)

WhatsApp Image 2019-01-24 at 8.30.02 PM

 

Facebook Comments

Sri Raghav

Admin