4 ವರ್ಷದ ಮಗು ಮಾಡಿದ ಯಡವಟ್ಟು, ಗರ್ಭಿಣಿ ತಾಯಿಗೆ ತಾಗಿದ ಗುಂಡು..!

ಈ ಸುದ್ದಿಯನ್ನು ಶೇರ್ ಮಾಡಿ

Gun

ವಾಷಿಂಗ್ಟನ್, ಫೆ.5- ನಾಲ್ಕು ವರ್ಷದ ಮಗುವೊಂದು ಆಕಸ್ಮಿಕವಾಗಿ ಹಾರಿಸಿದ ಗುಂಡಿನಿಂದ ಗರ್ಭಿಣಿಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಅಮೆರಿಕದ ರಾಜಧಾನಿ ವಾಷಿಂಗ್ಟನ್‍ನಲ್ಲಿ ನಡೆದಿದೆ.

ಗನ್ ಕೈಗೆ ಸಿಕ್ಕಿದ್ದರ ಪರಿಣಾಮ 4 ವರ್ಷದ ಬಾಲಕನೊಬ್ಬ ತಮಾಷೆ ಮಾಡಲು ಹೋಗಿ ಗರ್ಭಿಣಿ ತಾಯಿಯ ಹಣೆಗೆ ಗುಂಡಿಟ್ಟುರುವುದಾಗಿ ಪೆÇಲೀಸರು ತಿಳಿಸಿದ್ದಾರೆ.

27 ವರ್ಷದ ಮಹಿಳೆ ಮತ್ತು ಆಕೆಯ ಬಾಯ್ ಫ್ರೆಂಡ್ ಟಿವಿ ನೋಡುತ್ತಿದ್ದಾಗ ಅಲ್ಲೇ ಆಡುತ್ತಿದ್ದ ನಾಲ್ಕು ವರ್ಷದ ಮಗುವಿಗೆ ಗನ್ ಸಿಕ್ಕಿದೆ. ಅಚಾನಕ್ ಆಗಿ ಮಗು ತಾಯಿಯ ಹಣೆಗೆ ಗನ್ ಹಿಟ್ಟು ಟ್ರಿಗರ್ ಎಳೆದಿದೆ.

ಮಹಿಳೆ ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದು ತೀವ್ರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ನಂತರ ಹೆಚ್ಚುವರಿ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗನ್ ಮಹಿಳೆಯ ಮೊದಲ ಪತಿಯದ್ದಾಗಿದ್ದು ನನ್ನ ಗನ್ ಅನ್ನು ಕದ್ದು ತೆಗೆದುಕೊಂಡು ಹೋಗಿದ್ದಳು ಎಂದು ಮಾಜಿ ಪತಿ ಹೇಳಿದ್ದಾನೆ.

Facebook Comments

Sri Raghav

Admin