2ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮತದಾನ ಹಕ್ಕು ಬೇಡ

ಈ ಸುದ್ದಿಯನ್ನು ಶೇರ್ ಮಾಡಿ

Baba-Ramadev

ಆಲಿಘಡ,ಜ.24- ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರಿಗೆ ಮತದಾನದ ಹಕ್ಕನ್ನು ನೀಡಬಾರದು ಎಂದು ಜನಂಸಂಖ್ಯೆ ನಿಯಂತ್ರಣಕ್ಕೆ ತಮ್ಮದೇ ಸೂತ್ರ ನೀಡಿದ್ದ ಯೋಗ ಗುರು ಬಾಬಾ ರಾಮ್‍ದೇವ್ ಮತ್ತೆ ಪುನರುಚ್ಛರಿಸಿದ್ದಾರೆ.

ಉತ್ತರಪ್ರದೇಶದ ಆಲಿಘಡದಲ್ಲಿ ನಡೆದ ಪತಂಜಲಿ ಪರಿಧಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಅಂಥವರಿಗೆ ಚುನಾವಣೆಗೆ ಸ್ಪರ್ಧಿಸುವುದನ್ನೂ ತಡೆಯಬೇಕು.

ಸರ್ಕಾರಿ ಶಾಲೆ, ಆಸ್ಪತ್ರೆಗಳಿಗೆ ಅವಕಾಶ ನೀಡಬಾರದು. ಜತೆಗೆ ಸರ್ಕಾರಿ ಉದ್ಯೋಗವನ್ನೂ ನೀಡಬಾರದು. ಇದರಿಂದ ಸಹಜವಾಗಿ ಜನಸಂಖ್ಯಾ ನಿಯಂತ್ರಣವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಭಾರತದ ಜನಸಂಖ್ಯೆ ನಿಯಂತ್ರಣವಾಗಬೇಕಾದರೆ ಹಿಂದೂ ಆಗಲಿ, ಮುಸ್ಲಿಂ ಆಗಲೀ, ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮತದಾನ, ಉದ್ಯೋಗ ಹಾಗೂ ಚಿಕಿತ್ಸೆ ಸೌಲಭ್ಯಗಳಿಂದ ದೂರವಿಡಬೇಕು. ಹೀಗಾದಾಗ ಮಾತ್ರ ಜನಸಂಖ್ಯೆ ತಹಬದಿಗೆ ಬರುತ್ತದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್‍ನಲ್ಲಿ ಇಂತಹುದೇ ಹೇಳಿಕೆ ನೀಡಿದ್ದ ರಾಮ್‍ದೇವ್ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮತದಾನದ ಹಕ್ಕು ಹಿಂಪಡೆಯಬೇಕು. ಬ್ರಹ್ಮಚಾರಿಗಳಿಗೆ ವಿಶೇಷ ಪುರಸ್ಕಾರವನ್ನೂ ನೀಡಬೇಕು ಎಂದು ಹೇಳಿದ್ದರು.

Facebook Comments

Sri Raghav

Admin