ಕೃಷಿ ಹೊಂಡದಲ್ಲಿ ತಾಯಿ-ಮಗಳ ಶವ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

suicideಗೌರಿಬಿದನೂರು, ಫೆ.8- ಕೃಷಿ ಹೊಂಡದಲ್ಲಿ ತಾಯಿ-ಮಗಳ ಶವ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಕಲ್ಲಿನಾಯಕನಹಳ್ಳಿಯ ಮಾಸ್ಸಾಂಟೋ ಕಂಪನಿಗೆ ಸೇರಿದ ಬಿತ್ತನೆ ಬೀಜದ ಘಟಕದಲ್ಲಿರುವ ಕೃಷಿ ಹೊಂಡಕ್ಕೆ ತಾಯಿ ಮಗಳಿಬ್ಬರು ಬಿದ್ದು ಮೃತಪಟ್ಟಿದ್ದಾರೆ.

ಇಂದು ಮುಂಜಾನೆ ಘಟಕದ ಸೆಕ್ಯೂರಿಟಿ ಗಾರ್ಡ್ ಇವರ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮರಾಸೆಪನಹಳ್ಳಿ ಠಾಣೆ ಎಸ್‍ಐ ಭಾಸ್ಕರ್ ಮತ್ತು ವೃತ್ತ ನಿರೀಕ್ಷರ ಅಮರ್ ನಾರಯಣ್ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.  ತಾಯಿ-ಮಗಳ ಗುರುತು ಪತ್ತೆಯಾಗಿಲ್ಲ.

Facebook Comments