ಭಾರತ ವಿರುದ್ಧ ಏಕದಿನ ಮತ್ತು ಟಿ-20 ಸರಣಿ ಆಸ್ಟ್ರೇಲಿಯಾ ತಂಡ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

Cricket--01

ಮೆಲ್ಬೋರ್ನ್, ಜ. 7- ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ವೇಗಿ ಮಿಚಲ್ ಸ್ಟ್ರಾಕ್ ಹಾಗೂ ಅಲ್‍ರೌಂಡರ್ ಮಿಚಲ್ ಮಾರ್ಷ್ ಅವರು ಭಾರತ ವಿರುದ್ಧ ನಡೆಯಲಿರುವ 2ಟ್ವೆಂಟಿ-20 ಹಾಗೂ 5 ಏಕದಿನ ಪಂದ್ಯಗಳ ಸರಣಿಯಿಂದ ಹೊರ ನಡೆದಿದ್ದಾರೆ.

ಫೆಬ್ರುವರಿ 24 ರಿಂದ ಭಾರತ ವಿರುದ್ಧ ಆಸ್ಟ್ರೇಲಿಯಾ ಸರಣಿ ಆರಂಭವಾಗಲಿದ್ದು 16 ಸದಸ್ಯರ ತಂಡವನ್ನು ಆಸ್ಟ್ರೇಲಿಯಾ ಬಿಡುಗಡೆ ಮಾಡಿದೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯನ್ನು ಭಾರತ ತಂಡವು ಟೆಸ್ಟ್‍ನಲ್ಲಿ 1-2 ರಿಂದ ಜಯ ಸಾಧಿಸಿದರೆ ಚುಟುಕು ಸರಣಿಯನ್ನು 1-1ರಿಂದ ಸಮಬಲಗೊಳಿಸಿಕೊಂಡಿತ್ತು.

ಮಿಚಲ್ ಸ್ಟ್ರಾಕ್ ಅವರು ಭುಜ ಹಾಗೂ ಎದೆಯ ನೋವಿನಿಂದ ಬಳಲುತ್ತಿದ್ದು ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್‍ನ ವೇಳೆಯೇ ಮೈದಾನದಿಂದ ಹೊರ ನಡೆದಿದ್ದು ಅವರು ಪೂರ್ಣವಾಗಿ ಚೇತರಿಸಿಕೊಳ್ಳಲಾದ ಕಾರಣ ಭಾರತದ ವಿರುದ್ಧದ ಸರಣಿಯಿಂದಲೂ ಹೊರಗುಳಿದಿರುವುದು ಆಸ್ಟ್ರೇಲಿಯಾಕ್ಕೆ ದೊಡ್ಡ ನಷ್ಟವಾಗಿದೆ.

ಮತ್ತೊಬ್ಬ ವೇಗಿ ಹೇಜಲ್‍ವುಡ್ ಕೂಡ ಗಾಯಗೊಂಡಿರುವುದರಿಂದ ಪೀಟರ್ ಸಿಡ್ಲೆ ಹಾಗೂ ಕೇನ್ ರಿಚಡ್ರ್ಸ್‍ಸನ್ ಮೇಲೆ ಬೌಲಿಂಗ್‍ನ ಜವಾಬ್ದಾರಿ ಬಿದ್ದಿದೆ.

ತಂಡ ಇಂತಿದೆ:  ಆರೋನ್‍ಫಿಂಚ್ (ನಾಯಕ), ಪ್ಯಾಟ್ ಕುಮ್ಮಿನ್ಸ್ , ಅಲೆಕ್ಸ್ ಕ್ಯಾರೀ, ಜಾನ್ಸನ್ ಬೆನ್‍ಡ್ರಾಫ್, ನ್ಯಾಥನ್ ಕಂಟ್ರಿ ನೈಲ್, ಪೀಟರ್ ಹ್ಯಾಂಡ್ಸ್‍ಕೋಮ್, ಉಸ್ಮಾನ್ ಕ್ವಾಜಾ, ನ್ಯಾಥನ್ ಲಿಯಾನ್, ಶಾನ್ ಮಾರ್ಷ್, ಗ್ಲಾನ್ ಮೆಕ್ಸ್‍ವೆಲ್, ಜೇಯಿ ರಿಚಡ್ರ್ಸ್‍ಸನ್, ಕೇನ್ ರಿಚಡ್ರ್ಸ್‍ಸನ್, ಡಿ ಶಾರ್ಟ್, ಮಾಕ್ರ್ಯೂಸ್ ಸ್ಟೋನಿಸ್, ಅಸ್ಟೋನ್ ಟರ್ನರ್, ಆ್ಯಡಂ ಜಂಪಾ.

ಪಂದ್ಯಗಳ ವಿವರ:  ಮೊದಲ ಟ್ವೆಂಟಿ- 20: ಫೆ.24- ವೈ.ಎಸ್.ರಾಜಶೇಖರರೆಡ್ಡಿ ಕ್ರೀಡಾಂಗಣ, ಹೈದ್ರಾಬಾದ್
2ನೆ ಟ್ವೆಂಟಿ-20: ಫೆ.27- ಚಿನ್ನಸ್ವಾಮಿ ಮೈದಾನ, ಬೆಂಗಳೂರು
ಮೊದಲ ಏಕದಿನ: ಮಾರ್ಚ್ 2-ರಾಜೀವ್‍ಗಾಂಧಿ ಕ್ರೀಡಾಂಗಣ, ಹೈದ್ರಾಬಾದ್.
2ನೆ ಏಕದಿನ:ಮಾರ್ಚ್ 5- ವಿದರ್ಭ ಕ್ರಿಕೆಟ್ ಮೈದಾನ, ನಾಗ್ಪುರ
3ನೆ ಏಕದಿನ: ಮಾರ್ಚ್ 8- ಜೆಎಸ್‍ಸಿಎ ಕ್ರೀಡಾಂಗಣ, ರಾಂಚಿ
4ನೆ ಏಕದಿನ: ಮಾರ್ಚ್ 10- ಬಿಂದ್ರಾ ಸ್ಟೇಡಿಯಂ, ಮೊಹಾಲಿ
5ನೆ ಏಕದಿನ: ಮಾರ್ಚ್ 13- ಫಿರೋಜ್ ಷಾ ಕೋಟ್ಲಾ ಮೈದಾನ, ನವದೆಹಲಿ.

Facebook Comments

Sri Raghav

Admin