ಕೊನೆ ಪಂದ್ಯದಲ್ಲಿ ಭಾರತಕ್ಕೆ ಸೋಲು, ಟಿ-20 ಸರಣಿ ಗೆದ್ದ ನ್ಯೂಜಿಲ್ಯಾಂಡ್

ಈ ಸುದ್ದಿಯನ್ನು ಶೇರ್ ಮಾಡಿ

India--02

ಹ್ಯಾಮಿಲ್ಟನ್, ಫೆ.10- ತೀವ್ರ ಕುತೂಹಲ ಕೆರಳಿಸಿದ್ದ ಅಂತಿಮ ಟಿ – 20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ 4 ರನ್ ಗಳ ರೋಚಕ ಗೆಲುವು ಸಾಧಿಸುವ ಮೂಲಕ ಸರಣಿ ಗೆದ್ದುಕೊಂಡಿದೆ.

ಮೊದಲು ಫೀಲ್ಡಿಂಗ್ ಮಾಡಿದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಗೆಲ್ಲಲು 213 ರನ್‍ಗಳ ಗುರಿಯನ್ನು ಪಡೆದಿತ್ತು.  ನ್ಯೂಜಿಲ್ಯಾಂಡ್‍ನ ಆರಂಭಿಕ ಆಟಗಾರರಾದ ಕಾಲಿನ್ ಮುನ್ರೋ (72 ರನ್, 5 ಬೌಂಡರಿ, 5 ಸಿಕ್ಸರ್), ಸೈಫರ್ಟ್ (43 ರನ್, 3 ಬೌಂಡರಿ, 3 ಸಿಕ್ಸರ್) ಹಾಗೂ ಗ್ರಾಂಡ್‍ಹೋಮೆ (30 ರನ್, 3 ಬೌಂಡರಿ, 1 ಸಿಕ್ಸರ್)ರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‍ಗಳಲ್ಲಿ 212 ರನ್‍ಗಳನ್ನು ಗಳಿಸಿತು.

ಇದನ್ನು ಬೆನ್ನಟ್ಟಿದ ಭಾರತ ಬಹುಬೇಗನೆ ಶಿಖರ್ ಧವನ್ ಅವರನ್ನು ಕಳೆದುಕೊಂಡಿತು, ನಂತರ ಬಂಡ ವಿಜಯ್ ಶಂಕರ್ ಮತ್ತು ರೋಹಿತ್ ಶರ್ಮಾ ಉತ್ತಮ ಆಟ ಪ್ರದರ್ಶಿಸಿದರೂ ಕಿವೀಸ್ ನ ಸಂಟ್ನರ್ ಅವರ ಸ್ಪಿನ್ ದಾಳಿಗೆ ತಡಬಡಿಸಿದರು.

ಜಯದ ಲಯಕ್ಕೆ ಬಂದರೂ ಕೂಡ ವಿಕೆಟ್ ಗಳು ಪತನಗೊಂಡ ಹಿನ್ನೆಲೆಯಲ್ಲಿ ಅಂತಿಮ 2 ಓವರ್ ನಲ್ಲಿ ಗೆಲುವಿಗೆ 38 ರನ್ ಗಳ ಅವಶ್ಯಕತೆಯಿತ್ತು. ಈ ನಡುವೆ ಕುನಾಲ್ ಪಾಂಡ್ಯಾ ಮತ್ತು ಮುರಳಿ ಕಾರ್ತಿಕ್ ಉತ್ತಮ ಆಟ ಪ್ರದರ್ಶಿಸಿ ಅಂತಿಮ ಓವರ್ ನಲ್ಲಿ 15 ರನ್ ಗಳಿಸಬೇಕಾಗಿತ್ತು.

ಕೊನೆಯ ಓವರ್ ಮಾಡಿದ ಅನುಭವಿ ಬೌಲರ್ ಸೌದಿ ಮೊದಲ ಎಸೆತದಿಂದಲೇ ಒತ್ತಡ ಹೇರಿದರು. ಒಂದು ಅಗಲವಾದ ಚಂದು ಎಸೆದರೂ ಕೂಡ ವೈಡ್ ಎಂದು ತೀರ್ಪು ನೀಡಲು ಅಂಪೈರ್ ನಿರಾಕರಿಸಿದರು.

ಆದರೂ ಕೂಡ ಅಂತಿಮ ಓವರ್ ನಲ್ಲಿ ಕೆಲವು ಎಸೆತಗಳಲ್ಲಿ ದೊಡ್ಡ ಹೊಡೆತ ಕೈತಪ್ಪಿದ ಪರಿಣಾಮ ಭಾರತ ವೀರೋಚಿತ ಸೋಲು ಅನುಭವಿಸಬೇಕಾಯಿತು. ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಭಾರತ 208 ರನ್ ಗಳನ್ನು ಮಾತ್ರ ಭಾರತ ಗಳಿಸಲು ಶಕ್ತವಾಯಿತು. 2-1 ಅಂತರದಿಂದ ನ್ಯೂಜಿಲ್ಯಾಂಡ್ ಸರಣಿಯನ್ನು ತನ್ನದಾಗಿಸಿಕೊಂಡಿತು .

Facebook Comments

Sri Raghav

Admin