ಬ್ರಾಹ್ಮೀ ಮುಹೂರ್ತದಲ್ಲಿ ಏಕೆ ನಿದ್ರೆಯಿಂದ ಏಳಬೇಕು ಗೊತ್ತೇ ..?

ಈ ಸುದ್ದಿಯನ್ನು ಶೇರ್ ಮಾಡಿ

morningದಿನದಲ್ಲಿ ಮಾಡಬೇಕಾದ ಆಚರಣೆ, ಅನುಸರಣೆಗೆ “ದಿನಚರ್ಯ” ಎಂದು ಕರೆಯುತ್ತಾರೆ. ದಿನಚರ್ಯೆಯು ಪ್ರಕೃತಿಯ ಚಕ್ರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಬೆಳಗಿನ ಜಾವವು ನಿಮ್ಮ ಇಡೀ ದಿನವನ್ನು ನಿರ್ಧರಿಸುವುದರಿಂದ ಆಯುರ್ವೇದವು ಬೆಳಗಿನ ಜಾವದ ಬಗ್ಗೆ ಹೆಚ್ಚು ಒತ್ತೆಯಿಡುತ್ತದೆ.

ದೇಹ ಮತ್ತು ಮನಸ್ಸಿಗೆ ದಿನನಿತ್ಯದ ಶಿಸ್ತಿದ್ದರೆ ರೋಗನಿರೋಧಕ ಶಕ್ತಿಯು ಬಲಿಷ್ಠವಾಗುವುದಲ್ಲದೆ, ದೇಹದಲ್ಲಿರುವ ತ್ಯಾಜ್ಯಗಳು ಹೊರಕ್ಕೆ ಎಸೆಯಲ್ಪಟ್ಟು ದೇಹವು ಶುದ್ಧಿಯಾಗುತ್ತದೆಂದು ಆಯುರ್ವೇದವು ನಂಬುತ್ತದೆ.

ಸರಳವಾದ ದಿನಚರಿಗಳಿಂದ ದೇಹ ಮತ್ತು ಮನಸ್ಸಿನ ಶುದ್ಧಿಯಾಗುತ್ತದೆ, ದೋಷಗಳು ಸಮತೋಲನಕ್ಕೆ ಬರುತ್ತವೆ, ರೋಗನಿರೋಧಕ ಶಕ್ತಿಯು ಬಲಿಷ್ಠವಾಗುತ್ತದೆ ಮತ್ತು ಇಡಿ ದಿನವನ್ನು ತಾಜಾತನದಿಂದ ಕಳೆಯಬಹುದು.

‘ಬ್ರಾಹ್ಮೇಮುಹೂರ್ತೆ ಉತ್ತಿಷ್ಠೇತ್ ಸ್ವಸ್ಥೋ ರಕ್ಷಾರ್ಥಂ ಆಯುಷಃ’ – ‘ಹೆಚ್ಚುಕಾಲ ಗಟ್ಟಿಮುಟ್ಟಾದ ಜೀವನ ನಡೆಸಬೇಕೆನ್ನುವವರು ಬ್ರಾಹ್ಮೀಮುಹೂರ್ತದಲ್ಲಿ ಏಳಬೇಕು.

’ ದೀರ್ಘ ಆಯುಷಿಗಳಾಗಲು ಇದೊಂದು ಗುಟ್ಟು. ಇದಕ್ಕಾಗಿ ಕಷ್ಟಪಟ್ಟು ಬೇಗನೆ ಏಳುವುದಲ್ಲ, ಇಷ್ಟಪಟ್ಟು ಏಳಬೇಕು. ಸೂರ್ಯೋದಯಕ್ಕೆ ಮುಂಚಿನ 108 ನಿಮಿಷಗಳಿಗೆ ಉಷಃಕಾಲವೆಂದು, 84 ನಿಮಿಷಕ್ಕೆ ಪ್ರಭಾತಕಾಲವೆಂದೂ, 72 ನಿಮಿಷಗಳ ಅವಧಿಗೆ ಅರುಣೋದಯಕಾಲವೆಂದು ಹೆಸರು!

ಸೂರ್ಯೋದಯಕ್ಕಿಂತ 90 ನಿಮಿಷಗಳ ಮೊದಲು ಆರಂಭವಾಗುವುದೇ ಬ್ರಾಹ್ಮೀಮೂಹೂರ್ತ. ಇದಕ್ಕೂ 6 ನಿಮಿಷಗಳ ಮೊದಲು ಅಂದರೆ 6 ಗಂಟೆಯ ಹೊತ್ತಿಗೆ ಸೂರ್ಯೋದಯವಾದರೆ ಬೆಳಗ್ಗೆ 4 ಗಂಟೆ 24 ನಿಮಿಷದ ಸಮಯದಲ್ಲಿ ಏಳುವುದೇ ಅತ್ಯಂತ ಪ್ರಶಸ್ತ ಎನ್ನಲಾಗಿದೆ.

ಬ್ರಾಹ್ಮೀಮುಹೂರ್ತದಲ್ಲಿ ಪರಿಸರದ ಶಬ್ದಮಾಲಿನ್ಯ ಸ್ವಲ್ಪವೂ ಇರುವುದಿಲ್ಲ. ಯಾವುದೇ ಟೀವಿಯ ಶಬ್ದ ಕಿವಿಗಪ್ಪಳಿಸುವುದಿಲ್ಲ. ಗಾಳಿಯೂ ಶುದ್ಧವಾಗಿದ್ದು ಮನಸ್ಸು ಉಲ್ಲಸಿತವಾಗಿರುತ್ತದೆ.

ಇಡೀ ದಿನದಲ್ಲಿ ಅತಿ ಹೆಚ್ಚು ಆಮ್ಲಜನಕ ಸಿಗುವ ಸಮಯವಿದು. ಏಕಾಗ್ರತೆ ಅತ್ಯಂತ ಅಧಿಕವಿರುವ ಕಾಲ. ಮನಸ್ಸು ಉತ್ಸಾಹದಿಂದ ಇದ್ದು ರಾತ್ರಿ ಎರಡುತಾಸು ಓದುವವರು ಬ್ರಾಹ್ಮೀಮುಹೂರ್ತದಲ್ಲಿ ಒಂದುತಾಸು ಓದಿದರೆ ಸಾಕು! ಯಾರೇ ಆಗಿರಲಿ, ಬೆಳಗಿನ ಜಾವ ಮಾಡುವ ಕೆಲಸಗಳು ಹೆಚ್ಚು ವೇಗದಲ್ಲಿ ಸಾಗುತ್ತದೆ.

ಒಮ್ಮೆ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ತೊಡಗಿದ ಮೇಲೆ, ಜಗತ್ತಿನ ಎಲ್ಲಾದರೂ ಸಂಭವಿಸಿದ ಆಘಾತಕಾರಿ, ಅಹಿತಕರ ಘಟನಾವಳಿಗಳನ್ನು ತಿಳಿದ ಬಳಿಕ ಖೇದವು ನಮ್ಮನ್ನು ಆವರಿಸುತ್ತದೆ.

Facebook Comments