ಪ್ರಯಾಣಕ್ಕೆ ಹೊರಡುವ ಮುನ್ನ

ಈ ಸುದ್ದಿಯನ್ನು ಶೇರ್ ಮಾಡಿ

travelಪ್ರಯಾಣವೆಂದರೆ ಒಂದು ಅನುಭವಗಳನ್ನು ಒಟ್ಟುಗೂಡಿಸುವ ಮತ್ತು ಅವುಗಳಿಂದ ಕಲಿಯುವ ಒಂದು ಪ್ರಕ್ರಿಯೆ ಆಗಿದೆ. ನಮ್ಮ ಮನಸ್ಸಿನ ಸಂತೋಷಕ್ಕಾಗಿ ಮತ್ತು ಯಾವುದನ್ನಾದರೂ ಅನ್ವೇಷಿಸುವುದಕ್ಕಾಗಿ ಮನಸ್ಸನ್ನು ಶಾಂತ ಪಡಿಸುವುದಕ್ಕಾಗಿ ಅಥವಾ ನಮ್ಮೊಳಗಿನ ಶೂನ್ಯ ಸ್ಥಳಗಳನ್ನು ತುಂಬಿಸುವುಕ್ಕಾಗಿ ನಾವೆಲ್ಲರೂ ಪ್ರಯಾಣ ಮಾಡುತ್ತೇವೆ.

ಮತ್ತು ಎಲ್ಲಾ ಸಮಯದಲ್ಲೂ ಕೆಲವು ಅಂಶಗಳಿಂದ ಮತ್ತು ಕೆಲವು ಅನುಭವಗಳಿಂದ ನಾವು ಸಾಕಷ್ಟು ಕಲಿತಿರುವೆವು ಕೂಡ. ತಮ್ಮ ಮಿತಿಗಳನ್ನು ಮತ್ತು ಬಂಧನಗಳನ್ನು ಮೀರಿ ಪ್ರಯಾಣಿಸುವ ಹಲವು ಜನರಿದ್ದಾರೆ ಇಂತಹ ಜನರು ಸಾಕಷ್ಟು ಅನುಭವಗಳನ್ನು ಹೊಂದಿರುವವರಾಗಿರುತ್ತಾರೆ.

ಯಾವುದೇ ಕಾರಣಕ್ಕೂ ಕಾರಣವಿಲ್ಲದೇ ಮೊದಲು ನೀವೆ ಮುಂದೆ ಬಿದ್ದು ಮಾತನಾಡಿಸುವ ಗೋಜಿಗೆ ಹೋಗಬೇಡಿ. ಮಾತನಾಡುವಾಗ ಪೂರ್ಣವಾಗಿ ಕೇಳಿಸಿಕೊಂಡು ನಂತರ ನಿಮ್ಮ ಮಾತನ್ನು ಮುಂದುರಿಸಿ.

ಅವರು ಯಾರು ಎಂಬುದೇ ಗೊತ್ತಿರುವುದಿಲ್ಲ. ಚೆಲ್ಲು ಚೆಲ್ಲಾಗಿ ಮಾತನಾಡುತ್ತಾ ನಿಮ್ಮ ವ್ಯಕ್ತಿತ್ವವನ್ನು ಕುಗ್ಗಿಸಿಕೊಳ್ಳಬೇಡಿ. ಪೂರ್ತಿಯಾಗಿ ನಂಬಿ ,ಎಲ್ಲ ನಿಮ್ಮ ವೈಯಕ್ತಿಕ ವಿಷಯಗಳೆಲ್ಲವನ್ನು ಹೇಳಿಕೊಳ್ಳುವ ತಪ್ಪು ಮಾಡಬೇಡಿ.

ಮಾತಿನ ಮೇಲೆ ಹಿಡಿತವಿರಲಿ. ಎಷ್ಟು ಬೇಕೋ ಅಷ್ಟೇ ಮಾತನಾಡಿದರೆ ಉತ್ತಮ.  ಫೋನ್‌ನಂಬರ್‌, ಇಮೇಲ್‌ಮುಂತಾದ ಐಡಿಯನ್ನು ಕೊಟ್ಟು ಸ್ನೇಹಕ್ಕೆ ಬೀಳಬೇಡಿ. ನಿಧಾನವಾಗಿ ಕೂಲಂಕುಶವಾಗಿ ಯೋಚಿಸಿ. ನಂತರ ವಿನಿಮಯ ಮಾಡಿಕೊಳ್ಳಿ.

ಅನಾವಶ್ಯಕವಾಗಿ ಚರ್ಚೆಗೆ ಇಳಿದು ವಾದ ವಿವಾದ ಮಾಡಲು ಹೋಗಬೇಡಿ.  ಸಾಧ್ಯವಾದಷ್ಟು ನಿಧಾನವಾಗಿ ಮಾತನಾಡಿ. ಇಲ್ಲವಾದರೆ ಪಕ್ಕದಲ್ಲಿರುವವರಿಗೆ ನಿಮ್ಮ ಮಾತನ್ನು ಕೇಳಲು ಆಗುವುದಿಲ್ಲ.

Facebook Comments