ರೈಲಿಗೆ ಸಿಲುಕಿ ಟೆಕ್ಕಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Train--01ಚಿತ್ರದುರ್ಗ, ಫೆ.3- ರೈಲಿಗೆ ಸಿಕ್ಕಿ ಸಾಫ್ಟ್‍ವೇರ್ ಎಂಜಿನಿಯರ್ ಒಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಚಿತ್ರದುರ್ಗ ಹೊರವಲಯದ ಮದಕರಿಪುರದ ಸುಮಾ ಮೃತಪಟ್ಟಿರುವ ಟೆಕ್ಕಿ.

ಈಕೆ ಬೆಂಗಳೂರಿನಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಊರಿಗೆ ವಾಪಸಾಗಿ ಅಲ್ಲೇ ಇದ್ದರು. ಇಂದು ಬೆಳಗ್ಗೆ ರೈಲು ಹಳಿ ಮೇಲೆ ರಕ್ತಸಿಕ್ತ ದೇಹ ಸಿಕ್ಕಿದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರೈಲಿಗೆ ಸಿಲುಕಿ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳೀಯರು ಇದು ಆತ್ಮಹತ್ಯೆಯಲ್ಲ, ಯಾರೋ ಕೊಲೆ ಮಾಡಿ ಇಲ್ಲಿ ದೇಹ ಬಿಸಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ತನಿಖೆಯಿಂದ ನಿಖರ ಮಾಹಿತಿ ಗೊತ್ತಾಗಬೇಕಿದೆ.

Facebook Comments