ಇಂದಿನ ಪಂಚಾಗ ಮತ್ತು ರಾಶಿಫಲ (24-01-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹೆಚ್ಚು ಸಿಟ್ಟಿನಿಂದ ದುರ್ಯೋಧನನು ತನ್ನ ಇಡೀ ಕುಲಕ್ಕೇ ನಾಶವನ್ನುಂಟು ಮಾಡಿದನು. ಸಿಟ್ಟಿಲ್ಲದೆ ಶಾಂತತೆಯಿಂದಲೇ ಹೆಂಡತಿಯನ್ನು ಹೊರಗೆ ಅಟ್ಟಿ ಶ್ರೀರಾಮನು ವ್ಯಥೆಪಟ್ಟನು.

Rashi-Bhavishya--01

# ಪಂಚಾಂಗ : ಗುರುವಾರ, 24.01.2019
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.17
ಚಂದ್ರ ಉದಯ ಸಂ.09.39/ ಚಂದ್ರ ಅಸ್ತ ಬೆ.10.15
ವಿಲಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ಚತುರ್ಥಿ (ರಾ.08.54)
ನಕ್ಷತ್ರ: ಪೂರ್ವಫಲ್ಗುಣಿ (ಸಾ.06.21) / ಯೋಗ: ಶೋಭನ (ಸಾ.06.11)
ಕರಣ: ಭವ-ಬಾಲವ (ಬೆ.10.24-ರಾ.08.54)
ಮಳೆ ನಕ್ಷತ್ರ: ಶ್ರವಣ (ಪ್ರ.ಮ.03.42) / ಮಾಸ: ಮಕರ / ತೇದಿ: 11

# ರಾಶಿ ಭವಿಷ್ಯ
ಮೇಷ: ಮಿತಿಮೀರಿದ ಆಲೋಚನೆಗಳಿಂದ ಕೆಲಸ- ಕಾರ್ಯದಲ್ಲಿ ಅಪಯಶಸ್ಸು ಉಂಟಾಗುವ ಸಾಧ್ಯತೆಯಿದೆ
ವೃಷಭ: ಸಜ್ಜನರ ಸಂಪರ್ಕ ನಿಮ್ಮ ಮನಸ್ಸಿನ ತಳಮಳವನ್ನು ಕಡಿಮೆ ಮಾಡುವುದು
ಮಿಥುನ: ತಾಯಿಯ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು
ಕಟಕ: ಆದಾಯದ ಮುಕ್ಕಾಲು ಭಾಗವನ್ನು ಪರೋಪಕಾರಕ್ಕೆ ಮೀಸಲಿಡಲು ನಿರ್ಧರಿಸುವಿರಿ
ಸಿಂಹ: ನಿರುದ್ಯೋಗಿಗಳಿಗೆ ಉತ್ತಮ ನೌಕರಿ ದೊರೆಯಲಿದೆ
ಕನ್ಯಾ: ಲೇವಾದೇವಿ ವ್ಯವ ಹಾರದಲ್ಲಿ ಎಚ್ಚರಿಕೆ ವಹಿಸಿ
ತುಲಾ: ಮಾತನಾಡುವಾಗ ಸಂದರ್ಭದ ಅರಿವಿರಲಿ
ವೃಶ್ಚಿಕ: ಅರ್ಥವಿಲ್ಲದ ತಿರುಗಾಟಕ್ಕೆ ವಿರಾಮ ಹಾಕಿ
ಧನುಸ್ಸು: ನಿಮ್ಮ ಮೇಲೆ ಎಲ್ಲರ ದೃಷ್ಟಿ ಇರುವುದು
ಮಕರ: ಮುಖ್ಯ ಶುಭವಾರ್ತೆಯನ್ನು ಕೇಳುವಿರಿ
ಕುಂಭ: ಹಿರಿಯರ ಸಲಹೆಗಳನ್ನು ಸ್ವೀಕರಿಸಿ
ಮೀನ: ವಸ್ತುಸ್ಥಿತಿಯ ಬಗ್ಗೆ ಚಿಂತಿಸುವುದು ಒಳಿತು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments