ಬಣ್ಣ ಬಣ್ಣದ ಗುಲಾಬಿಗೆ ಬಗೆ ಬಗೆಯ ಅರ್ಥ

ಈ ಸುದ್ದಿಯನ್ನು ಶೇರ್ ಮಾಡಿ

roseಹೂವುಗಳು, ಅದರಲ್ಲೂ ಗುಲಾಬಿ ಹೂವನ್ನು ಭಾವನೆಗಳನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ. ಪ್ರೀತಿ, ಗೌರವ, ಆಶೀರ್ವಾದ, ಕ್ಷಮೆ ಹೀಗೆ ವಿವಿಧ ಭಾವನೆಗಳನ್ನು ತಿಳಿಸಲು ಗುಲಾಬಿ ಹೂವು ಬೆಸ್ಟ್ ವಿಧಾನ. ಆದರೆ ಗುಲಾಬಿ ಹೂವಿನ ಒಂದೊಂದು ಬಣ್ಣವೂ ಒಂದೊಂದು ಭಾವನೆಯನ್ನು ತಿಳಿಸುತ್ತದೆ. ಹಾಗಾಗಿ ಗುಲಾಬಿ ಆಯ್ದುಕೊಳ್ಳುವ ಮೊದಲು ಯಾವ ಬಣ್ಣ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಿ.

ಕೆಂಪು ಗುಲಾಬಿ : ಕೆಂಪು ಬಣ್ಣದ ಗುಲಾಬಿ ಹೂವು ಪ್ರೀತಿಯ ಸಂಕೇತ. ಕೆಂಪು ಗುಲಾಬಿಯ ಅರ್ಥ  ಪ್ರಾಮಾಣಿಕತೆ, ಪ್ರೀತಿ ಮತ್ತು ಗೌರವದ ಸಂಕೇತ. ನೀವು ಯಾರನ್ನಾದರೂ ತುಂಬಾ ಪ್ರೀತಿ ಮಾಡುತ್ತಿದ್ದರೆ, ನೀವು ಹೃದಯ ಪೂರ್ವಕವಾಗಿ ಅವರಿಗೆ ರೆಡ್‌ರೋಸ್‌ನೀಡಬಹುದು.

ಪಿಂಕ್‌ ವರ್ಣದ ರೋಸ್‌ : ಪಿಂಕ್‌ರೋಸ್‌ನೋಡಲು ಸಹ ಸುಂದರವಾಗಿರುತ್ತದೆ. ಪಿಂಕ್‌ಅಂದರೆ ನಮ್ಮ ಭಾವನೆಗಳನ್ನು ಹೊರ ಹಾಕುವ ಕಲರ್‌, ಅಂದರೆ ನಿಮ್ಮ ಸಂತೋಷ ಕೃತಜ್ಞತೆಯನ್ನು ನೀವು ಪಿಂಕ್‌ರೋಸ್‌ನೀಡುವ ಮೂಲಕ ಅವರಿಗೆ ತಿಳಿಸಬಹುದು.

ಹಳದಿ ರೋಸ್‌ : ಇದು ಫ್ರೆಂಡ್‌ಶಿಫ್‌ಸಂಕೇತ. ಅದರ ಜೊತೆಗೂ ಸಂತೋಷದ ಸಂಕೇತವೂ ಆಗಿದೆ. ಈ ಕಲರ್‌ಸೂರ್ಯನನ್ನು ಸಂಕೇತಿಸುತ್ತದೆ. ಅಂದರೆ ನಿಮ್ಮ ಸಂಗಾತಿಯಲ್ಲಿ ಫ್ರೆಂಡ್‌ಶಿಫ್‌ಅಥವಾ ಬೆಸ್ಟ್‌ಫ್ರೆಂಡ್‌ಎಂಬ ಭಾವನೆ ನಿಮಗಿದ್ದರೆ ಹಳದಿ ರೋಸ್‌ನೀಡಿ.

ಬಿಳಿ ಗುಲಾಬಿ : ಬಿಳಿ ಬಣ್ಣ ಶಾಂತಿಯ ಸಂಕೇತ, ಅದರಂತೆ ಗುಲಾಬಿ ಬಣ್ಣವನ್ನು ಮದುವೆ ಸಮಾರಂಬಗಲಿ ಹೆಚ್ಚಾಗಿ ಮದುವೆಮನೆ ಸಿಂಗರಿಸಲು ಬಳಸುತ್ತಾರೆ ಕಾರಣ ಬಿಳಿ ಗುಲಾಬಿ ಒಗ್ಗಟ್ಟು, ಹೊಂದಾಣಿಕೆ ಹಾಗೆ ಸ್ವಚ್ಛ ಪ್ರೀತಿಯ ಸಂಕೇತ.

ನೇರಳೆ ಗುಲಾಬಿ : ನೇರಳೆ ಬಣ್ಣದ ಗುಲಾಬಿ ನಿಮಗೆ ಕಾಣಲು ಅಷ್ಟಾಗಿ ಸಿಗುವುದಿಲ್ಲ, ನೇರಳೆ ಬಣ್ಣ ಹೂ ಕೂಡ ಪ್ರೀತಿಯ ಸಂಕೇತವೇ, ನಿಮಗೆ ಯಾರ ಮೇಲಾದರೂ ಮೊದಲ ಬಾರಿ ನೋಡಿದ ಕೂಡಲೇ ಪ್ರೀಯಾದರೆ ನೀವು ನೇರಳೆ ಬಣ್ಣ ಹೂ ನೀಡಬಹುದು.

ಕೇಸರಿ ಬಣ್ಣದ ರೋಸ್‌ : ಕೇಸರಿ ಬಣ್ಣದ ರೋಸ್‌ನ ಸಂಕೇತ ಉತ್ಸಾಹ, ಆಸೆ, ಇದು ನಿಮ್ಮ ಪ್ರೀತಿಯ ಶಕ್ತಿಯ ಸಂಕೇತವೂ ಸಹ ಆಗಿದೆ.

ಒಂದೊಂದು ವರ್ಣದ ಗುಲಾಬಿ ಹೂವಿಗೂ ಒಂದೊಂದು ಅರ್ಥವಿದೆ. ನೀವು ನಿಮ್ಮ ಸಂಗಾತಿಗೆ ಯಾವ ರೀತಿಯ ಗುಲಾಬಿ ಕೊಟ್ಟು ಇಂಪ್ರೆಸ್‌ ಮಾಡಬೇಕೆಂದುಕೊಂಡಿದ್ದೀರಾ! 

Facebook Comments