ಲವಂಗ ಎಣ್ಣೆಯ ‘ಆರೋಗ್ಯ’ಕರ ಉಪಯೋಗಗಳು

ಈ ಸುದ್ದಿಯನ್ನು ಶೇರ್ ಮಾಡಿ

lavangaಭಾರತವು ಸಾಂಬಾರ ಪದಾರ್ಥಗಳ ತವರು ಎಂದು ಹೇಳಲಾಗುತ್ತದೆ. ಹಿಂದಿನಿಂದಲೂ ಭಾರತದಲ್ಲಿನ ಸಾಂಬಾರ ಪದಾರ್ಥಗಳು ವಿದೇಶಗಳಿಗೆ ರಫ್ತಾಗುತ್ತಿದ್ದವು. ಸಾಂಬಾರ ಪದಾರ್ಥಗಳಲ್ಲಿ ಇರುವಂತಹ ಕೆಲವೊಂದು ಆರೋಗ್ಯ ಗುಣಗಳು ನಮ್ಮ ಹಿರಿಯರ ಒಳ್ಳೆಯ ಆರೋಗ್ಯಕ್ಕೆ ಕಾರಣವಾಗಿದೆ.

ಪ್ರತಿಯೊಂದು ಸಾಂಬಾರದಲ್ಲೂ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಇದರಲ್ಲಿ ಲವಂಗ ಕೂಡ ಒಂದು. ಪ್ರಪಂಚದಾದ್ಯಂತ ಅತ್ಯಂತ ಪ್ರಸಿದ್ಧ ಮತ್ತು ವ್ಯಾಪಕವಾಗಿ ಬಳಸಲಾಗುವ ಸಸ್ಯಗಳಲ್ಲಿ ಲವಂಗಗಳು.

ಇದು ಪ್ರಾಚೀನ ಕಾಲದಿಂದಲೂ ಅಡುಗೆಯಲ್ಲಿ ಬಳಸಲ್ಪಟ್ಟಿದೆ. ಇದು ಹೂಗಳು, ಎಲೆಗಳು, ಮೂತ್ರಪಿಂಡಗಳು ಮತ್ತು ಚಿಗುರುಗಳ ಬಲವಾದ ಪರಿಮಳವನ್ನು ಹೊಂದಿದೆ.

ತೈಲ  ಇಂಡೋನೇಷ್ಯಾ, ಮಡಗಾಸ್ಕರ್ ಬೆಳೆಯುತ್ತದೆ ಮತ್ತು ಒನೊ ಸುವಾಸನೆ ಮತ್ತು ಮತ್ತು ಜೀವಿರೋಧಿ ಗುಣಗಳನ್ನು. ಆಹಾರ ಉದ್ಯಮದಲ್ಲಿ ಸುಗಂಧ ದ್ರವ್ಯ, ಸಾಂಪ್ರದಾಯಿಕ ಔಷಧಿ, ಸುಗಂಧ ಉದ್ಯಮದಲ್ಲಿ ತೈಲವನ್ನು ಬಳಸಲಾಗುತ್ತದೆ.

ಲವಂಗ ಎಣ್ಣೆ ಎನ್ನುವುದು ಒಣ ಲವಂಗದ ಸಾರ. ಇದು ಅನೇಕ ತೊಂದರೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಅದರಲ್ಲಿಯೂ ನೋವುಗಳ ನಿವಾರಣೆಯಲ್ಲಿ ಇದು ಅತ್ಯಂತ ಉತ್ತಮ ಔಷಧ.

ಇದು ಸಸ್ಯಜನ್ಯ ಫಿನೈಲ್ಪ್ರೋಪನೈಡ್ಸ್ಗಳಿಂದ ಭರಿತವಾಗಿದೆ. ಅಲ್ಲದೆ ಥೈಮೋಲ್, ಕಾರ್ವೆಕ್ರೊಲ್, ಸಿನ್ನೆಮಲ್ಡಿಹೈಡ್ನಂತಹ ಜೈವಿಕಕ್ರಿಯಾಶೀಲ ಸಂಯುಕ್ತಗಳಿಂದ ಕೂಡಿಕೊಂಡಿದೆ. ಇದು ಗಾಢವಾದ ವಾಸನೆ ಹಾಗೂ ಫ್ಲೇವರ್ ಹೊಂದಿರುತ್ತದೆ.

ಇದರಲ್ಲಿರುವ ಆಂಟಿ ಮೈಕ್ರೋಬಿಯಲ್ ಗುಣಗಳು ಮೊಡವೆಯನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೊಡವೆಯನ್ನು ಕಡಿಮೆ ಮಾಡಿಕೊಳ್ಳಲು ಒಂದು ಚಮಚ ಎಕ್ಸಾ್ಟ್ರ ವರ್ಜಿನ್ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಹನಿಗಳಷ್ಟು ಲವಂಗದ ಎಣ್ಣೆಯನ್ನು ಸೇರಿಸಿ ಹತ್ತಿಯಲ್ಲಿ ಮೊಡವೆಯಾದ ಭಾಗಗಳಲ್ಲಿ ಹಚ್ಚಿಕೊಳ್ಳುವುದು ಸಹಕಾರಿ.

ಇಲ್ಲದಿದ್ದಲ್ಲಿ ಎರಡರಿಂದ ಮೂರು ಹನಿಗಳಷ್ಟು ಲವಂಗ ಎಣ್ಣೆಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಸೇರಿಸಿ ಸಹ ಹಚ್ಚಿಕೊಳ್ಳುವುದು ಅನುಕೂಲಕಾರಿ. ಒಣಗಿದ ನಂತರ ತೊಳೆಯಬೇಕು.

ಕಪ್ಪು ಕಲೆಗಳನ್ನು ಹೋಗಲಾಡಿಸಲು, ಸುಕ್ಕುಗಳನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ. ಫೇಸ್ವಾಷ್ ಆಗಿ, ಮಾಶ್ಚರೈಸರ್ ಆಗಿ ಲವಂಗದ ಎಣ್ಣೆಯನ್ನು ಬಳಸಬಹುದಾಗಿದೆ. ಆದರೆ ಹೆಚ್ಚು ಪ್ರಮಾಣದಲ್ಲಿ ಬಳಕೆ ಬೇಡ.

ಒಂದು ಹನಿ ಲವಂಗ ಎಣ್ಣೆಯನ್ನು ನೇರವಾಗಿ ಟೂತ್ಬ್ರಷ್ಗೆ ಹಾಕಿ ಹಲ್ಲುಜ್ಜುವುದರಿಂದ ಹಲ್ಲಿನ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಲು, ತಡೆಯಲು ಸಾಧ್ಯವಾಗುತ್ತದೆ. ದಂತದ ಆರೋಗ್ಯಕ್ಕೆ, ಹಲ್ಲುನೋವು, ಬಾಯಿಹುಣ್ಣು ನಿವಾರಣೆಗೆ, ದಂತದಲ್ಲಿನ ಊತವನ್ನು ಕಡಿಮೆ ಮಾಡಲು ಲವಂಗದ ಎಣ್ಣೆ ಸಹಕಾರಿ. ಇದಕ್ಕೆ ಲವಂಗದ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಬಾಯಿಹುಣ್ಣು ಅಥವಾ ದಂತದ ಮೇಲೆ ನಿಧಾನವಾಗಿ ಹಚ್ಚಬೇಕು.

Facebook Comments