ಸಿದ್ದಗಂಗಾ ಶ್ರೀ ಲಿಂಗೈಕ್ಯರಾದ ಬಳಿಕ ನಾಪತ್ತೆಯಾದ ‘ಭೈರ’

ಈ ಸುದ್ದಿಯನ್ನು ಶೇರ್ ಮಾಡಿ

Dog--01

ತುಮಕೂರು, ಜ.24- ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಮನುಕುಲ ಮಾತ್ರವಲ್ಲದೆ ಮೂಕ ಪ್ರಾಣಿಗಳು ಕೂಡ ತುಂಬ ಹೆಚ್ಚಾಗಿ ಹಚ್ಚಿಕೊಂಡಿದ್ದವು. ಮಠದಲ್ಲಿ ಅವರೊಂದಿಗೆ ಸದಾ ಓಡಾಡುತ್ತಿದ್ದ ಭೈರ ಎಂಬ ಶ್ವಾನ, ಸ್ವಾಮೀಜಿಗಳು ಲಿಂಗೈಕ್ಯರಾದ ಬಳಿಕ ಕಾಣೆಯಾಗಿದ್ದಾನೆ.

ಇತ್ತೀಚೆಗೆ ಸ್ವಾಮೀಜಿ ಆಸ್ಪತ್ರೆಗೆ ದಾಖಲಾದ ದಿನದಿಂದ ಭೈರ ಶ್ರೀಗಳನ್ನು ಕಾಣದೆ ಕಂಗಾಲಾಗಿದ್ದ. ಶ್ರೀಗಳು ಆಸ್ಪತ್ರೆಯಲ್ಲಿದ್ದಾಗಲೂ ಭೈರನ ಬಗ್ಗೆ ಕಿರಿಯ ಶ್ರೀಗಳಲ್ಲಿ ವಿಚಾರಿಸುತ್ತಿದ್ದರು.

ಆದರೆ, ಭೈರ ಮಠದಲ್ಲಿ ಶ್ರೀಗಳಿಲ್ಲದ್ದನ್ನು ಕಂಡು ಅಳುತ್ತಿದ್ದ. ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ಬಂದಾಗ ಅವರನ್ನು ಕಾಣದೆ ಮೂರು ದಿನ ಮುನ್ನವೇ ಆಹಾರ ತ್ಯಜಿಸಿದ್ದ. ಏನು ಕೊಟ್ಟರೂ ತಿನ್ನುತ್ತಿರಲಿಲ್ಲ. ಶ್ರೀಗಳಿಗಾಗಿ ಮಠದ ಸುತ್ತಮುತ್ತ ಓಡಾಡುತ್ತಿದ್ದ.

ಶ್ರೀಗಳು ಲಿಂಗೈಕ್ಯರಾಗುವ ಮೂರು ದಿನಗಳ ಹಿಂದೆ ಭೈರ ಅನ್ನ, ಆಹಾರ ತ್ಯಜಿಸಿ ಅವರು ಲಿಂಗೈಕ್ಯರಾದ ದಿನದಿಂದ ನಾಪತ್ತೆಯಾಗಿದ್ದಾನೆ ಎಂದು ಮಠದ ಸಿಬ್ಬಂದಿ ಹೇಳಿದ್ದಾರೆ.

ಬಹುಶಃ ಈ ನಾಯಿ ಕೂಡ ಸಾವನ್ನಪ್ಪಿರುತ್ತದೆ. ಶ್ರೀಗಳು ಹೊರಗೆ ಹೋಗಿದ್ದಾಗ, ಭಕ್ತಾದಿಗಳಿಗೆ ದರ್ಶನ ನೀಡದಾಗ ಭೈರ ಶ್ರೀಗಳ ಜಾಗದಲ್ಲಿ ಹೋಗಿ ಅಲ್ಲಿ ಕುಳಿತು ಅಳುತ್ತಿತ್ತು ಎಂದು ಮಠದ ಸಿಬ್ಬಂದಿ ಹೇಳಿದ್ದರು.

ಅಲ್ಲದೇ ಶ್ರೀಗಳು ಎಲ್ಲಾದರೂ ಪರಿಶೀಲನೆ ಮಾಡಲು ಹೋಗುವಾಗ ಭೈರ ಕೂಡ ಅವರ ಜೊತೆ ಹೋಗುತಿತ್ತು” ಎಂದು ಹೇಳಿದ್ದಾರೆ.

Facebook Comments