ಪರ್ಫ್ಯೂಮ್ ಪರಿಮಳ ದಿನವಿಡೀ ಉಳಿಸಿಕೊಳ್ಳಲು ಹೀಗೆ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

Perfume

ಬೆಳಗ್ಗೆ ಹಾಕಿದ ಪರ್ಫ್ಯೂಮ್ ಸಂಜೆವರೆಗೂ ಇರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಅದಕ್ಕಾಗಿಯೇ ಬಗೆಬಗೆಯ ವೆರೈಟಿ ಸುಗಂಧ ದ್ರವ್ಯಗಳನ್ನು ಕೊಂಡುಕೊಳ್ತಾರೆ. 24 ಗಂಟೆ ಪರಿಮಳ ಸೂಸುವ ಪರ್ಫ್ಯೂಮ್ ಅನ್ನೇ ಹೆಚ್ಚಾಗಿ ಖರೀದಿ ಮಾಡ್ತಾರೆ. ಆದ್ರೆ ದಿನವಿಡೀ ಪರಿಮಳ ಘಮ್ಮೆನ್ನುತ್ತಿರಬೇಕು ಅಂದ್ರೆ ಅದಕ್ಕೊಂದು ಸಿಂಪಲ್ ಟ್ರಿಕ್ಸ್ ಇದೆ.

#ನೀವು ಮೈಗೆ ಡಿ ಓಡರೆಂಟ್ ಪೂಸಿಕೊಳ್ಳುವ ವಿಧಾನವನ್ನು ಬದಲಾಯಿಸಬೇಕು. ಜೊತೆಗೆ ನಿಮಗೆ ವಾಸಲಿನ್ ಕೂಡ ಅತ್ಯವಶ್ಯ. ಕತ್ತು, ಕೈ, ಅಥವಾ ದೇಹದ ಯಾವ ಯಾವ ಭಾಗಗಳಿಗೆ ಡಿ ಓಡರೆಂಟ್ ಹಾಕಿಕೊಳ್ಳಲು ಬಯಸುತ್ತಿರೋ ಅಲ್ಲೆಲ್ಲಾ ನಿಧಾನವಾಗಿ ಸ್ವಲ್ಪ ಸ್ವಲ್ಪ ವಾಸಲಿನ್ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ.

ಎಲ್ಲೆಲ್ಲಿ ವಾಸಲಿನ್ ಹಚ್ಚಿಕೊಂಡಿದ್ದಿರೋ ಅಲ್ಲಿ ಡಿ ಓಡರೆಂಟ್ ಹಾಕಿಕೊಳ್ಳಿ. ಹೀಗೆ ಮಾಡೋದ್ರಿಂದ ಪರಿಮಳದ ಘಮ ದಿನವಿಡೀ ಇರುತ್ತದೆ. ಯಾಕಂದ್ರೆ ವಾಸಲಿನ್ ಪರಿಮಳವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಿಮ್ಮ ಸ್ಕಿನ್ ಡ್ರೈ ಆಗಿದ್ದಲ್ಲಿ ಸುವಾಸನೆ ಹೆಚ್ಚು ಹೊತ್ತು ಇರುವುದಿಲ್ಲ, ಹಾಗಾಗಿ ನೀವು ವಾಸಲಿನ್ ಹಚ್ಚಿಕೊಂಡು ನಂತರ ಡಿ ಓಡರೆಂಟ್ ಹಾಕಿಕೊಳ್ಳಬಹುದು.

#ನಿಮ್ಮ ಚರ್ಮದಲ್ಲಿ ತೇವಾಂಶವಿರುವಾಗ ಅಂದರೆ ಸ್ನಾನ ಮಾಡಿದ ತಕ್ಷಣ ಪರ್ಫ್ಯೂಮ್ ಹಾಕಿಕೊಳ‍್ಳಿ. ಇದರಿಂದ ದೇಹದಲ್ಲಿ ಹೆಚ್ಚು ಸಮಯ ಪರ್ಫ್ಯೂಮ್ ಸುವಾಸನೆ ಉಳಿದುಕೊಳ್ಳುತ್ತದೆ.

#ನಾಡಿಮಿಡಿತವಿರುವ ಕಡೆಗೆ ಪರ್ಫ್ಯೂಮ್ ಹಾಕಿಕೊಳ್ಳಿ. ಇದು ಸುದೀರ್ಘ ಕಾಲದವರೆಗೆ ಉಳಿಯುವಂತೆ ನೋಡಿಕೊಳ್ಳುತ್ತದೆ. ಪರ್ಫ್ಯೂಮ್ ಬಳಸುವ ಮೊದಲು ಬಾಡಿ ಕ್ರೀಮ್ ಲೋಷನ್ ಬಳಸಿಕೊಳ್ಳಿ. ಇದರ ಮೇಲೆ ಪರ್ಫ್ಯೂಮ್ ಹಚ್ಚಿಕೊಳ್ಳುವುದರಿಂದ ಸುದೀರ್ಘ ಕಾಲ ಸುವಾಸನೆ ಬೀರುತ್ತದೆ.

#ಎಲ್ಲಕ್ಕಿಂತ ಮುಖ್ಯವಾಗಿ ಕೂದಲುಗಳಿಗೆ ಸ್ವಲ್ಪ ಪರ್ಫ್ಯೂಮ್ ಸ್ಪ್ರೇ ಮಾಡಿಕೊಳ್ಳಿ. ಇದರಿಂದ ನೀವು ಎಲ್ಲೇ ಹೋದರೂ ಸುವಾಸನೆ ಗ್ಯಾರಂಟಿ!

ಇಲ್ಲಿ ಕೆಲವೊಂದು ಟಿಪ್ಸ್‌ನೀಡಲಾಗಿದೆ. ಅವುಗಳನ್ನು ಪಾಲಿಸಿದರೆ ಪರ್‌ಫ್ಯೂಮ್ ಸುವಾಸನೆ ತುಂಬಾ ಹೊತ್ತು ಬೀರುವುದು.  ಪರ್‌ಫ್ಯೂಮ್‌ಹಾಕುವ ಮುಂಚೆ ವ್ಯಾಸೆಲೈನ್ ಅಥವಾ ಪೆಟ್ರೋಲಿಯಂ ಜೆಲ್ಲಿ ಹಚ್ಚಿ ನಂತರ ಸ್ಪ್ರೇ ಮಾಡಿದರೆ ತುಂಬಾ ಹೊತ್ತಿನವರೆಗೆ ಸುವಾಸನೆ ಬೀರುವುದು.

ಸ್ನಾನ ಮಾಡಿ ಬಂದ ತಕ್ಷಣ ಮೈಗೆ ಡಿಯೋಡ್ರೆಂಟ್‌ಹಾಕಿ. ಸೇಂಟ್ ಅಥವಾ ಡಿಯೋಡ್ರೆಂಟ್‌ಹಾಕಿದ ಬಳಿಕ ಮೈಯನ್ನು ಉಜ್ಜಬೇಡಿ. ಕಂಕುಳ ಸಂಧಿಗೂ ಡಿಯೋಡ್ರೆಂಟ್‌ಹಾಕಿ. ಡಿಯೋಡ್ರೆಂಟ್‌ಅನ್ನು ಬಟ್ಟೆಗೆ ಹಾಕುವ ಬದಲು ಮೈಗೆ ಹಾಕಿದರೆ ಸುವಾಸನೆ ಹೆಚ್ಚು ಹೊತ್ತು ಇರುವುದು.

Facebook Comments