ದರ್ಶನ್ ಅಭಿಮಾನಿಗಳಿಗೆ ಹಬ್ಬ, ಬಹುನಿರೀಕ್ಷೆಯ ‘ಯಜಮಾನ’ನ ಟ್ರೈಲರ್ ರಿಲೀಸ್

ಈ ಸುದ್ದಿಯನ್ನು ಶೇರ್ ಮಾಡಿ

Yajamana--01

ಬೆಂಗಳೂರು. ಫೆ . 10 : ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇಂದು ಹಬ್ಬದೂಟ, ಕಾರಣವೇನೆಂದರೆ ಭಾರಿ ನೀರೀಕ್ಷೆ ಹುಟ್ಟಿಸಿರುವ ಯಜಮಾನ ಚಿತ್ರದ ಟ್ರೈಲರ್ ಇಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಬಿಡುಗಡೆಯಾಗಿದೆ. ಖಡಕ್ ಮಾಸ್ ಡೈಲಾಗ್ , ಪವರ್ಫುಲ್ ಆಕ್ಷನ್ ತುಂಬಿರುವ ಟ್ರೈಲರ್ ಅಭಿಮಾನಿಗಳನ್ನು ಚಿತ್ರದ ಬಗ್ಗೆ ಹುಚ್ಚಎಬ್ಬಿಸುವಂತೆ ಮಾಡುತ್ತಿದೆ.

ಈಗಾಗಲೇ ಯಜಮಾನ ಚಿತ್ರದ ಹಾಡುಗಳು ದೂಳೆಬ್ಬಿಸುತ್ತಿವೆ. ಈಗ ಟ್ರೈಲರ್ ಸರದಿ, ಟ್ರೈಲರ್ ನೋಡುತ್ತಿದ್ದರೆ ಅಭಿಮಾನಿಗಳಿಗೆ ಮೈ ಜುಮ್ ಎನ್ನಿಸುವಂತ ಫೀಲ್ ಕೊಡುತ್ತಿದೆ , 2 ನಿಮಿಷ 46 ಸೆಕೆಂಡ್ ನ ಟ್ರೈಲರ್ ಚಿತ್ರದ ಬಗ್ಗೆ ಭಾರಿ ಕುತೂಹಲಗಳನ್ನೇ ಮೂಡಿಸುತ್ತಿದೆ.

‘ಆಕಾಶಕ್ಕೆ ತಲೆ ಕೊಟ್ಟು ಭೂಮಿಗೆ ಬೇರಿಳಿಸಿ ನಿಯತ್ತಿಂದ ಕಟ್ಟಿರೋ ಸ್ವಂತ ಬ್ರಾಂಡೋ ಸೌಂಡ್ ಜಾಸ್ತಿನೇ ಇರುತ್ತೆ’ ಎನ್ನೋ ಪಂಚಿಂಗ್ ಡೈಲಾಗ್ ನಿಂದ ಆರಂಭವಾಗುವ ಟ್ರೈಲರ್ ಒಂದು ಕ್ಷಣ ರೋಮಾಂಚನವನ್ನುಂಟುಮಾಡುತ್ತೆ.

ಇದಕ್ಕೆ ತಕ್ಕ ಹಾಗೆ ಚಿತ್ರದಲ್ಲಿರೋ ವಿಲನ್ ಗಳು ಯಜಮಾನನ ತಾಕತ್ತನ್ನು ಕೆಣಕುತ್ತಿದ್ದರೆ ಈ ಚಿತ್ರದಲ್ಲಿ ಆಕ್ಷನ್ ಬರಪೂರವಾಗಿದೆ ಎನಿಸುತ್ತೆ. ಮೊದಲ ಬಾರಿಗೆ ದರ್ಶನ ಗೆ ನಾಯಕಿಯಾಗಿ ನಟಿಸಿರುವ ರಶ್ಮಿಕಾ ಮಂದಣ್ಣ ಹಾಕೋ ಚಾಲೆಂಜ್ ಕುತೂಹಲ ಕೆರಳಿಸುತ್ತೆ.

ಒಟ್ಟಿನಲ್ಲಿ ಡಿ ಬಾಸ್ ಅಭಿಮಾಯಿಗಳು ನೋಡಿದ ಟ್ರೈಲರ್ ನ್ನೇ ಪದೇ ಪದೇ ನೋಡುತ್ತಾ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಟ್ರೈಲರ್ ಮೂಲಕ ಮತ್ತೊಂದು ಗುಟ್ಟು ಬಿಟ್ಟುಕೊಟ್ಟಿರುವ ಚಿತ್ರದಂತ ಚಿತ್ರದ ರಿಲೀಸ್ ಡೇಟ್ ನ್ನು ಕೂಡ ಅನೌನ್ಸ್ ಮಾಡಿದೆ. ಮಾರ್ಚ್ 1 ರಂದು ಯಜಮಾನ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾನೆ.

ದರ್ಶನ್ ನಾಯಕತ್ವದ ಈ ಚಿತ್ರವನ್ನು ‘ಕೆಜಿಎಫ್ ‘ ಡಿಸ್ಟ್ರಿಬ್ಯೂಟರ್ ಕಾರ್ತಿಕ್ ಗೌಡ ಹಂಚಿಕೆ ಮಾಡಲಿದ್ದಾರೆ. ದರ್ಶನ್ ವೃತ್ತಿ ಜೀವನದ ’50ನೇ’ ಚಿತ್ರವಾಗಿ ಈಗಾಗಲೇ ಹೊಸ ಮೈಲಿಗಲ್ಲು ಸ್ಥಾಪಿಸಲು ಹೊರಟಂತಿರುವ ‘ಯಜಮಾನ’ನಿಗೆ ಈಗ ಹಾರಲು ಹೊಸ ರೆಕ್ಕೆಯೊಂದು ಸಿಕ್ಕಂತಾಗಿದೆ.

ಸದ್ಯಕ್ಕೆ ಭಾರೀ ಹೈಪ್ ಕ್ರಿಯೇಟ್ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕರ್ನಾಟಕ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ‘ಯಜಮಾನ’ನಿಗೆ ಜೋಡಿಯಾಗಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ದರ್ಶನ್-ರಶ್ಮಿಕಾ ಜೊತೆ ‘ಡಾಲಿ’ ಖ್ಯಾತಿಯ ಧನಂಜಯ್, ಠಾಕೂರ್ ಅನೂಪ್ ಸಿಂಗ್, ದೇವರಾಜ್, ರವಿಶಂಕರ್ ಸೇರಿದಂತೆ ದೊಡ್ಡ ನಂತರ ಡಾಂಟೆ ಇದೆ. ಇದು ಕೂಡ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎನ್ನಲಾಗಿದೆ.

ಒಟ್ಟಿನಲ್ಲಿ ದಚ್ಚು ಅಭಿಮಾನಿಗಳಿಗೆ ಇಂದು ಹಬ್ಬದ ಸಂಭ್ರಮ, ಮುಂದಿನ ತಿಂಗಳ ಮೊದಲ ದಿನವೇ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಯುಗಾದಿ ಎಂದರೆ ತಪ್ಪಾಗಲಾರದು.

Facebook Comments

Sri Raghav

Admin