ಬೆಂಗಳೂರಲ್ಲಿ ಒಂದೇ ದಿನ 3 ಕಡೆ ಸರ ಅಪಹರಣ

ಈ ಸುದ್ದಿಯನ್ನು ಶೇರ್ ಮಾಡಿ

chain

ಬೆಂಗಳೂರು, ಫೆ.9- ಹಗಲು ವೇಳೆಯಲ್ಲೇ ನಿನ್ನೆ ಮೂವರು ಮಹಿಳೆಯರ ಸರಗಳನ್ನು ಎಗರಿಸುವ ಮೂಲಕ ಸರಗಳ್ಳರು ಅಟ್ಟಹಾಸ ಮೆರೆದಿದ್ದಾರೆ.

ವಿಜಯನಗರ: ನಿನ್ನೆ ಬೆಳಗ್ಗೆ 9.20ರ ಸಮಯದಲ್ಲಿ ವಸುಮತಿ ಎಂಬುವವರು ಕೆಲಸಕ್ಕೆಂದು ನಡೆದು ಹೋಗುತ್ತಿದ್ದಾಗ ವಿಜಯನಗರ 9ನೆ ಮುಖ್ಯರಸ್ತೆಯಲ್ಲಿ ಬೈಕ್‍ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ಸರಗಳ್ಳರು ಇವರ ಕೊರಳಲ್ಲಿದ್ದ 50 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.

ಬ್ಯಾಟರಾಯನಪುರ: ಹೋಂಡಾ ಸ್ಕೂಟರ್‍ನಲ್ಲಿ ಸರಸ್ವತಿ ಎಂಬುವವರು ನಿನ್ನೆ ಬೆಳಗ್ಗೆ 9.15ರಲ್ಲಿ ಹೋಗುತ್ತಿದ್ದಾಗ ಮೈಸೂರು ರಸ್ತೆಯ 3ನೆ ಕ್ರಾಸ್ ಬಳಿ ಇವರ ಮೊಬೈಲ್‍ಗೆ ಕರೆಯೊಂದು ಬಂದಿದೆ.

ತಮ್ಮ ಸ್ಕೂಟರ್‍ಅನ್ನು ರಸ್ತೆಬದಿ ನಿಲ್ಲಿಸಿ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಾಗ ಬೈಕ್‍ನಲ್ಲಿ ಬಂದ ಸರಗಳ್ಳ ಇವರ ಕೊರಳಲ್ಲಿದ್ದ 12 ಗ್ರಾಂ ಸರ ಕಿತ್ತು ಪರಾರಿಯಾಗಿದ್ದಾನೆ.

ಕೆಂಪೇಗೌಡನಗರ: ಚಾಮರಾಜಪೇಟೆಯ 5ನೆ ಮುಖ್ಯರಸ್ತೆ, 5ನೆ ಕ್ರಾಸ್‍ನಲ್ಲಿ ನಿನ್ನೆ ಬೆಳಗ್ಗೆ 9.30ರಲ್ಲಿ ರೂಪಾ ಜೋಷಿ ಎಂಬುವವರು ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿ ಬಂದ ಸರಗಳ್ಳರು 24 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.
ಈ ಮೂರೂ ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ಸರಗಳ್ಳರಿಗಾಗಿ ಬಲೆ ಬೀಸಿದ್ದಾರೆ.

Facebook Comments