ನಿಮ್ಮ ಲೈಫ್’ಸ್ಟೈಲ್’ ಬದಲಿಸುವ ಟಿಪ್ಸ್ ಇಲ್ಲಿವೆ ನೋಡಿ..!
ಮನೆಯಿಂದ ಹೊರಗೆ ಬಿದ್ರೆ ಸಾಕು, ಫ್ಯಾಷನೇಬಲ್ ಅಂದೆನಿಸಿಕೊಳ್ಳಬೇಕು ಅಂತಾನೇ ಸಿಕ್ಕಾಪಟ್ಟೆ ತಯಾರಾಗುತ್ತೀರ. ಆದರೆ ನೀವು ಅಂದುಕೊಂಡಂತೆ ಹೊಸ ಲುಕ್ನಲ್ಲಿ ಮಿಂಚುವುದೇ ಇಲ್ಲ. ಹಾಗಂತ ಅದಕ್ಕೆ ನಿಮ್ಮ ಬಾಹ್ಯ ಸೌಂದರ್ಯವನ್ನು ದೋಷಿಸುವ ಅಗತ್ಯವಿಲ್ಲ. ಅಥವಾ ತಕ್ಷಣಕ್ಕೆ ಯಾರೋ ಮಾಡೆಲ್, ಇನ್ಯಾರೋ ನಟ -ನಟಿ ನಿಮ್ಮ ಕಣ್ಣೆದುರು ನಿಲ್ಲುತ್ತಾರೆ.
ಅವರ ಡ್ರೆಸ್, ಕೂದಲ ವಿನ್ಯಾಸ, ನಡೆನುಡಿಯಲ್ಲೆಲ್ಲ ಅವರದ್ದೇ ಅನುಕರಣೆ. ಹಾಗೆ ಬೇರೆಯವರಂತೆ ಇರುವುದು ತಪ್ಪು ಅಥವಾ ಸರಿ ಎನ್ನುವುದಕ್ಕಿಂತ ಅವರಂತೆ ಇರುವುದು ತನ್ನದೊಂದು ವ್ಯಕ್ತಿತ್ವಕ್ಕೆ ಸೂಟ್ಆಗುತ್ತದೆಯಾ ಎಂಬುದನ್ನು ಮೊದಲು ನೋಡಬೇಕು. ಹಾಗಂತ ಬೇಸರಿಸುವ ಅಗತ್ಯವಿಲ್ಲ. ನಿಮ್ಮದು ಎದ್ದು ಕಾಣುವ ವ್ಯಕ್ತಿತ್ವ ಆಗಬೇಕು ಅಂದರೆ ನಿಮ್ಮ ಬದುಕಿನ ಶೈಲಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬೇಕು.
ನಿಮ್ಮ ಜೀವನಶೈಲಿ ಹಾಗೂ ದೇಹದ ಆಕಾರ ಒಟ್ಟಾರೆ ವ್ಯಕ್ತಿತ್ವಕ್ಕೆ ಸರಿಹೊಂದುವುದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ. ಫ್ಯಾಷನ್ಮ್ಯಾಗಜಿನ್ಗಳನ್ನು ಗಮನಿಸುತ್ತಿರಲಿ. ಪೇಜ್ತ್ರಿ ಪಾರ್ಟಿಗಳ ಮೇಲೆ ಕಣ್ಣೀರಲಿ.
ಮಿಕ್ಸ್ಆ್ಯಂಡ್ಮ್ಯಾಚ್ಗೆ ಹೆಚ್ಚು ಒತ್ತು ನೀಡಿ. ದೇಹಕ್ಕೆ ಹೊಂದುವ ಬಟ್ಟೆ ಧರಿಸಿ. ಸಂದರ್ಭಕ್ಕೆ ತಕ್ಕಂತೆ ಅಗತ್ಯ ಮೇಕಪ್ಮಾಡಿಕೊಳ್ಳಿ. ನಿಮ್ಮ ಮುಖಕ್ಕೆ ಹೊಂದಿಕೆಯಾಗುವಂಥ ಹೇರ್ಸ್ಟೈಲ್ಮಾಡಿಕೊಳ್ಳಿ.
ಒಂದೇಬಾರಿಗೆ ವಿಪರೀತ ಆ್ಯಕ್ಸಸ್ಸರೀಸ್ಬಳಕೆ ಒಳ್ಳೆಯದಲ್ಲ. ಮೇಕಪ್ಹಾಗೂ ಬಟ್ಟೆಯ ಬಣ್ಣದಲ್ಲಿ ಬ್ಯಾಲೆನ್ಸ್ಮಾಡಿ. ಸದ್ಯದ ಟ್ರೆಂಡ್ಮೇಲೆ ಗಮನವಿರಲಿ. ದುಶ್ಚಟಗಳಿಂದ ದೂರವಿರಿ. ಇದು ಫ್ಯಾಷನ್ಐಕಾನ್ಆಗಬೇಕೆಂಬ ನಿಮ್ಮ ಆಸೆಗೆ ಮಣ್ಣೇರಚುತ್ತದೆ.
ಆತ್ಮವಿಶ್ವಾಸ ನಿಮ್ಮ ನಡೆನುಡಿಯಲ್ಲಿ ಕಾಣುವಂತಿರಲಿ. ಚರ್ಮ, ಉಗುರುಗಳ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಉತ್ತಮ ಆಹಾರ, ಧ್ಯಾನ, ವ್ಯಾಯಾಮ ನಿಮ್ಮ ಜತೆ ಇರಲಿ. ನಿಮ್ಮ ದೇಹಕ್ಕೆ ಸರಿಹೊಂದುವಂಥ ಅಲಂಕಾರವಿರಲಿ. ಗಮನ ಸೆಳೆಯುವ ವ್ಯಕ್ತಿತ್ವ ರೂಪಿಸಿಕೊಳ್ಳಿ.