ಜಾಗಿಂಗ್’ಗಿಂತ ವಾಕಿಂಗ್ ಬೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Walkig--01

ಇತ್ತೀಚೆಗೆ ಯುವಜನತೆಯು ಜನರ ಆರೋಗ್ಯದ ಹಿತಾಸಕ್ತಿಗಾಗಿ ಮತ್ತು ಮನೋರಂಜನೆಗೂ ಸಹ   ಮ್ಯಾರ್‌ಥಾನ್‌‌ನಂತಹ ಗೇಮ್‌ಗಳನ್ನು ಆಯೋಜಿಸುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಜಾಗಿಂಗ್‌ನಿಂದ ಹಲವಾರು ಆರೋಗ್ಯದ ಪ್ರಯೋಜನಗಳಿವೆ.

ಆದರೆ, ಮನುಷ್ಯನಿಗೆ ಸಹಜವಾಗಿ ಕೆಲವೊಂದು ವಿಧಿಗಳು ರೂಢಿಯಾಗುತ್ತದೆ. ಪ್ರಕೃತಿದತ್ತವಾಗಿ ನಮಗೆ ಏನೆಲ್ಲಾ ಸೂಕ್ತ ಎಂಬುದು ಶರೀರವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ತಿಳಿದುಬಿಡುತ್ತದೆ.

ನಿಧಾನನಡಿಗೆ, ವೇಗದನಡಿಗೆ, ಓಟಗಳನ್ನು ಆರೋಗ್ಯದ ಕಾಳಜಿಯಿರುವ ಬಹುಪಾಲು ಜನರು ಅಭ್ಯಾಸ ಮಾಡುತ್ತಾರೆ. ಕೆಲವರು ದಿನವಿಡೀ ಕುಳಿತುಕೊಳ್ಳದೆ ಆಕಡೆ, ಈಕಡೆ ಓಡಾಡುತ್ತೇವೆ.

ಇಡೀದಿನ ನಡೆದದ್ದು ಒಟ್ಟು ಸೇರಿಸಿದರೆ ನಾಲ್ಕುಕಿಲೋಮೀಟರ್ ಆದೀತು. ಆದ್ದರಿಂದ ಪ್ರತ್ಯೇಕವಾಗಿ ವಾಕಿಂಗ್ ಮಾಡುವುದಿಲ್ಲ ಎಂದು ಸಬೂಬು ನೀಡುತ್ತಾರೆ. ನಿಜವಾಗಿ ಅದು ವಾಕಿಂಗ್ ಅಲ್ಲ,

ಕುಳಿತೇ ಕೆಲಸ ಮಾಡುವುದಕ್ಕಿಂತ ಚಲಿಸುತ್ತ ಕೆಲಸಮಾಡುವುದು ಎಷ್ಟೋಪಾಲು ಮೇಲು. ಹಾಗೆಂದು ಹೀಗೆ ಅಲೆದಾಡುವುದಕ್ಕೂ ನಿಯಮಾನುಸಾರ ನಡೆಯುವುದಕ್ಕೂ ಬಹಳ ವ್ಯತ್ಯಾಸವಿದೆ.

ಜಗತ್ತಿನಲ್ಲಿರುವ ಪ್ರಾಣಿಗಳನ್ನೆಲ್ಲಾ ಒಮ್ಮೆ ನೆನಪಿಸಿಕೊಳ್ಳಿ. ಕಾಲಿನ ತೊಡೆಯ ಭಾಗದ ಮಾಂಸಖಂಡಗಳು ಬಹಳ ಅಗಲವಾಗಿದ್ದು, ಕೆಳಭಾಗ ತೆಳ್ಳಗೆ ಇರುವ ಪ್ರಾಣಿಗಳು ಸಹಜವಾಗಿ ಓಡಲು ಸಶಕ್ತವಾದವುಗಳು! ಕುದುರೆ, ಸಿಂಹ, ಹುಲಿ, ಚಿರತೆ, ಜಿಂಕೆ, ಬೆಕ್ಕು, ನಾಯಿಗಳ ಕಾಲುಗಳು ಇಂತಹ ಶರೀರ ರಚನೆಯನ್ನು ಹೊಂದಿದ್ದು ಓಡುವುದು ಅವುಗಳ ಪ್ರಾಕೃತಿಕ ಗುಣಧರ್ಮ.

ಅದೇ ರೀತಿ ಕಾಲಿನ ತೊಡೆಯ ಭಾಗ ಹಾಗೂ ಕೆಳಭಾಗ ಹೆಚ್ಚುಕಡಿಮೆ ಸಮನಾಗಿದ್ದರೆ ಆ ಪ್ರಾಣಿಗಳು ನಡೆದಾಡುವುದಕ್ಕೇ ಸೂಕ್ತ ಹೊರತು ಓಡುವುದಕ್ಕಲ್ಲ! ಮನುಷ್ಯ, ಆನೆ, ದನ, ಎಮ್ಮೆ, ಮಂಗ, ಕತ್ತೆಗಳ ಕಾಲುಗಳು ಈ ರೀತಿ ಇದ್ದು ಅನಿವಾರ್ಯ ಸಂದರ್ಭಗಳಲ್ಲಿ ಓಡುವ ಸಾಮರ್ಥ್ಯವಿರುತ್ತದೆ. ಹಾಗೆಂದು ಇದೇ ನಿತ್ಯಾಭ್ಯಾಸ ಅಲ್ಲ ಎಂಬುದನ್ನು ಪ್ರಕೃತಿ ನಮಗೆ ಹೇಳುತ್ತಿದೆ.

ಅಥ್ಲೀಟ್ಗಳು, ಕ್ರೀಡಾಪಟುಗಳು ಓಡುವುದನ್ನು ಅಭ್ಯಾಸ ಮಾಡಲೇಬೇಕಾಗುತ್ತದೆ. ಅವರಿಗದು ಅನಿವಾರ್ಯ. ಉಳಿದವರ ದೇಹಕ್ಕೆ ಜಾಗಿಂಗ್ ಅಷ್ಟೇನೂ ಹಿತವಾದುದಲ್ಲ. ನಮಗೆ ನಡಿಗೆಯೇ ಹೆಚ್ಚು ಆರೋಗ್ಯದಾಯಕ ಎಂದು ಹೇಳಬವುದು !

Facebook Comments