ಇದೇ ನೋಡಿ ಯಶ್ ಖರೀದಿಸಿದ 2.5 ಕೋಟಿ ವೆಚ್ಚದ ಮನೆ, 101 ಏಕರೆ ತೋಟ..! (Video)

ಈ ಸುದ್ದಿಯನ್ನು ಶೇರ್ ಮಾಡಿ

Yash--01

ಹಾಸನ. ಫೆ. 08 : ಕೆಲ ವರ್ಷ ಗಳ ಹಿಂದೆ ನೆರೆಯ ಯಲಬುರ್ಗದ ಕೊಪ್ಪಳ ತಾಲೂಕಿನ ತಲ್ಲೂರಿನಲ್ಲಿ ಕರೆ ಉಳೆತ್ತಿಸುವ ಮೂಲಕ ಮನೆ‌ ಮಾತಾಗಿದ್ದ ಯಶ್ ಇಂದು ತನ್ನ ತವರು ಜಿಲ್ಲೆಯಲ್ಲಿ ಕೃಷಿ ಜಮೀನು ಹಾಗು ಮನೆ ಖರೀದಿಸಿ ಕೃಷಿ ಚಟುವಟಿಕೆ ಮಾರ್ಗವನ್ನು ಅನುಸರಿಸುವ‌ ಮೂಲಕ ರೈತರಿಗೆ ಮತ್ತಷ್ಟು ಮಾದರಿಯಾಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ತಮ್ಮ ಹುಟ್ಟೂರಾದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಟ್ಟಾವರ ಗ್ರಾಮದಲ್ಲಿ ನೂತನವಾಗಿ 101 ಏಕರೆ ತೋಟ ಮನೆ ಖರೀದಿಸಿದ್ದಾರೆ.

ಅಷ್ಟೇ ಅಲ್ಲದೇ ಯಶ್ ತಮ್ಮ ತಾಯಿಯ ಆಸೆಯಂತೆ ಹಾಸನ ನಗರದ ವಿದ್ಯಾನಗರದಲ್ಲಿ ತಾಯಿಗಾಗಿ 2.5 ಕೋಟಿ ವೆಚ್ಚದ ಮನೆಯೊಂದನ್ನ ಖರೀದಿಸಿ ಉಡುಗೊರೆ ನೀಡಿದ್ದಾರೆ ಎನ್ನಲಾಗಿದೆ.

ತವರು ಜಿಲ್ಲೆ ವಿದ್ಯಾನಗರದಲ್ಲಿ ಮನೆ ಖರೀದಿಸುವುದು ಯಶ್ ತಾಯಿಯ ಬಹಳ ವರ್ಷದ ಆಸೆಯಾಗಿತ್ತು. ಇನ್ನು ಹುಟ್ಟೂರಿನ ಮೇಲಿರುವ ಅಭಿಮಾನದಿಂದ ಜಿಲ್ಲೆಯಲ್ಲಿ ಯಶ್ ಆಸ್ತಿ ಖರೀದಿಸಿದ್ದಾರಂತೆ.

ಕಳೆದ ಕೆಲ ತಿಂಗಳ ಹಿಂದೆ ತೋಟ ಮತ್ತು ಮನೆ ಖರೀದಿಸಿರುವ ಯಶ್ ತಮ್ಮ ತಾಯಿಯವರ ಹುಟ್ಟೂರು ಹಾಸನದ ದೊಡ್ಡಕೊಂಡಗೊಳ ಗ್ರಾಮದಲ್ಲಿ ಕೃಷಿ ಮಾಡಿ ರೈತರಿಗೆ ಅರಿವು ಮೂಡಿಸುವ ಹೊಸ ಸಾಹಸಕ್ಕೂ ಕೂಡಾ ಕೈ ಹಾಕಿದ್ದಾರೆ.

ಕೆಲಸದ ಒತ್ತಡದಿಂದ ಹೊರಬಂದು ಬಿಡುವಿನ ವೇಳೆಯನ್ನು ತನ್ನೂರಲ್ಲೇ ಕಾಲ ಕಳೆಯಲು ಬಯಸಿರುವ ಹುಟ್ಟೂರಿನ ಮೇಲಿರುವ ಅಭಿಮಾನವೇ ಯಶ್ ಅವರಿಗೆ ವಿದ್ಯಾನಗರದಲ್ಲೊಂದು ಸ್ವಂತ ಮನೆ ಖರೀದಿಸುವಂತೆ ಮಾಡಿದೆ.

ಅಷ್ಟೇ ಅಲ್ಲ ಕೃಷಿ ಕುಟುಂಬದಿಂದ ಬಂದ ಯಶ್ ಅಟ್ಟಾವರ ಬಳಿ ಮಾವು, ಸಪೋಟ, ಗೋಡಂಬಿ ತೋಪನ್ನು ಖರೀದಿಸಿದ್ದು, ಮುಂದಿನ ದಿನದಲ್ಲಿ ಸಾವಯವ ಕೃಷಿ ಮಾಡುವ ಮೂಲಕ ರೈತರಿಗೆ ಮಾದರಿಯಾಗಲು ಮುಂದಾಗಿದ್ದಾರೆ.

ಮಗನ ಈ ಒಳ್ಳೆಯ ಕಾರ್ಯಕ್ಕೆ ಅವರ ತಂದೆ-ತಾಯಿ ಕೂಡ ಸಾಥ್ ಕೊಟ್ಟಿದ್ದು, ಈಗಾಗಲೇ ಕೃಷಿ ಕಾರ್ಯದಲ್ಲಿ ಯಶ್ ಪೋಷಕರು ತೊಡಗಿದ್ದಾರೆ. ಇನ್ನು ತನ್ನ ಸಿನಿ‌ ಬದುಕಿನ ಬ್ಯುಸಿ ಷಡ್ಯುಲ್ ಹೊರತುಪಡಿಸಿ ಬಿಡುವಿನ‌ ಸಮಯದಲ್ಲಿ ರಾಜ್ಯದ ಯಲಬುರ್ಗದ ಕೊಪ್ಪಳ ತಾಲೂಕಿನ ತಲ್ಲೂರು ಮಡದಿ‌ ರಾಧಿಕ ಪಂಡಿತ್ ಹಾಗು ಮಗುವಿನೊಂದಿಗೆ ಕಾಲ ಕಳೆಯಲಿದ್ದಾರೆ.

Facebook Comments

Sri Raghav

Admin