ಉದ್ಯಮಿ ವಿಜಯ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Vijay-amalya--01
ಬ್ರಿಟನ್, ಫೆಬ್ರವರಿ 04 : ಭಾರತದ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಲಂಡನ್ ಸೇರಿರುವ ಮದ್ಯ ದೊರೆ ವಿಜಯ ಮಲ್ಯ ಅವರಿಗೆ ಹೊಸ ಸಂಕಷ್ಟ ಎದುರಾಗಿದ್ದು, ಮಲ್ಯ ಅವರನ್ನು ಗಡಿಪಾರು ಮಾಡಲು ಬ್ರಿಟನ್ ಒಪ್ಪಿಗೆ ನೀಡಿದೆ. ಈ ಮೂಲಕ  ಭಾರತಕ್ಕೆ ಗೆಲುವು ದಕ್ಕಿದಂತಾಗಿದೆ.

ಉದ್ಯಮಿ ವಿಜಯ ಮಲ್ಯ ಗಡಿಪಾರು ಮಾಡುವ ಪತ್ರಕ್ಕೆ ಬ್ರಿಟನ್ ಗೃಹ ಕಾರ್ಯದರ್ಶಿ ಸಹಿ ಹಾಕಿದ್ದಾರೆ. ಲಂಡನ್‌ನ ವೆಸ್ಟ್ ಮಿನಿಸ್ಟರ್ ಕೋರ್ಟ್ ವಿಜಯ ಮಲ್ಯ ಗಡಿಪಾರಿಗೆ ಒಪ್ಪಿಗೆ ನೀಡಿತ್ತು.

ಕೋರ್ಟ್ ಆದೇಶದ ಪ್ರತಿ ಬ್ರಿಟನ್ ಗೃಹ ಕಾರ್ಯದರ್ಶಿಗೆ ತಲುಪಿತ್ತು. ಅವರು ಇಂದು ಗಡಿಪಾರಿಗೆ ಒಪ್ಪಿಗೆ ನೀಡಿ, ನ್ಯಾಯಾಲಯದ ಆದೇಶ ಪ್ರತಿಗೆ ಸಹಿ ಹಾಕಿದ್ದಾರೆ.

ವಿಜಯ ಮಲ್ಯ ಅವರು ‘ದೇಶಭ್ರಷ್ಟ ಆರ್ಥಿಕ ಅಪರಾಧಿ’ ಎಂದು ಘೋಷಣೆ ಮಾಡಲಾಗಿದೆ. ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಈ ಕುರಿತು ಘೋಷಣೆ ಮಾಡಲಾಗಿದೆ. ವಿಜಯ ಮಲ್ಯ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಲು ಸಾಕಷ್ಟು ಒತ್ತಡವಿತ್ತು.

ವಿಜಯ ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಮಾಡಲು ಕಾನೂನು ತೊಡಕು ಉಂಟಾಗಿತ್ತು. ಮಲ್ಯ ಗಡಿಪಾರು ಮಾಡಲು ಯುಕೆ ಸರ್ಕಾರ ಎಂಎಲ್‌ಟಿ ಒಪ್ಪಂದ ಅಡ್ಡವಾಗಿತ್ತು. ಈಗ ಎಲ್ಲಾ ಕಾನೂನು ತೊಡಕು ಅಂತ್ಯಗೊಂಡಿದ್ದು, ಗಡಿಪಾರಿಗೆ ಅಂಕಿತ ಬಿದ್ದಿದೆ.

Facebook Comments

Sri Raghav

Admin