ರಣಜಿ ಚಾಂಪಿಯನ್ಸ್ ಪಟ್ಟ ಉಳಿಸಿಕೊಂಡ ವಿದರ್ಭ ..!

ಈ ಸುದ್ದಿಯನ್ನು ಶೇರ್ ಮಾಡಿ

Ranji

ನಾಗ್ಪುರ, ಫೆ.7- ಆದಿತ್ಯ ಸರ್ವಾರ್ಟೆರ ಮಾರಕ ಬೌಲಿಂಗ್ ಎದುರು ಸೌರಾಷ್ಟ್ರ ಬ್ಯಾಟ್ಸ್‍ಮನ್‍ಗಳು ವೈಫಲ್ಯ ಅನುಭವಿಸಿದ್ದರಿಂದಾಗಿ ರಣಜಿ ಫೈನಲ್ ಪಂದ್ಯದಲ್ಲಿ 78 ರನ್‍ಗಳ ಹೀನಾಯ ಸೋಲು ಕಂಡಿದೆ.

ಕಳೆದ ಬಾರಿ ಬಲಿಷ್ಠ ನವದೆಹಲಿ ವಿರುದ್ಧ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದ ವಿದರ್ಭ ಈ ಬಾರಿಯೂ ಚಾಂಪಿಯನ್ಸ್ ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ನಾಲ್ಕನೇ ದಿನದಾಟಕ್ಕೆ 58 ರನ್‍ಗಳಿಗೆ 5 ವಿಕೆಟ್‍ಗಳನ್ನು ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿದ್ದ ಸೌರಾಷ್ಟ್ರ ಅಂತಿಮ ದಿನದಲ್ಲಿ ಚಾಂಪಿಯನ್ಸ್ ಆಗಲು 148 ರನ್ ಗಳಿಸುವ ಗುರಿಯನ್ನು ಹೊಂದಿತ್ತು.

ಒನ್ ಡೌನ್ ಬ್ಯಾಟ್ಸ್‍ಮನ್ ಜಡೇಜಾ ರ ಅರ್ಧಶತಕ(52 ರನ್, 6 ಬೌಂಡರಿ) ಗೆಲುವಿನ ಭರವಸೆ ಮೂಡಿಸಿತ್ತಾದರೂ ವಿದರ್ಭದ ವೇಗದ ಬೌಲರ್‍ಗಳಾದ ಆದಿತ್ಯ ಸರ್ವಾರ್ಟೆ ಹಾಗೂ ವಾಖಾರೆಯವರ ಬೌಲಿಂಗ್‍ನಿಂದಾಗಿ 127 ರನ್‍ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸುವ ಮೂಲಕ 78 ರನ್‍ಗಳಿಂದ ಹೀನಾಯ ಸೋಲು ಕಂಡಿತು.

ನಿನ್ನೆ ಅಜೇಯರಾಗಿ ಉಳಿದಿದ್ದ ಜಡೇಜಾ (23 ರನ್) ಹಾಗೂ ಮಕ್‍ವಾನಾ (2 ರನ್) ಬ್ಯಾಟಿಂಗ ಮುಂದುವರೆಸಿ ತಂಡವನ್ನು ಚಾಂಪಿಯನ್ಸ್‍ಗಳಾಗಿ ಮಾಡುವ ಬಯಕೆ ಹೊಂದಿದ್ದರಾದರೂ 14 ರನ್ ಗಳಿಸುವಷ್ಟರಲ್ಲೇ ಮಕ್‍ವಾನಾ ವೇಗಿ ಆದಿತ್ಯ ಸರ್ವಾರ್ಟೆಯ ಬೌಲಿಂಗ್ ಗತಿಯನ್ನು ಅರಿಯದೆ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು.

ನಂತರ ಬಂದ ಮನ್‍ಕಂಡ್ 2 ರನ್‍ಗಳಿಸಿ ವಾಖಾರೆ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯೂ ಬಲೆಗೆ ಬಿದ್ದಾಗ ವಿದರ್ಭ ಪಾಳೆಯದಲ್ಲಿ ವಿಜಯೋತ್ಸವದ ಕಳೆ ಮೂಡಿತು.

ಜಡೇಜಾರ ಹೋರಾಟ:
ಒಂದೆಡೆ ವಿದರ್ಭ ಬ್ಯಾಟ್ಸ್‍ಮನ್‍ಗಳು ಔಟಾಗುತ್ತಿದ್ದರೆ ಮೈದಾನದಲ್ಲಿ ಅಚಲವಾಗಿ ನಿಂತಿದ್ದ ವಿ.ಎಂ. ಜಡೇಜಾ ತಂಡವನ್ನು ಗೆಲುವಿನ ದಡ ಮುಟ್ಟಿಸುವ ತವಕದಲ್ಲಿದ್ದಾಗ ಆದಿತ್ಯ ಸರ್ವಾರ್ಟೆ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು.

ವಿ.ಎಂ. ಜಡೇಜಾ ಔಟಾಗುತ್ತಿದ್ದಂತೆ ಕ್ರೀಸ್‍ಗಿಳಿದ ನಾಯಕ ಜಯದೇವ್ ಉನ್ಕಟತ್ ಬೌಂಡರಿ ಗಳಿಸುವ ಆಕ್ರಮಣಕಾರಿ ಕಂಡರೂ 7 ರನ್‍ಗಳಿಸಿ ಸರ್ವಾರ್ಟೆ ಗೆ ವಿಕೆಟ್ ಒಪ್ಪಿಸಿದರು. 2 ಬೌಂಡರಿಗಳ ಸಹತ 17 ರನ್‍ಗಳನ್ನು ಗಳಿಸದ್ದಿ ಡಿ.ಎ. ಜಡೇಜಾರನ್ನು ವಾಕಾರೆ ಪೆವಿಲಿಯನ್‍ನತ್ತ ಅಟ್ಟುವ ಮೂಲಕ ಸೌರಾಷ್ಟ್ರದ ಇನ್ನಿಂಗ್ಸ್‍ಗೆ ಮಂಗಳ ಹಾಡಿದರು. ಆಗ ತಂಡದ ಮೊತ್ತ 127 ರನ್‍ಗಳಾಗಿತ್ತು.

ವಿದರ್ಭ ಪರ ಆದಿತ್ಯ ಸರ್ವಾರ್ಟೆ 6 ವಿಕೆಟ್ ಕೆಡವಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ವಾಕಾರೆ-3 ಹಾಗೂ ಉಮೇಶ್ ಯಾದವ್-1 ವಿಕೆಟ್ ಕೆಡವಿದರು.
ವಿದರ್ಭ ಪರ 11 ವಿಕೆಟ್ ಕಬಳಿಸಿದ ಆದಿತ್ಯ ಸರ್ವಾರ್ಟೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್:
ವಿದರ್ಭ ಮೊದಲ ಇನ್ನಿಂಗ್ಸ್: 312 ರನ್, ದ್ವಿತೀಯ ಇನ್ನಿಂಗ್ಸ್: 200 ರನ್
ಸೌರಾಷ್ಟ್ರ ಮೊದಲ ಇನ್ನಿಂಗ್ಸ್: 307 ರನ್, ದ್ವಿತೀಯ ಇನ್ನಿಂಗ್ಸ್: 127 ರನ್

Facebook Comments

Sri Raghav

Admin