ದೇಹದ ಕೊಬ್ಬು ಕರಗಿಸುತ್ತವೆ ಈ ಜ್ಯೂಸ್’ಗಳು

ಈ ಸುದ್ದಿಯನ್ನು ಶೇರ್ ಮಾಡಿ

Natural-drinksನೈಸರ್ಗಿಕವಾಗಿ ದೊರೆಯುವ ಆರೋಗ್ಯಕಾರಿ ಪಾನಿಯಗಳು ಅತ್ಯಂತ ಪೌಷ್ಠಿಕಾಂಶದಿಂದ ಕೂಡಿದ್ದು, ನಿಮ್ಮ ದೈನಂದಿನ ಆಹಾರ ಪದ್ದತಿಯಲ್ಲಿ ಇದನ್ನು ನೀವು ಕ್ರಮಾನುಗತವಾಗಿ ಸೇವಿಸಿದರೆ, ದೇಹದಲ್ಲಿ ಉಂಟಾಗುವ ಎಲ್ಲಾ ರೀತಿಯ ತೊಂದರೆಗಳಿಂದ ಕೂಡ ನೀವು ದೂರ ಇರಬಹುದು ಹಬ್ಬ ಹರಿದಿನಗಳ ರಜಾ ಅವಧಿಯಲ್ಲಿ ಹಬ್ಬದ ವಿಶೇಷ ತಿಂಡಿಗಳನ್ನು ಸವಿಯುವುದು ಎಲ್ಲರಿಗೂ ಇಷ್ಟವಾದ ಸಂಗತಿಯೇ ಆಗಿದೆ.

ಆದರೆ ಹೀಗೆ ಹೆಚ್ಚಾಗಿ ತಿಂಡಿ ತಿನಿಸುಗಳನ್ನು ತಿಂದು ಮೈಯಲ್ಲಿ ಕೊಬ್ಬಿನ ಅಂಶ ಜಾಸ್ತಿಯಾದಾಗ ಅದನ್ನು ಇಳಿಸಿಕೊಳ್ಳಲು ಪ್ರಯತ್ನಿಸುವುದು ಸಹ ಅತಿ ಮುಖ್ಯವಾಗುತ್ತದೆ. ಅತಿಯಾದ ತೂಕ ಇಳಿಸಿಕೊಳ್ಳಲು ಕೆಲವರು ಉಪವಾಸ ಆರಂಭಿಸುತ್ತಾರೆ.

ಇನ್ನು ಕೆಲವರು ಆಹಾರ ಪದ್ಧತಿ ಬದಲಾಯಿಸಿಕೊಳ್ಳುತ್ತಾರೆ. ಆದಾಗ್ಯೂ ಇಂಥ ಕ್ರಮಗಳಿಂದ ಹೇಳಿಕೊಳ್ಳುವಂಥ ಪರಿಣಾಮಗಳು ಕಂಡು ಬಾರದೆ ನಿರಾಶೆ ಮೂಡುವುದೇ ಹೆಚ್ಚು. ಆದರೆ ದೇಹದಲ್ಲಿನ ಕಲ್ಮಶ ಹಾಗೂ ವಿಷಕಾರಿ ಅಂಶಗಳನ್ನು ತೆಗೆದು ಹಾಕಲು ಸುಲಭ ಉಪಾಯವೊಂದಿದೆ.

ಶರೀರದಲ್ಲಿನ ಕಲ್ಮಶ ಹಾಗೂ ಹೆಚ್ಚುವರಿ ಕೊಬ್ಬಿನ ಅಂಶಗಳ ನಿವಾರಣೆಗೆ ಒಂದು ನೈಸರ್ಗಿಕ ಜ್ಯೂಸ್ ನಿಮಗೆ ಸಹಾಯ ಮಾಡಬಲ್ಲದು. ಇದು ಖಂಡಿತವಾಗಿಯೂ ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್ ಅಲ್ಲ.

ಇದನ್ನು ನೀವೇ ಮನೆಯಲ್ಲಿ ನೈಸರ್ಗಿಕ ವಸ್ತುಗಳನ್ನು ಬಳಸಿ ತಯಾರಿಸಿ ಸೇವಿಸಬಹುದು ಹಾಗೂ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು. ಎಲ್ಲರ ಅಡುಗೆ ಮನೆಯಲ್ಲಿ ಇರುವ ಶುಂಠಿ, ನಿಂಬೆ ಹಣ್ಣು ಹಾಗೂ ದಾಲ್ಚಿನ್ನಿಗಳನ್ನು ಬಳಸಿ ಕೇವಲ 10 ನಿಮಿಷಗಳಲ್ಲಿ ಈ ಆರೋಗ್ಯಕರ ಜ್ಯೂಸ್ ತಯಾರಿಸಬಹುದು.

# ನೈಸರ್ಗಿಕ ಜ್ಯೂಸ್ನ ಆರೋಗ್ಯಕಾರಿ ಪ್ರಯೋಜನಗಳು
ನಿಂಬೆ ಹಾಗೂ ಶುಂಠಿಯ ಮಿಶ್ರಣ ಆರೋಗ್ಯ ಭಾಗ್ಯದ ಸಂಗಮವಾಗಿದೆ. ನಿಂಬೆಯಲ್ಲಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳಿಂದ ಶರೀರದಲ್ಲಿನ ಫ್ಯಾಟ್ ಕರಗುತ್ತದೆ ಹಾಗೂ ಇನ್ಸುಲಿನ್ನ ನಿರೋಧಕ ಗುಣವನ್ನು ಹೆಚ್ಚಿಸಿ ಇಡೀ ಶರೀರದಲ್ಲಿರುವ ಕಲ್ಮಶ ಹಾಗೂ ವಿಷಕಾರಿ ಅಂಶಗಳನ್ನು ಹೊರ ಹಾಕಲು ಸಹಕಾರಿಯಾಗಿದೆ. ಇನ್ನು ಶುಂಠಿಯ ಆರೋಗ್ಯಕಾರಿ ಗುಣಗಳ ಬಗ್ಗೆ ತಿಳಿದೇ ಇದೆ.

ಇದನ್ನು ಪುರಾತನ ಕಾಲದಿಂದಲೂ ಔಷಧಿಯಾಗಿ ಬಳಸಲಾಗುತ್ತಿದೆ. ದೇಹದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುವ ಅಂಶಗಳು ಶುಂಠಿಯಲ್ಲಿವೆ. ಅಲ್ಲದೆ ಹಸಿವಿನ ಪ್ರಮಾಣವನ್ನು ಸಹಜ ಸ್ಥಿತಿಗೆ ತರುವ ವಿಶಿಷ್ಟ ಹಾರ್ಮೋನ್ಗಳನ್ನು ಶುಂಠಿ ಒಳಗೊಂಡಿದೆ. ನೈಸರ್ಗಿಕ ನೋವು ನಿವಾರಕವಾಗಿರುವ ಶುಂಠಿಯು ಜೀರ್ಣ ಕ್ರಿಯೆಯನ್ನು ಸುಧಾರಿಸಿ ದೇಹದಲ್ಲಿನ ಹೆಚ್ಚುವರಿ ಕ್ಯಾಲೊರಿಗಳನ್ನು ಶೀಘ್ರವಾಗಿ ಕರಗಿಸಲು ಸಹಾಯ ಮಾಡುತ್ತದೆ.

# ಕೊಬ್ಬು ಕರಗಿಸಲು ಬೆಸ್ಟ್ ಈ ನೈಸರ್ಗಿಕ ಜ್ಯೂಸ್
“ಈ ಆರೋಗ್ಯಕರ ಜ್ಯೂಸ್ ಸೇವನೆಯಿಂದ ಶರೀರದಲ್ಲಿನ ನೋವು ಮಾಯವಾಗಿ ನೈಸರ್ಗಿಕವಾಗಿಯೇ ಕೊಬ್ಬಿನ ಅಂಶ ಕರಗಲಾರಂಭಿಸುತ್ತದೆ. ಕ್ಷಾರ ಗುಣ ಹೊಂದಿರುವ ಈ ಪೇಯ ಉದರ ಹಾಗೂ ಹೃದಯದ ಆರೋಗ್ಯಕ್ಕೂ ಅತ್ಯುತ್ತಮ ವಾಗಿದೆ. ದೇಹದಲ್ಲಿ ತೂಕ ಹೆಚ್ಚಲು ಕಾರಣವಾಗುವ ಕಲ್ಮಶಗಳು ಹಾಗೂ ಫ್ಯಾಟಿ ಆಸಿಡ್ಗಳನ್ನು ನಿವಾರಿಸಲು ಈ ಜ್ಯೂಸ್ ಸಹಕಾರಿಯಾಗಿದೆ”

# ಹೀಗೆ ತಯಾರಿಸಿ ಆರೋಗ್ಯಕರ ಜ್ಯೂಸ್
ಒಂದು ಲೀಟರ್ ನೀರನ್ನು ಪಾತ್ರೆಯೊಂದಕ್ಕೆ ಹಾಕಿ ಕುದಿಸಿ. ಇದಕ್ಕೆ ಕೆಲ ಕತ್ತರಿಸಿದ ಶುಂಠಿಯ ತುಂಡುಗಳನ್ನು ಹಾಕಿ. ನಂತರ ಒಂಚೂರು ದಾಲ್ಚಿನ್ನಿಯನ್ನು ಸೇರಿಸಿ. ಈಗ 15 ರಿಂದ 20 ನಿಮಿಷಗಳವರೆಗೆ ಈ ದ್ರಾವಣ ತಣ್ಣಗಾಗಲು ಬಿಡಿ. ದ್ರಾವಣ ಸಂಪೂರ್ಣ ತಣ್ಣಗಾದ ಮೇಲೆ ಇದಕ್ಕೆ ಒಂದಿಷ್ಟು ನಿಂಬೆರಸ ಸೇರಿಸಿ. ಈಗ ಇದನ್ನು ಸೋಸಿ ಗಾಳಿಯಾಡದ ಬಾಟಲಿಯೊಂದಕ್ಕೆ ತುಂಬಿಟ್ಟರೆ ಯಾವಾಗ ಬೇಕಾದರೂ ಸೇವಿಸಬಹುದು.

Facebook Comments