ಪ್ರೊಟೀನ್‌ ಕೊರತೆ ಎದುರಿಸುತ್ತಿರುವರಿಗೆ ಇಲ್ಲಿದೆ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

proteinದೇಹದ ಆರೋಗ್ಯದಲ್ಲಿ ಹಾಗೂ ಮನೋದೈಹಿಕ ಚಟುವಟಿಕೆಗಳಲ್ಲಿ ಪ್ರೊಟೀನಿನ ಪಾತ್ರವು ಮಹತ್ವದ್ದು. ದೇಹವೆಂಬ ಯಂತ್ರದ ಎಲ್ಲ ಭಾಗಗಳು ಸರಿಯಾಗಿ, ಸಕಾಲದಲ್ಲಿ ಕಾರ್ಯ ನಿರ್ವಹಿಸಲು ಪ್ರೊಟೀನ್‌ಇಂಧನವು ಅತ್ಯಾವಶ್ಯಕ. ವಿವಿಧ ಆಹಾರ ಪದಾರ್ಥಗಳಲ್ಲಿ ಪ್ರೊಟೀನ್‌ಲಭಿಸುತ್ತದೆ. ಇಂತಹ ಪ್ರೊಟೀನನ್ನು ಹೇಗೆ ಸರಿಯಾಗಿ ಆಯ್ಕೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.

ಇತ್ತೀಚಿನ ದಿನಗಳಲ್ಲಿ ಪ್ರೊಟೀನ್‌ಬಹಳ ಹೆಸರುವಾಸಿಯಾಗುತ್ತಿದೆ. ಜನರಲ್ಲಿ ಬೆಳೆದಿರುವ ಆರೋಗ್ಯದ ಬಗೆಗಿನ ಕಾಳಜಿ, ತೂಕ ಕಡಿಮೆ ಮಾಡಿಕೊಳ್ಳಬೇಕೆನ್ನುವ ಹಂಬಲ ಹಾಗೂ ದೇಹದ ಆಕಾರದ ಬಗೆಗಿನ ಕಾಳಜಿಗಳೇ ಇದಕ್ಕೆ ಕಾರಣ. ಆದರೆ, ಇವೆಲ್ಲವುಗಳಿಂದ ದೇಹದ ಆರೋಗ್ಯಕ್ಕೆ ಅಸಾಧಾರಣವಾದ ಪ್ರಯೋಜನವಿದೆ.

ಅಮೈನೋ ಆಮ್ಲಗಳಿಂದ ಪ್ರೊಟೀನ್ ತಯಾರಾಗುತ್ತದೆ. ಪ್ರಾಣಿಜನ್ಯ ಆಹಾರ ಪದಾರ್ಥಗಳು ಮುಖ್ಯ ಪ್ರೊಟೀನ್ ಆಕರಗಳಾಗಿವೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಎಣ್ಣೆ ಬೀಜಗಳು ಹಾಗೂ ಇನ್ನಿತರ ಕೆಲವೊಂದು ಸಸ್ಯಜನ್ಯ ಆಹಾರ ಪದಾರ್ಥಗಳು ಪ್ರೊಟೀನ್ನ ಆಕರಗಳಾಗಿವೆ.

ಮೊಟ್ಟೆ, ಮಟನ್, ಚಿಕನ್ಗಳು ಹೆಚ್ಚು ಪೋ›ಟೀನ್ನ್ನು ಒದಗಿಸುತ್ತದೆ. ಆದರೆ ಕರಿದು, ಹುರಿದು ತಿನ್ನುವುದರಿಂದ ಸತ್ವವನ್ನು ಈ ಆಹಾರ ಪದಾರ್ಥಗಳು ಕಳೆದುಕೊಳ್ಳುತ್ತದೆ. ಹಾಗಾಗಿ ಬೇಯಿಸಿ ಸೇವಿಸುವುದು ಒಳಿತು. ಮಾಂಸಹಾರಿಗಳಿಗೆ ಇದು ಅತ್ಯುತ್ತಮ ಪ್ರೊಟೀನ್ನ ಮೂಲವಾಗಿದೆ.

ಆದರೆ ಸಸ್ಯಾಹಾರಿಗಳಿಗೆ ಇದು ಕಷ್ಟಸಾಧ್ಯವಾದ್ದರಿಂದ ಸಸ್ಯಾಹಾರಿಗಳು ಹೊಸ ಪ್ರೊಟೀನ್ನ್ನು ಉತ್ಪಾದನೆ ಮಾಡಲು ಸಾಧ್ಯವಾಗುವ ಅಮೈನೋ ಆಸಿಡ್ ಒಳಗೊಂಡಿರುವ ಆಹಾರವನ್ನು ತೆಗೆದುಕೊಳ್ಳುವುದು ಅನಿವಾರ್ಯ. ಬೀನ್ಸ್, ನಟ್ಸ್, (ಬಾದಾಮಿ ಗೊಡಂಬಿ, ಪಿಸ್ತಾ, ವಾಲ್ನಟ್, ಶೇಂಗಾ) ಮೊಳಕೆ ಕಾಳುಗಳು ಪ್ರೊಟೀನ್ ಮೂಲಗಳಾಗಿವೆ.

ಸೋಯಾ, ಕಡಲೆಕಾಳು, ಕಡಲೆಬೇಳೆ, ಹುರಿಗಡಲೆ ಉದ್ದಿನಬೇಳೆ, ಅಲಸಂದೆ ಕಾಳು, ಅವರೆಕಾಳು, ಹೆಸರುಕಾಳು, ಹೆಸರುಬೇಳೆ, ಹುರುಳಿಕಾಳು, ಕೇಸರಿಬೇಳೆ, ಮಸೂರುಬೇಳೆ, ಬಟಾಣಿ, ರಾಜ್ಮ, ತೊಗರಿಬೇಳೆ, ಅಗಸೇಬೀಜ, ಸಾಸಿವೆ, ಗುರೆಳ್ಳು, ಪಿಸ್ತಾ, ಕುಸುಬೆ ಬೀಜ, ಸೂರ್ಯಕಾಂತಿ, ಕಲ್ಲಂಗಡಿ ಬೀಜ, ಗೇರುಬೀಜ, ಎಳ್ಳು ಇತ್ಯಾದಿಗಳು ಪ್ರೊಟೀನ್ ಆಕರಗಳಾಗಿವೆ.

ಹಾಗಾಗಿ ಇವುಗಳನ್ನು ಹೆಚ್ಚು ತೆಗೆದುಕೊಳ್ಳಬೇಕು. ಆದರೂ ದೇಹಕ್ಕೆ ಸಾಲದಾದಾಗ ಪ್ರೊಟೀನ್ ಪೌಡರ್ನ್ನು ಸೇವಿಸುವುದು ಅವಶ್ಯಕ. ಆದ್ದರಿಂದ ಪ್ರೊಟೀನ್ ಮಿಲ್ಕಶೇಕ್ ಈಗೀಗ ಹೆಚ್ಚು ಪ್ರಚಲಿತವಾಗುತ್ತಿದೆ. ಆದರೆ ಪ್ರೊಟೀನ್ಪೌಡರ್ನಿಂದಲೇ ದೇಹಕ್ಕೆ ಬೇಕಾದ ಅಷ್ಟೂ ಪ್ರೊಟೀನ್ನ್ನು ಒದಗಿಸಿಕೊಳ್ಳುವುದು ಅಷ್ಟು ಹಿತವಲ್ಲ.

ತೂಕವನ್ನು ವೇಗವಾಗಿ ಇಳಿಸಿಕೊಳ್ಳಬೇಕೆಂದು ಹೆಚ್ಚೆಚ್ಚು ಪ್ರೊಟೀನ್ ಆಹಾರ ಪದಾರ್ಥ ಸೇವನೆಯೂ ಒಳ್ಳೆಯದಲ್ಲ. ಒಮ್ಮೆಲೇ ತೂಕ ಏರಿಸಿಕೊಳ್ಳುವುದು ಹಾಗೂ ಒಮ್ಮೆಲೇ ತೂಕ ಇಳಿಸಿಕೊಳ್ಳುವುದು ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತದೆ. ಎಷ್ಟು ಅವಶ್ಯಕವಾಗಿದೆಯೋ ಅಷ್ಟನ್ನೂ ಒಳ್ಳೆಯ ನೈಸರ್ಗಿಕ ಮೂಲದಿಂದಲೇ ಪಡೆಯುವುದು ಸೂಕ್ತ. ಆದರೆ ಒಳ್ಳೆಯ ಪ್ರಮಾಣಿತವಾದ ಪೋ›ಟೀನ್ ಪುಡಿಯನ್ನು ಅಗತ್ಯವಿದ್ದಲ್ಲಿ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬಹುದು.

Facebook Comments