2ನೇ ಟಿ20ಯಲ್ಲಿ ಭಾರತಕ್ಕೆ ಜಯ, ಸರಣಿ ಸಮಬಲ

ಈ ಸುದ್ದಿಯನ್ನು ಶೇರ್ ಮಾಡಿ

indiaಆಕ್ಲೆಂಡ್: ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಜಯಗಳಿಸಿದೆ. ಈ ಮೂಲಕ ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ ಆರಂಭಿಕ ಆಘಾತ ಅನುಭವಿಸಿತು. ಭುವನೇಶ್ವರ್ ಕುಮಾರ್ ಎಸೆತದಲ್ಲಿ ವಿಕೆಟ್ ಕೀಪರ್ ಎಂ.ಎಸ್.ಧೋನಿಗೆ ಕ್ಯಾಚ್ ನೀಡಿದ ಟಿಮ್ ಸೈಫರ್ಟ್ 12 ರನ್ ಗೆ ವಿಕೆಟ್ ಹೊಪ್ಪಿಸಿದರೆ.

ಗ್ರ್ಯಾಂಡ್ ಹೋಮ್ 50, ಲಾಸ್ ಟೇಲರ್ 42 ಹಾಗೂ ಕೇನ್ ವಿಲಿಯಮ್ ಸನ್ 20 ರನ್ ಹೊರತುಪಡಿಸಿ ಉಳಿದ ಆಟಗಾರರು ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾದರು. ನ್ಯೂಜಿಲ್ಯಾಂಡ್ ತನ್ನ 20 ಓವರ್ ಗಳ್ಲಲಿ 8 ವಿಕಟ್ ನಷ್ಟಕ್ಕೆ 158 ರನ್ ಗಳಿಸಿತು.

ಈ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 18.5 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 162 ರನ್ ಪೇರಿಸಿ ಗೆಲುವಿನ ನಗೆ ಬೀರಿತು. ಭಾರತದ ಪರ ಬ್ಯಾಟಿಂಗ್ ಮಾಡಿದ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ಹಾಕಿಕೊಟ್ಟರು.

ರೋಹಿತ್ ಶರ್ಮಾ 50 ರನ್, ಶಿಖರ್ ಧವನ್ 30 ರನ್  ನಂತರ ಬಂದ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ಮಾಡಿ ಅಜೇಯ 40 ಹಾಗೂ ಎಂಎಸ್ ಧೋನಿ ಅಜೇಯ 20 ರನ್ ಪೇರಿಸಿ ತಂಡವನ್ನು ಗೆಲುವಿನ ತಡ ಮುಟ್ಟಿಸಿದರು. ಈ ಮೂಲಕ ಸರಣಿಯಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದ್ದು ಮುಂದಿನ ಪಂದ್ಯ ನಿರ್ಣಾಯಕವಾಗಿದೆ.

ಸಂಕ್ಷಪ್ತ ಸ್ಕೋರ್ :
ನ್ಯೂಜಿಲ್ಯಾಂಡ್ : 158 (8 wkts, 20 Ov)
ಭಾರತ : 162 (3 wkts, 18.5 Ov)

Facebook Comments