ಹುಡುಗರ ಹೇರ್ ಸ್ಟೈಲ್’ಗಾಗಿ ಒಂದಿಷ್ಟು ಟಿಪ್ಸ್ ಇಲ್ಲಿವೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Hair-style------01

ಟಿನೇಜ್ ಹುಡುಗರ ಹೇರ್‌ಸ್ಟೈಲ್ ಬದಲಾಗಿದೆ. ತಿಂಗಳಿಗೊಂದರಂತೆ ನಾನಾ ಸ್ಟೈಲ್‌ಗಳಲ್ಲಿ ಹುಡುಗರು ಸಿನಿಮಾ ಹೀರೊಗಳಂತೆ ಮಿಂಚಲಾರಂಭಿಸಿದ್ದಾರೆ. ಪರಿಣಾಮ, ಫ್ಯಾಷನ್ ಲೋಕದಲ್ಲಿ ಇಂದು ವೈವಿಧ್ಯಮಯ ಹುಡುಗರ ಹೇರ್‌ಸ್ಟೈಲ್‌ಗಳು ಚಾಲ್ತಿಯಲ್ಲಿವೆ.

ಸ್ಲೋಪ್ ಕಟಿಂಗ್, ಬಾಕ್ಸ್ , ಸ್ಟೇಪ್ ,ಮಶ್ರೂಮ್ , ಪಂಕ್ ಕಟಿಂಗ್, ಲಾಂಗ್ ,ಮಿಲಿಟರಿ, ಫ್ರಂಟ್ ಯು, ಟ್ರಿಮ್ ,ಜೋಗಿಜಾಕಿ, ಹಿಪ್ಪಿ, ಫುಲ್ ಶಾರ್ಟ್ ಕಟ್,ಮೀಡಿಯಂ , ಪಿರಮಿಡ್, ಕ್ರಾಫ್, ವೆಜ್,ಬಾಯ್ಸ್ ಕೂಲ್, ಜಿಂಗ್-ಜಾಂಕ್ ಸೇರಿದಂತೆ ನಾನಾ ಕೇಶ ವಿನ್ಯಾಸಗಳು ಫ್ಯಾಷನ್ ಲೋಕದಲ್ಲಿ ಪ್ರಚಲಿತದಲ್ಲಿವೆ.

ಇವುಗಳಲ್ಲಿ ಸ್ಕೇಟರ್ ಬಾಯ್ಸ್ , ಸ್ಟೈಲಿಶ್ ಬ್ಯಾಂಗ್ಸ್ , ಎಮೊ, ಬೌಲ್, ವೇವಿ ಫ್ಯಾಜ್, ಲೇಯರ್ಡ್‌ಕೇಶ ವಿನ್ಯಾಸ ವಿದೇಶಗಳಲ್ಲಿ ಹೆಚ್ಚು ಟ್ರೆಂಡಿಯಾಗಿದೆ.
ವ್ಯಕ್ತಿತ್ವಕ್ಕೆ ತಕ್ಕಂತಿರಲಿ

ನ್ಯೂ ಹೇರ್‌ಗೆ ಎಲ್ಲಾ ಬಗೆಯ ಹೇರ್‌ಸ್ಟೈಲ್‌ಎಲ್ಲರಿಗೂ ಸೆಟ್‌ ಆಗುವುದಿಲ್ಲ. ಅವರವರ ಮುಖದ ಗಾತ್ರ, ಬಣ್ಣ, ಆಕಾರಕ್ಕೆ ತಕ್ಕಂತೆ ಕೇಶಾಲಂಕಾರ ಮಾಡಲು ಮುಂದಾಗಿ. ವೇಷಭೂಷಣಕ್ಕೆ ಹೊಂದುವಂತೆ ಮಾಡಿಕೊಂಡರೆ ಬೆಸ್ಟ್‌.

ಸನ್ನಿವೇಶ, ಕಾರ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ಹೇರ್‌ಸ್ಟೈಲ್‌ಮಾಡಲು ಮುಂದಾಗಿ.ಆಗ ಮಾತ್ರ ವ್ಯಕ್ತಿತ್ವಕ್ಕೆ ಮೆರಗು ನೀಡುತ್ತದೆ. ಚಳಿಗಾಲದಲ್ಲಿ ಕೂದಲ ರಕ್ಷಣೆ ಮಾಡಬೇಕು. ಕೂದಲನ್ನು ಪೋಷಣೆ ಮಾಡಿದಾಗ ಮಾತ್ರ ನಿಮ್ಮಿಷ್ಟದಂತೆ ಹೇರ್‌ಸ್ಟೈಲ್‌ಸೆಟ್‌ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

# ಜೆಲ್‌ಕಡಿಮೆ ಬಳಸಿ  :  ಚಳಿಗಾಲದಲ್ಲಿ ಸಾಧ್ಯವಾದಷ್ಟು ಕೂದಲಿಗೆ ಕಡಿಮೆ ಹೇರ್‌ಜೆಲ್‌ಬಳಸಿ. ಇದು ಕೂದಲನ್ನು ಮತ್ತಷ್ಟು ಒರಟಾಗಿಸುತ್ತದೆ. ಅನಿವಾರ್ಯತೆ ಎನಿಸಿದಾಗ ಮಾತ್ರ ಬಳಸಿ. ಪ್ರತಿನಿತ್ಯ ಬಳಸುವುದನ್ನು ಕಡಿಮೆ ಮಾಡಿ. ಎಕ್ಸ್‌ಪೈರಿ ಡೇಟ್‌ನೋಡಿಕೊಂಡು ಬಳಸಿದರೆ ಉತ್ತಮ.

# ವಾರಕ್ಕೊಮ್ಮೆ ತಲೆಗೆ ಎಣ್ಣೆಯನ್ನು ಹಚ್ಚಿ  :  ಹುಡುಗರೂ ಕೂಡ ಕೂದಲ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ, ಅವರಿಗೆ ಬೇಕಾದ ಹೇರ್‌ಸ್ಟೈಲನ್ನು ಮಾಡಿಕೊಳ್ಳಬಹುದು. ವಾರಕ್ಕೊಮ್ಮೆ ಕೊಬ್ಬರಿ ಅಥವಾ ಹರಳೆಣ್ಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಹಚ್ಚಿಕೊಂಡರೆ ದೇಹ ಕೂಡ ತಂಪಾಗುತ್ತದೆ. ಕೂದಲು ಆರೋಗ್ಯಯುತವಾಗಿರುತ್ತದೆ.

# ಹೆಲ್ಮೆಟ್‌ಧರಿಸಿದಾಗ : ಪ್ರತಿನಿತ್ಯ ಹೆಲ್ಮೆಟ್‌ಧರಿಸುವುದರಿಂದ ಯಾವುದೇ ಹೇರ್‌ಸ್ಟೈಲ್‌ಮಾಡಿಕೊಂಡರೂ ಹಾಳಾಗಿ ಹೋಗುತ್ತದೆ. ಆದ್ದರಿಂದ ಹುಡುಗರು ಮನೆಯಿಂದ ಹೊರಡುವಾಗ ಜೊತೆಯಲ್ಲಿ ಕಾಟನ್‌ಕ್ಲಾತನ್ನು ತಲೆಯ ಸುತ್ತ ಕಟ್ಟಿ .ನಂತರ ಹೆಲ್ಮೇಟ್‌ವೇರ್‌ಮಾಡಿ. ನೀವು ಸ್ಥಳವನ್ನು ತಲುಪಿದ ನಂತರ ಕ್ಲಾತ್‌ತೆಗೆಯಿರಿ. ಸಾಧ್ಯವಾದಲ್ಲಿ ಬಾಚಿ ಕೊಳ್ಳಿ.

# ಧ್ಯಾನ ಮಾಡಿ  : ಇಂದಿನ ಬಿಝಿ ಲೈಫ್‌ನಲ್ಲಿ ಪದೇ ಪದೇ ಟೆನ್ಷನ್‌ತೆಗೆದುಕೊಳ್ಳುವುದರಿಂದ ಕೂದಲು ಉದುರಿ, ಮಧ್ಯ ವಯಸ್ಸಿನಲ್ಲಿಯೇ ಬೋಳಾಗುತ್ತದೆ. ಆದ್ದರಿಂದ ಬೆಳಗ್ಗೆ ಕನಿಷ್ಟ 20 ನಿಮಿಷವಾದರೂ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನರಗಳು ಬಲಿಷ್ಟಗೊಳ್ಳುವುದರಿಂದ ಆರೋಗ್ಯ, ಆಯಸ್ಸು, ಸೌಂದರ್ಯ ಎಲ್ಲ ವೃದ್ಧಿಸುತ್ತದೆ. ಕೂದಲು ಕೂಡ ಉದುರುವುದು ನಿಲ್ಲುತ್ತದೆ.

# ದಾಸವಾಳ ಬಳಕೆ :  ದಾಸವಾಳದ ಬಳಕೆಯಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಜೊತೆಗೆ ಉದ್ದ ಹಾಗೂ ಕಾಂತಿಯತವಾಗಿ ಬೆಳೆಯುತ್ತದೆ. 15 ದಿನಕ್ಕೊಮ್ಮೆಯಾದರೂ ದಾಸವಾಳವನ್ನು ತಲೆಗೆ ಹಚ್ಚಿಕೊಂಡಾಗ ನಮಗೆ ಬೇಕಾದ ರೀತಿಯಲ್ಲಿ ಸೆಟ್‌ಮಾಡಿಕೊಳ್ಳಲು ಸುಲಭವಾಗುತ್ತದೆ. ಇದೇ ಕಾರಣಕ್ಕಾಗಿ ದಾಸವಾಳವನ್ನು ಆಯುರ್ವೇದ ಶಾಂಪೂ ಅಥವಾ ಕೂದಲಿಗೆ ಉಪಯೋಗಿಸುವ ಎಣ್ಣೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ.

Facebook Comments