ಜೋರಾಗಿದೆ ‘ಸೀತಾರಾಮ ಕಲ್ಯಾಣ’ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

SeetaramaKalyana

ಬಹಳಷ್ಟು ನಿರೀಕ್ಷೆಯೊಂದಿಗೆ ಬಿಡುಗಡೆಗೊಂಡಿರುವ ಸೀತಾರಾಮ ಕಲ್ಯಾಣ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅರ್ಪಿಸಿ ಅನಿತಾಕುಮಾರಸ್ವಾಮಿ ನಿರ್ಮಾಣದ ಸೀತಾರಾಮ ಕಲ್ಯಾಣ ಚಿತ್ರ ಬಿಡುಗಡೆಯಾದೆಲ್ಲೆಡೆ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ.

ಸಂಪೂರ್ಣ ಫ್ಯಾಮಿಲಿ ಎಂಟರ್‍ಟೈನರ್ ಆಗಿ ಮೂಡಿ ಬಂದಿರುವ ಈ ಚಿತ್ರ ದಿನದಿಂದ ದಿನಕ್ಕೆ ನೋಡುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.ಇದು ಚಿತ್ರ ತಂಡಕ್ಕೆ ಮತ್ತಷ್ಟು ಖುಷಿ ನೀಡಿದೆ. ಸಿಂಗಲ್ ಸ್ಕ್ರೀನ್ ಅಲ್ಲದೆ ಮಲ್ಟಿಪ್ಲೆಕ್ಸ್‍ಗಳಲ್ಲೂ ಕೂಡ ಉತ್ತಮ ಅಭಿಪ್ರಾಯ ಪಡೆದುಕೊಂಡಿದೆ. 5-6 ದಿನಗಳಲ್ಲಿ ಹಲವಾರು ಸೆಲಬ್ರಿಟಿಗಳು ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಎಲ್ಲಾ ಖುಷಿಯನ್ನು ಹಂಚಿಕೊಳ್ಳಲೆಂದು ಚಿತ್ರತಂಡ ಮೊನ್ನೆ ಪತ್ರಿಕಾಗೋಷ್ಠಿ ಕರೆದಿತ್ತು.

ನಾಯಕ ನಟ ನಿಖಿಲ್ ಕುಮಾರಸ್ವಾಮಿ, ನಿರ್ದೇಶಕ ಹರ್ಷ, ನಾಯಕಿ ರಚಿತಾರಾಮ್ ಸೇರಿದಂತೆ ಚಿತ್ರತಂಡದವರೆಲ್ಲ ಹಾಜರಿದ್ದು, ತಮ್ಮ ಅಭಿಪ್ರಾಯ ಹಂಚಿಕೊಂಡರು. ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿದೆ. ಕೌಟುಂಬಿಕ ಸಿನಿಮಾ ಮಾಡಿದ್ದೆವು. ಅದರಂತೆ ಹೆಚ್ಚಾಗಿ ಫ್ಯಾಮಿಲಿ ಆಡಿಯನ್ಸ್ ಬಂದು ಸಿನಿಮಾ ನೋಡುತ್ತಿದ್ದಾರೆ. ಚಿತ್ರ ರಿಲೀಸಾಗಿ ಐದು ದಿನವಾಗಿದೆ.

ಸಿನಿಮಾ ಇನ್ನೂ ಹೆಚ್ಚು ಜನರನ್ನು ತಲುಪಬೇಕಿದೆ. ಒಂದು ವರ್ಷದಿಂದ ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಮೂರ್ನಾಲ್ಕು ತಿಂಗಳ ಕಾಲ ಕೂತು ಕಥೆಗಾಗಿ ವರ್ಕ್ ಮಾಡಿದ್ದೇವು. ಚಿತ್ರ ನೋಡಿದ ಪ್ರೇಕ್ಷಕರು ಖುಷಿಯಿಂದ ಹೊರಬರುತ್ತಿದ್ದಾರೆ. ಚಿತ್ರದಲ್ಲಿ ಎಲ್ಲರಿಗಿಂತ ನಾನೇ ಜ್ಯೂನಿಯರ್ ಎಲ್ಲರಿಂದ ತುಂಬಾ ಕಲಿತಿದ್ದೇನೆ. ರವಿಶಂಕರ್, ರಚಿತಾರಾಮ್ ಎಲ್ಲರೂ ಅನುಭವಿಗಳು. ಅವರಿಂದ ನಾನು ತುಂಬಾ ಕಲಿತಿದ್ದೇನೆ. ಸಹಕರಿಸಿದವರಿಗೆಲ್ಲ ಧನ್ಯವಾದ ಇದು ನಿಖಿಲ್ ಮಾತಾಗಿತ್ತು.

ನಂತರ ನಿರ್ದೇಶಕ ಹರ್ಷ ಮಾತನಾಡುತ್ತಾ. ಚಿತ್ರದಲ್ಲಿ ನಾವು ಏನು ನಿರೀಕ್ಷೆ ಮಾಡಿದ್ದೆವೋ ಅದು ಜನರನ್ನು ತಲುಪಿದೆ. ಎಮೋಷನ್ ಬ್ಲಾಕ್‍ಗೆ ಜನರ ರಿಯಾಕ್ಷನ್ ತುಂಬಾ ಚೆನ್ನಾಗಿದೆ. ಪ್ರತಿಯೊಬ್ಬರ ಎಫರ್ಟ್‍ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದು ನಮಗೆ ಧನ್ಯತಾಭಾವ ಮೂಡಿಸಿದೆ. ಕಲೆಕ್ಷನ್ ಎಲ್ಲಾ ಕಡೆ ಚೆನ್ನಾಗಿದೆ ಎಂದು ಹೇಳಿದರು.

ಚಿತ್ರದ ಕಾರ್ಯಕಾರಿ ನಿರ್ಮಾಪಕ ಸುನಿಲ್‍ಗೌಡ ಮಾತನಾಡಿ, ಸಿನಿಮಾ ರಿಲೀಸ್‍ಗಿಂತ ಮೊದಲೇ ನಾವು ಹೇಳಿದ್ದೆವು. ಈಗಾಗಲೇ ಸೇಫ್ ಅಂತ ವಿಶೇಷ ಎಂದರೆ ಕೆಲ ಏರಿಯಾದಲ್ಲಿ ಮಾತ್ರ ಸಿನಿಮಾ ನಿಲ್ಲುತ್ತೆ ಅಂದು ಕೊಂಡಿದ್ದೆವು. ಆದರೆ, ಉತ್ತರ ಕರ್ನಾಟಕದ ಹುಬ್ಬಳ್ಳಿ ಏರಿಯಾದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಜನ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಈಗಾಗಲೇ ನಾವು ಶೇ.20ರಷ್ಟು ಲಾಭದಲ್ಲಿದ್ದೇವೆ. ಸ್ಯಾಟಲೈಟ್ ರೈಟ್ಸ್‍ಅನ್ನು ಝೀ ವಾಹಿನಿಯವರು ಒಳ್ಳೇ ರೇಟ್ ಕೊಟ್ಟು ಖರೀದಿಸಿದ್ದಾರೆ. ಈ ವಾರದಿಂದ ಮೆಲ್ಟಿಫ್ಲೆಕ್ಸ್‍ಗಳಲ್ಲಿ ಎರಡು ಶೋ ಹೆಚ್ಚಾಗುತ್ತದೆ.

ಹೊರ ರಾಜ್ಯಗಳಲ್ಲೂ ಕೂಡ ಚಿತ್ರಕ್ಕೆ ಒಳ್ಳೆಯ ರೆಸ್ಫಾನ್ಸ್ ಸಿಕ್ಕಿದೆ. ಇನ್ನರೆಡು ವಾರಗಳಲ್ಲಿ ಅಬ್ರಾಡ್‍ನಲ್ಲೂ ಚಿತ್ರ ರಿಲೀಸ್ ಮಾಡುವ ಪ್ಲ್ಯಾನ್ ಇದೆ ಎಂದು ಹೇಳಿದರು. ನಟ ರವಿಶಂಕರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ, ನಾಯಕಿ ರಚಿತಾರಾಮ್, ಸಂಗೀತ ನಿರ್ದೇಶಕ ಅನೂಪ್‍ರುಬೇನ್ ಸೇರಿದಂತೆ ಚಿತ್ರತಂಡದ ಕಲಾವಿದರು, ತಂತ್ರಜ್ಞರು ಚಿತ್ರದ ಕುರಿತು ತಮ್ಮ ಸಂತಸವನ್ನು ಹೇಳಿಕೊಂಡರು.

ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ಈಗಾಗಲೇ ರಾಜಕೀಯದ ಗಣ್ಯರು ಹಾಗೂ ಸಿನಿಮಾ ಕ್ಷೇತ್ರದ ಕಲಾವಿದರು, ತಂತ್ರಜ್ಞರು ಕೂಡ ನೋಡಿ ಮೆಚ್ಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ಪರಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments