BREAKING : ಯುವ ರೈತ ಶಶಿಕುಮಾರ್ ಬಿಗ್ ಬಾಸ್ 6ನೇ ಸೀಸನ್’ನ ವಿನ್ನರ್ ..!

ಈ ಸುದ್ದಿಯನ್ನು ಶೇರ್ ಮಾಡಿ

Shashi--01

ಬೆಂಗಳೂರು. ಜ. 27 : ಕಲರ್ಸ್ ಸೂಪರ್ ಚಾನಲ್ ನಲ್ಲಿ ಪ್ರಸಾರವಾಗುವ ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡದ ಜನಪ್ರಿಯ ಶೋ ಬಿಗ್ ಬಾಸ್ ಕನ್ನಡ 6ನೇ ಸೀಸನ್ ಗೆ ಇಂದು ತೆರೆಬಿದ್ದಿದೆ.

ಇಂದು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಕೊನೆಯದಾಗಿ ಮನೆಯಲ್ಲಿ ಉಳಿದಿದ್ದ ಮೂರು ಜನ ಸ್ಪರ್ಧಿಗಳ್ಲಲಿ ಯುವ ರೈತ ಶಶಿಕುಮಾರ್  6ನೇ ಸೀಸನ್ ನ ಬಿಗ್ ಬಾಸ್ ಟ್ರೋಪಿ ಎತ್ತಿಹಿಡಿದ್ದಾರೆ. ನವೀನ ಸಜ್ಜು ಮೊದಲ ರನ್ನರ್  ಅಪ್ ಆಗಿ ಹೊರಹೊಮ್ಮಿದರೆ,    ಕವಿತಾ ಗೌಡ 3ನೇ ಸ್ಥಾನಕ್ಕೆ ತೃಪ್ತಿಪಟ್ಟ ಕೊಳ್ಳಬೇಕಾಯಿತು.

ಕೊನೆಯ ದಿನ ಬಿಗ್ ಬಾಸ್ ಮನೆಯಲ್ಲಿ ನವೀನ್ ಸಜ್ಜು, ಕವಿತಾ ಗೌಡ ಮತ್ತು ಶಶಿ ಉಳಿದುಕೊಂಡಿದ್ದರು. ನಂತರ ನಡೆದ ಅಂತಿಮ ಎಲಿಮಿನೇಷನ್ ವೇಳೆ ಕವಿತಾ ಮನೆಯಿಂದ ಹೊರಬಂದರು.

ನಂತ್ರ ನವೀನ ಸಜ್ಜು ಮತ್ತು ಶಶಿ ನಡುವೆ ಯಾರು ಗೆಲ್ಲುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ಜನರ ಮತಗಳ ಅನುಸಾರ ಶಶಿ ವಿನ್ನರ್ ಆಗಿ ಹೊರಹೊಮ್ಮಿದರು.

ನಿನ್ನೆಯಷ್ಟೇ (ಶನಿವಾರ) ಅಂತಿಮ ಸುತ್ತಿನಲ್ಲಿ ಐದು ಮಂದಿ ಸ್ಪರ್ಧಿಗಳಲ್ಲಿ ಆಂಡಿ ಮತ್ತು ರಶ್ಮಿ ಎಲಿಮಿನೇಟ್ ಆಗಿದ್ದರು. ಇನ್ನು ಶ್ರೀಸಾಮಾನ್ಯನ ವಿಭಾಗದಲ್ಲಿ ಬಿಗ್ ಬಾಸ್ ಮನೆಗೆ ಅಡಿಯಿಟ್ಟ ಸ್ಪರ್ಧಿ ಶಶಿ .

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಇವರ ಸ್ವಂತ ಊರು. ಆಧುನಿಕ ರೈತನಾಗಿರುವ ಇವರು ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನೆಯಲ್ಲಿ ತುಂಬಾ ಸೆನ್ಸಿಬಲ್ ಸ್ಪರ್ಧಿ. ರೈತನಾದರೂ ನೋಡಿದರೆ ಸಿನಿಮಾ ಹೀರೋ ತರಹ ಕಾಣುವ ಶಶಿ ಜನರ ಮನಸ್ಸನ್ನು ಗೆದ್ದು ಫಿನಾಲೆ ತಲುಪಿದ್ದರು.

100 ದಿನಗಳ ಕಾಲ ನಡೆದ ಶೋ ನಲ್ಲಿ ಒಟ್ಟು 18 ಮಂದಿ ಭಾಗವಹಿಸಿದ್ದರು. ಈ ಬಾರಿಯ ಬಿಗ್ ಬಾಸ್ ಸೀಸನ್‌ನಲ್ಲಿ ವಿನ್ನರ್‌ಗೆ ₹ 50 ಲಕ್ಷ ಬಹುಮಾನ ಹಾಗೂ ಟ್ರೋಪಿ ಕೊಟ್ಟು ಸನ್ಮಾನಿಸಲಾಗಿದೆ.

ಬಿಗ್ ಬಾಸ್ ಮೊದಲನೇ ಸೀಸನ್ ನಲ್ಲಿ ನಟ ವಿಜಯ್ ರಾಘವೇಂದ್ರ, 2 ನೇ ಸೀಸನ್ ನಲ್ಲಿ ಅಕುಲ್ ಬಾಲಾಜಿ , 3 ನೇ ಸೀಸನ್ ನಟಿ ಶ್ರುತಿ, 4 ನೇ ಸೀಸನ್ ನಲ್ಲಿ ಒಳ್ಳೆ ಹುಡುಗ ಪ್ರಥಮ್ ಮತ್ತು 5 ನೇ ಸೀಸನ್ ನಲ್ಲಿ ರ್ಯಾಪರ್ ಚಂದನ್ ಶೆಟ್ಟಿ ವಿಜಯಿಗಳಾಗಿದ್ದರು.

Facebook Comments

Sri Raghav

Admin