‘ತಿಂಡಿಪೋತ’ ಟ್ರಂಪ್‍‍ನ ಹೆಲ್ತ್ ಸೀಕ್ರೆಟ್ ಬಹಿರಂಗ..!

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಫೆ.9-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(72) ಫಾಸ್ಟ್‍ಫುಡ್ ಪ್ರಿಯರಾದರೂ ಅತ್ಯಂತ ಆರೋಗ್ಯಶಾಲಿ..! ರಾಷ್ಟ್ರಾಧ್ಯಕ್ಷರು ತುಂಬಾ ಉತ್ತಮ ಆರೋಗ್ಯ ಹೊಂದಿದ್ದಾರೆ ಎಂದು ವಾರ್ಷಿಕ ವೈದ್ಯಕೀಯ ತಪಾಸಣೆ ವರದಿ ದೃಢಪಡಿಸಿದೆ.

ಡೊನಾಲ್ಡ್ ಟ್ರಂಪ್ ತುಂಬಾ ಆರೋಗ್ಯಶಾಲಿಯಾಗಿದ್ದಾರೆ ಹಾಗೂ ತಮ್ಮ ಅಧ್ಯಕ್ಷೀಯ ಅವಧಿ ಪೂರ್ಣಗೊಳಿಸುವವರೆಗೂ ಮತ್ತು ನಂತರವೂ ಅವರು ಆರೋಗ್ಯವಂತರಾಗಿಯೇ ಮುಂದುವರಿಯಲಿದ್ದಾರೆ ಎಂದು ಅವರನ್ನು ವಾರ್ಷಿಕ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ತಜ್ಞ ವೈದ್ಯ ಡಾ.ಸೀನ್.ಪಿ.ಕೊನ್ಲೆ ಶ್ವೇತಭವನದಲ್ಲಿ ತಿಳಿಸಿದ್ದಾರೆ.

ನಿನ್ನೆ ಟ್ರಂಪ್ ಅವರನ್ನು ನಾಲ್ಕು ಗಂಟೆಗಳ ಕಾಲ 11 ನುರಿತ ವೈದ್ಯಕೀಯ ತಂಡವು ದೈಹಿಕ ಪರೀಕ್ಷೆಗೆ ಒಳಪಡಿಸಲಾಯಿತು. 2017ರಲ್ಲಿ ಅಮೆರಿಕ ಅಧ್ಯಕ್ಷರಾದ ನಂತರ ಇದು ಇವರ ಎರಡನೇ ವೈದ್ಯಕೀಯ ತಪಾಸಣೆಯಾಗಿದೆ.

ಧೂಮಪಾನ ಮಾಡದ ಟ್ರಂಪ್ ಅತ್ಯಂತ ದುಬಾರಿ ಮದ್ಯ ಸೇವಿಸುತ್ತಾರೆ. ಅಮೆರಿಕ ಅಧ್ಯಕ್ಷರು ಫಾಸ್ಟ್‍ಫುಡ್ ಪ್ರಿಯರು.  ಬರ್ಗರ್, ಫ್ರೆಂಚ್ ಪ್ರೈಸ್ ಮತ್ತು ಫಿಜ್ಜಾದಂಥ ಜಂಕ್ ಫುಡ್‍ಗಳನ್ನು ದಾರಾಳವಾಗಿ ಸೇವಿಸುತ್ತಾರೆ. ಐಷಾರಾಮಿ ಜೀವನಶೈಲಿ ಹೊಂದಿದ್ದರೂ, ವೈಟ್‍ಹೌಸ್‍ನ ಸಂಕೀರ್ಣದಲ್ಲಿ ಟ್ರಂಪ್ ಸಾಕಷ್ಟು ನಡೆಯುತ್ತಾರೆ ಮತ್ತು ಲಿಫ್ಟ್ ಬಳಸುವುದು ವಿರಳ.

Facebook Comments

Sri Raghav

Admin