ಮುಗ್ಗರಿಸಿದ ಮಹಿಳೆಯರು, 23 ರನ್‍ಗಳ ಸೋಲು

ಈ ಸುದ್ದಿಯನ್ನು ಶೇರ್ ಮಾಡಿ

womenವೆಲ್ಲಿಂಗ್ಟನ್, ಫೆ.6- ಕಿವೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಗೆದ್ದು ಬೀಗಿದ್ದ ಭಾರತೀಯ ವನಿತೆಯರು ಊಇಂದಿಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ 23 ರನ್‍ಗಳಿಂದ ಸೋಲುವ ಮೂಲಕ ಮುಖಭಂಗ ಅನುಭವಿಸಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‍ನ ಡಿವೈನೇ (62 ರನ್) ಭರ್ಜರಿ ಬ್ಯಾಟಿಂಗ್‍ನಿಂದ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್‍ಗಳನ್ನು ಕಳೆದುಕೊಂಡು 159 ರನ್‍ಗಳನ್ನು ಗಳಿಸಿತ್ತು.

ಈ ಗುರಿಯನ್ನು ಬೆನ್ನಟ್ಟಿದ ಭಾರತೀಯ ವನಿತೆಯರು ಸ್ಮೃತಿಮಂದನಾರಾ ಆಕರ್ಷಕ (58 ರನ್, 7 ಬೌಂಡರಿ, 3 ಸಿಕ್ಸರ್)ರ ಅರ್ಧಶತಕ ನೆರವಿದ್ದರೂ 23 ರನ್‍ಗಳಿಂದ ಸೋಲನ್ನಪ್ಪಿತು.

Facebook Comments