ಲೋ ಬಿಪಿ ಕಾಡ್ತಿದಿಯಾ.? ನಿರ್ಲಕ್ಷಿಸಿದರೆ ಕಾದಿದೆ ಆಪತ್ತು…!

ಈ ಸುದ್ದಿಯನ್ನು ಶೇರ್ ಮಾಡಿ

Low-BPಇತ್ತಿಚಿಗೆ ಕಾಡುತ್ತಿರುವ  ಸಮಸ್ಯೆ ಎಂದರೆ ಅದು ರಕ್ತದೊತ್ತಡ. ಈ ಸಮಸ್ಯೆಯನ್ನು ಸಾಕಷ್ಟು ಜನ ಕೇರ್ ಲೆಸ್ ಮಾಡುತ್ತಿರುತ್ತಾರೆ.  ಆದರೆ ಆಗೇ ಮಾಡುವುದರಿಂದ ದೊಡ್ಡ ಸಮಸ್ಯೆ ಎದುರಾಗುವುದು ಖಂಡಿತ.

ಸಮಸ್ಯೆ ದೊಡ್ಡದಾದ ಮೇಲೆ ಬಗೆಹರಿಸಿಕೊಳ್ಳಲು ಸ್ವಲ್ಪ ಕಷ್ಟವೆ ಸರಿ. ಆದ್ದರಿಂದ ಇಂತಹ ಸಮಸ್ಯೆಗಳಿಗೆ ನಾವು ಹೇಳುವ ಮನೆಮದ್ದನ್ನು ಉಪಯೋಗಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

ನಾವು ಮೊದಲು ಹೇಳಿದ ಹಾಗೆ ಹೆಚ್ಚು ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ರಕ್ತದೊತ್ತಡ. ಅದನ್ನ ಸಾಮಾನ್ಯವಾಗಿ ಬಿಪಿ ಎನ್ನುತ್ತಾರೆ. ಅದರಲ್ಲೂ ಲೋ ಬಿಪಿ ಬಂದ್ರೆ ಮುಗಿತು ಕಥೆ. ಈ ಲೋ ಬಿಪಿಯನ್ನು ತುಂಬಾ ಕೇರ್ ಲೆಸ್ ಮಾಡ್ತಾರೆ.

ವಿಶ್ವದಲ್ಲಿ ಅಧಿಕ ಜನರು ಕಡಿಮೆ ರಕ್ತದೊತ್ತಡದಿಂದ ಬಳಲಿದರೂ ಸಹ ಅನೇಕ ಬಾರಿ ಜನರಿಗೆ ತಾವು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದೀವಿ ಎಂಬ ಅರಿವು ಸಹ ಇರುವುದಿಲ್ಲ. ಅದರ ಬದಲಾಗಿ ತಮಗೆ ತಲೆ ಸುತ್ತುತ್ತಿದೆ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದೇವೆ ಎಂದು ಅಂದುಕೊಂಡಿರುತ್ತಾರೆ. ಇದಕ್ಕೆ ಸರಳ ಪರಿಹಾರಗಳು ಇಲ್ಲಿವೆ.

ನಿರ್ಜಲೀಕರಣ: ನಿಮ್ಮ ಆರೋಗ್ಯ ಕಾಪಾಡಲು ಹೆಚ್ಚು ನೀರು ಕುಡಿಯುವುದು ಅತಿ ಅಗತ್ಯವಾಗಿದೆ. ಹೀಗಾಗಿ, ನಿಮಗೆ ಆಗಾಗ್ಗೆ ನಿರ್ಜಲೀಕರಣವಾಗುವುದು ಸಾಮಾನ್ಯವಾಗಿದ್ದರೆ ನೀವು ಈ ಬಗ್ಗೆ ಯೋಚಿಸಬೇಕಾಗುತ್ತದೆ. ಒಬ್ಬ ಮನುಷ್ಯ ಕಳೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ದ್ರವ ರೂಪದ ಆಹಾರವನ್ನು ಕುಡಿಯಬೇಕಾಗುತ್ತದೆ.

ನೀವು ಕಚೇರಿ ಅಥವಾ ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡದೆ ಹೊರಗಡೆ ಕೆಲಸ ಮಾಡುವುದಾದರೆ ಆಗಾಗ್ಗೆ ನಿಂಬೆಹಣ್ಣಿನ ಜ್ಯೂಸ್ಅನ್ನು ಹೆಚ್ಚು ಕುಡಿಯಬೇಕಾಗುತ್ತದೆ. ಇದರಿಂದ, ನಿಮ್ಮ ನಿರ್ಜಲೀಕರಣದ ದುರ್ಬಲತೆಯನ್ನು ತಡೆಗಟ್ಟಬಹುದು.

ಪ್ರೆಗ್ನೆನ್ಸಿ: ನೀವು ಗರ್ಭವತಿಯಾಗಿದ್ದರೆ, ರಕ್ತದೊತ್ತಡ ಕಡಿಮೆಯಾಗುವ ಹಲವು ಅವಕಾಶಗಳಿರಬಹುದು. ಆ ಸಮಯದಲ್ಲಿ ಇದು ಸಾಮಾನ್ಯ ಎನಿಸಿಕೊಂಡರೂ, ರಕ್ತದೊತ್ತಡ ಆಗಾಗ್ಗೆ ಕಡಿಮೆಯಾಗುತ್ತಿದ್ದರೆ ವೈದ್ಯರ ಬಳಿ ಪರೀಕ್ಷೆ ಮಾಡಿಸುವುದು ಅಗತ್ಯವಾಗಿದೆ.

ಹೃದಯ ಸಮಸ್ಯೆಗಳು: ಕೆಲ ಹೃದಯ ಸಮಸ್ಯೆಗಳಿದ್ದರೆ ನಿಮ್ಮ ದೇಹಕ್ಕೆ ರಕ್ತ ಸರಿಯಾಗಿ ಚಲನೆಯಾಗದಿರಬಹುದು.

ಪೋಷಕಾಂಶಗಳ ಕೊರತೆ: ಕೆಲ ಅಗತ್ಯಪೋಷಕಾಂಶಗಳಾದ ಬಿ – 12 ಹಾಗೂ ಐರನ್ ಕೊರತೆಯಾದರೆ ಅನೀಮಿಯಾಗೆ ಕಾರಣವಾಗಬಹುದು. ಬಳಿಕ ಲೋ ಬಿಪಿಗೆ ಕಾರಣಗಳಾಗಬಹುದು.

 ಉಪ್ಪು ಸೇವನೆ ಜಾಸ್ತಿ ಮಾಡಿ: ಸಾಮಾನ್ಯವಾಗಿ ಉಪ್ಪು ಸೇವನೆ ಕಡಿಮೆ ಮಾಡಿ ಎಂದು ಜನರಿಗೆ ಹೇಳಲಾಗುತ್ತದೆ. ಆದರೆ, ಲೋ ಬಿಪಿಯಿಂದ ಬಳಲುತ್ತಿರುವವರಿಗೆ ಉಪ್ಪಿನಿಂದ ಸಹಾಯವಾಗಬಹುದು. ಆದರೆ, ಹೆಚ್ಚು ಉಪ್ಪಿನಂಶವಿರುವ ಆಹಾರ ಸೇವನೆಗೂ ಮುನ್ನ ವೈದ್ಯರ ಬಳಿ ಪರೀಕ್ಷೆ ಮಾಡಿಸಿ.

ಹೆಚ್ಚು ನೀರು ಕುಡಿಯಿರಿ: ದೇಹದ ಸಾಮಾನ್ಯ ಕಾರ್ಯಚಟುವಟಿಕೆಗೆ ನೀರು ಕುಡಿಯುವುದು ಅಗತ್ಯವಾಗಿದೆ. ಅಲ್ಲದೆ, ನಿರ್ಜಲೀಕರಣ ತಡೆಯಲು ಸಹ ಇದು ಸಹಾಯವಾಗಲಿದೆ. ಇನ್ನು, ನಿಮಗೆ ಹೆಚ್ಚು ತಲೆ ಸುತ್ತುವ ಸಮಸ್ಯೆಯಿದ್ದರೂ ನೀರಿನ ಸೇವನೆ ಜಾಸ್ತಿ ಮಾಡಬೇಕಾದ ಅಗತ್ಯವೂ ಇದೆ.

ಮನೆ ಮದ್ದುಗಳು: ಪ್ರತಿದಿನ ಎರಡು ಬಾರಿ ಹಸಿ ಬೀಟ್ರೂಟ್ಜ್ಯೂಸ್ಕುಡಿಯಿರಿ. ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಇದು ಉತ್ತಮ ಮನೆ ಮದ್ದುಗಳಲ್ಲಿ ಒಂದಾಗಿದೆ. ಇನ್ನು, ಸ್ಟ್ರಾಂಗ್ ಬ್ಲಾಕ್ಕಾಫಿ ಕುಡಿದರೂ ಸಹ ಸಹಾಯವಾಗಬಹುದು. ಬಾದಾಮಿ ಪೇಸ್ಟ್ಮಾಡಿಕೊಂಡು ಉಗುರು ಬೆಚ್ಚಗಿನ ಹಾಲಿನೊಂದಿಗೆ ಕುಡಿದರೂ ಸಹಾಯವಾಗುತ್ತದೆ ಎಂದು ಸಹ ಕೆಲವರು ಸಲಹೆ ನೀಡುತ್ತಾರೆ.

ವ್ಯಾಯಾಮ: ನಿಮ್ಮ ದಿನನಿತ್ಯ ಚಟುವಟಿಕೆಯಲ್ಲಿ ಸ್ವಲ್ಪ ವ್ಯಾಯಾಮವನ್ನೂ ಅಳವಡಿಸಿಕೊಳ್ಳಿ. ಒಮ್ಮೆ ವಾಕ್ ಮಾಡಿದರೆ ಅಥವಾ ವೇಗವಾಗಿ ಈಜಿದರೂ ರಕ್ತ ಚಲನೆಗೆ ಸಹಾಯವಾಗಬಹುದು.

Facebook Comments