ನಾಳೆಯಿಂದ ಚುಟುಕು ಸಮರ

ಈ ಸುದ್ದಿಯನ್ನು ಶೇರ್ ಮಾಡಿ

t-20ವೆಲ್ಲಿಂಗ್ಟನ್, ಫೆ.5- ಕಿವೀಸ್ ವಿರುದ್ಧ ನಡೆದ ಏಕದಿನ ಸರಣಿಯನ್ನು 4-1 ಅಂತರದಿಂದ ಗೆದ್ದು ಬೀಗಿರುವ ಟೀಂ ಇಂಡಿಯಾ ನಾಳೆಯಿಂದ 3 ಪಂದ್ಯಗಳ ಚುಟುಕು ಸಮರವನ್ನು ಎದುರಿಸಲಿದೆ.

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು ಚುಟುಕು ಸರಣಿಯನ್ನು ಗೆದ್ದು ಬೀಗುವ ವಿಶ್ವಾಸದಲ್ಲಿದೆ. ನ್ಯೂಜಿಲೆಂಡ್ ಕೂಡ ಏಕದಿನ ಸರಣಿಯ ಸೋಲಿನ ಕಹಿಯನ್ನು ಮರೆತು ಚುಟುಕು ಸಮರದಲ್ಲಾದರೂ ಜಯಿಸುವ ವಿಶ್ವಾಸದಲ್ಲಿ ಕೇನ್ ವಿಲಿಯಮ್ಸ್ ಪಡೆ ಇದೆ.

Facebook Comments