ಮೊದಲ ಟಿ20, ನ್ಯೂಜಿಲೆಂಡ್ ವಿರುದ್ದ ಭಾರತಕ್ಕೆ ಸೋಲು

ಈ ಸುದ್ದಿಯನ್ನು ಶೇರ್ ಮಾಡಿ

Cricket

ವೆಲ್ಲಿಂಗ್ಟನ್. ಫೆ.06 : ನ್ಯೂಜಿಲೆಂಡ್ ಪ್ರವಾಸದಲ್ಲಿ ಇರುವ ಭಾರತವು ಇಂದು ಮೊದಲ ಟಿ20 ಮುಗ್ಗರಿಸಿದೆ. ಈ ಮೊದಲೂ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಇಂದು ಅದೇ ಭರವಸೆಯಲ್ಲಿ ಟಾಸ್ ಗೆದ್ದು ನಾಯಕ ರೋಹಿತ್ ಶರ್ಮಾ ಬೌಲ್ಲಿಂಗ್ ಆಯ್ಕೆ ಮಾಡಿಕೊಂಡರು.

ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತನ್ನ ಇಪ್ಪತ್ತು ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 219 ಗಳಿಸಿ ಭಾರತಕ್ಕೆ 220 ರನ್ ಗುರಿ ನೀಡಿತು. ನ್ಯೂಜಿಲೆಂಡ್ ಪರ ಬ್ಯಾಟಿಂಗ್ ಮಾಡಿದ ಟಿಮ್ ಸೈಫರ್ಟ್ 84, ಕೊಲಿನ್ ಮುನ್ರೋ 34, ಕೇನ್ ವಿಲಿಯಮ್ಸನ್ 34, ರಾಸ್ ಟೇಲರ್ 23, ಸ್ಕಾಟ್ ಕಗ್ಲಿಜೆನ್ 20 ರನ್ ಕಾಣಿಕೆ ನೀಡಿದರು.

ಭಾರತದ ಬೌಲರ್ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಕಲೀಲ್ ಅಹ್ಮದ್, ಕ್ರುನಾಲ್ ಪಾಂಡ್ಯ , ಯುಜ್ವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು.

ಬ್ಯಾಟಿಂಗ್ ಪ್ರಾರಂಭಿಸಿದ ಭಾರತದ ಮೊದಲಾ ವಿಕೆಟ್ ನಾಯಕ ರೋಹಿತ್ ಕೇವಲ 1 ರನ್ ಸಿಡಿಸಿ ಔಟಾದರು ಶಿಖರ್ ಧವನ್ 29 ರನ್ ಸಿಡಿಸಿದ್ದರು ನಂತರ ರಿಷಬ್ ಪಂತ್ 4, ವಿಜಯ್ ಶಂಕರ್ 2, ದಿನೇಶ್ ಕಾರ್ತಿಕ್ 5 ರನ್ ಗಲ್ಲಿಸುವ ಮೂಲಕ ತಮ್ಮ ವಿಕೆಟ್ ಒಪ್ಪಿಸಿದರು.

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ 39 ರನ್ ಕಾಣಿಕೆ ನೀಡಿದರೆ ನಂತರ ಬಂದ ಆಟಗಾರರು ಸಹ ಹಾರ್ದಿಕ್ ಪಾಂಡ್ಯ 4, ಕ್ರುನಾಲ್ ಪಾಂಡ್ಯ 20, ಭುವನೇಶ್ವರ್ ಕುಮಾರ್ 1, ಯಜುವೇಂದ್ರ ಚೆಹಾಲ್1 ವಿಕೆಟ್ ಪತನದೊಂದಿಗೆ ಭಾರತ 19.2 ಓವರ್‌ಗಳಲ್ಲಿ 139 ರನ್‌ಗೆ ಆಲೌಟ್ ಆಯಿತು. ಈ ಮೂಲಕ ನ್ಯೂಜಿಲೆಂಡ್ 80 ರನ್ ಭರ್ಜರಿ ಗೆಲುವು ಸಾಧಿಸಿತು. 3 ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿತು.

ಸಂಕ್ಷಪ್ತ ಸ್ಕೋರ್ :
ಭಾರತ : 139 (19.2/20 ov, target 220)
ನ್ಯೂಜಿಲ್ಯಾಂಡ್ : 219/6

 

Facebook Comments

Sri Raghav

Admin