ವೆನಿಜುವೆಲಾದಲ್ಲಿ ಹಿಂಸಾಚಾರಕ್ಕೆ 15 ಮಂದಿ ಬಲಿ, ಹಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Venezuelansಕಾರಾಕಾಸ್, ಜ.24-ವೆನಿಜುವೆಲಾದ ಎಡ ಪಂಥೀಯ ನಾಯಕ ನಿಕೋಲಾಸ್ ಮಡುರೋ ವಿರುದ್ಧ ಯೋಧರು ದಂಗೆ ಎದ್ದ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ತೀವ್ರ ಗಾಯಗೊಂಡಿರುವ ಘಟನೆ ರಾಜಧಾನಿ ವೆನಿಜುವೆಲಾ ಮತ್ತು ಇತರ ನಗರಗಳಲ್ಲಿ ನಡೆದಿದೆ.

ಬ್ರೆಜಿಲ್ ಗಡಿ ರಾಜ್ಯ ಬೊಲಿವರ್‍ನಲ್ಲೂ ವ್ಯಾಪಕ ಹಿಂಸಾಚಾರ ಮತ್ತು ಲೂಟಿ ನಡೆದ ಬಗ್ಗೆ ವರದಿಯಾಗಿದೆ. ದೇಶದ ವಿವಿಧೆಡೆ ಉಲ್ಬಣಗೊಂಡ ಹಿಂಸಾಚಾರಗಳಲ್ಲಿ ಗುಂಡಿನ ದಾಳಿ ಮತ್ತು ಇರಿತದಿಂದ ಅನೇಕರು ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಬಿಕ್ಕಟ್ಟು ಕುರಿತ ವೆನಿಜುವೆಲಾ ವೀಕ್ಷಣಾಲಯ ತಿಳಿಸಿದೆ.

ಸೋಮವಾರ 27 ಯೋಧರ ಗುಂಪು ಎಡಪಂಥೀಯ ನಾಯಕ ಮುಡುರೋ ವಿರುದ್ಧ ರಾಜಧಾನಿ ಕಾರಾಕಾಸ್‍ನ ಸೇನಾ ನೆಲೆಯೊಂದರಲ್ಲಿ ಬಂಡಾಯ ಎದ್ದರು.

ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಇವರ ವಿರುದ್ಧ ಜನರು ದಂಗೆ ಏಳುವಂತೆ ಸಿಪಾಯಿಗಳು ಕರೆ ನೀಡಿದರು. ಇದಾದ ನಂತರ ಕಳೆದ ಮೂರು ದಿನಗಳಿಂದ ರಾಜಧಾನಿ ಸೇರಿದಂತೆ ವಿವಿಧೆಡೆ ಪ್ರತಿಭಟನೆ ಮುಂದುವರಿದಿದೆ.

Facebook Comments