ತಿಂಗಳಾಂತ್ಯಕ್ಕೆ ಎಣ್ಣೆ – ಸೀಗೆಕಾಯಿ ಸೌಹಾರ್ದ ಭೇಟಿ..!

ಈ ಸುದ್ದಿಯನ್ನು ಶೇರ್ ಮಾಡಿ

Kim--01

ವಾಷಿಂಗ್ಟನ್,ಫೆ.6- ಅಣ್ವಸ್ತ್ರ ನಿಶ್ಶಸ್ತ್ರೀಕರಣ ವಿಷಯದಲ್ಲಿ ಮುಂದುವರಿದಿರುವ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಉತ್ತರ ಕೊರಿಯಾ ಅಧ್ಯಕ್ಷ ಕಿನ್ ಜೊಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ.27 ಮತ್ತು 28ರಂದು ವಿಯೆಟ್ನಾಂನಲ್ಲಿ ಎರಡನೇ ಸುತ್ತಿನ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ವಾಷಿಂಗ್ಟನ್‍ನಲ್ಲಿ ಇಂದು ಅಮರಿಕ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಮಾತನಾಡಿ ಈ ವಿಷಯ ತಿಳಿದ ಟ್ರಂಪ್, ಉತ್ತರ ಕೊರಿಯಾ ಅಧ್ಯಕ್ಷರೊಂದಿಗೆ ತಮ್ಮ ಸಂಬಂಧ ಉತ್ತವಾಗಿವೆ.

ಕೊರಿಯಾ ದ್ವೀಪಕಲ್ಪದಲ್ಲಿ ಶಾಂತಿ ನೆಲೆಗೊಳ್ಳುವಂತೆ ಮಾಡಲು ಹಾಗೂ ಈ ನಿಟ್ಟಿನಲ್ಲಿ ಮಾತುಕತೆ ಮತ್ತಷ್ಟು ಫಲಪ್ರದವಾಗಲು ಮಾಡಬೇಕಾದ ಕೆಲಸಗಳು ಸಾಕಷ್ಟಿದೆ ಎಂದು ತಿಳಿಸಿದರು.

ಉತ್ತರ ಕೊರಿಯಾ ಜೊತೆ ಅಮೆರಿಕ ಉತ್ತಮ ಸಂಬಂಧ ಹೊಂದಲು ನಾನು ಸಾಕಷ್ಟು ಶ್ರಮಿಸಿದ್ಧೇನೆ. ನಾನು ಅಮೆರಿಕ ಅಧ್ಯಕ್ಷನಾಗಿ ಚುನಾಯಿತನಾಗದಿದ್ದರೆ, ಇಷ್ಟು ಹೊತ್ತಿಗಾಗಲೇ ಉಭಯ ದೇಶಗಳ ನಡುವ ದೊಡ್ಡ ಯುದ್ದವೇ ನಡೆಯುತ್ತಿತ್ತು ಎಂದು ಟ್ರಂಪ್ ಹೇಳಿದರು.

ಕಳೆದ ವರ್ಷ ಸಿಂಗಪುರ್‍ನಲ್ಲಿ ಕಿಮ್ ಮತ್ತು ಟ್ರಂಪ್ ಪರಸ್ಪರ ಭೇಟಿಯಾಗಿ ಐತಿಹಾಸಿಕ ಶೃಂಗಸಭೆಯಲ್ಲಿ ಚರ್ಚಿಸಿದ್ದರು. ನಂತರ ಮಾರಕ ಅಣ್ವಸ್ತ್ರಗಳು ಮತ್ತು ಕ್ಷಿಪಣಿ ಪ್ರಯೋಗಗಳನ್ನು ನಿಲ್ಲಿಸುವುದಾಗಿ ಉತ್ತರ ಕೊರಿಯಾ ತಿಳಿಸಿತ್ತು.

ತರುವಾಯ ಎರಡು ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿತ್ತು. ಈಗ ಉಭಯ ದೇಶಗಳ ನಾಯಕರು ಎರಡನೇ ಸುತ್ತಿನ ಮಾತುಕತೆಗೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

Facebook Comments

Sri Raghav

Admin