ಮತ್ತೆ ಫೀಲ್ಡಿಗಿಳಿಯಲಿದ್ದಾರೆ ಸಾನಿಯಾ ಮಿರ್ಜಾ

ಈ ಸುದ್ದಿಯನ್ನು ಶೇರ್ ಮಾಡಿ

Sania-Mirza

ನವದೆಹಲಿ,ಫೆ.10- ಬಹಳ ಕಾಲದಿಂದ ಟೆನಿಸ್‍ನಿಂದ ದೂರ ಉಳಿದಿದ್ದ ಸಾನಿಯಾ ಮಿಜರ್ ಮತ್ತೆ ಫೀಲ್ಡಿಗಿಳಿಯಲಿದ್ದಾರೆ. ಸದ್ಯದಲ್ಲೇ ಅದಕ್ಕಾಗಿ ಅವರು ತಾಲೀಮು ಆರಂಭಿಸುತ್ತಿದ್ದಾರೆ.

32ರ ಹರೆಯದವರು ಸಾನಿಯ, ಕಳೆದ ಅಕ್ಟೋಬರ್ 2017ರಲ್ಲಿ ಚೀನಾ ಓಪನ್ಸ್‍ನಲ್ಲಿ ಸ್ಪರ್ಧಿಸಿದ್ದರು. ನಂತರ ಮೊಣಕಾಲು ಗಾಯದಿಂದಾಗಿ ಬಹಳ ದಿನಗಳಿಂದ ಟೆನಿಸ್‍ನಿಂದ ದೂರ ಉಳಿದಿದ್ದರು.

ಈಗ ಮತ್ತೆ ಟೆನಿಸ್ ಆಡಲು ಅವರು ಒಲವು ತೋರಿದ್ದು, ಈ ವರ್ಷಾಂತ್ಯದೊಳಗೆ ವೃತ್ತಿಪರವಾಗಿ ಫೀಲ್ಡಿನಲ್ಲಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ನನಗೀಗ 32 ವರ್ಷ.

ನಾನು ಮುಂಚಿನಂತೆ ಟೆನಿಸ್ ಆಟಗಾರ್ತಿಯಾಗುವಷ್ಟು ಯೌವ್ವನದವಳಲ್ಲ. ಆದರೆ ಟೆನಿಸ್ ಆಡದಿದ್ದರೆ ನಾನು ಸತ್ತು ಹೋಗುತ್ತೇ. ಟೆನಿಸ್ ನನ್ನ ಜೀವನ, ಅದು ನನಗೆ ಎಲ್ಲವನ್ನೂ ನೀಡಿದೆ. ಅದಕ್ಕಾಗಿ ಟೆನಿಸ್‍ನ್ನು ಬಿಟ್ಟಿರಲಾರೆ ಎಂದಿದ್ದಾರೆ.

22 ವಯಸ್ಸಿನ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ವಿಜೇತ ಜರ್ಮನ್ ದಂತಕಥೆ ಸ್ಟೆಫಿ ಗ್ರಾಫ್ ಮದುವೆಯಾಗಿ ಮಗುವಿನ ತಾಯಿಯಾದ ಮೇಲೂ ಸಾಕಷ್ಟು ಸಾಧನೆ ಮಾಡಿದ್ದಾರೆ .

ಅವರು ಶ್ರೇಷ್ಠ ಆಟಗಾರರಾಗಿದ್ದಾರೆ ಎಂದು ಹೇಳುವ ಮೂಲಕ ಮತ್ತೆ ಟೆನಿಸ್‍ಗೆ ಮರಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಭಾರತವು ವಿಭಿನ್ನ ಕ್ರೀಡೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಟೆನ್ನಿಸ್ನಲ್ಲಿ ಇದು ಸಾಕಷ್ಟು ಇಲ್ಲ. ಉನ್ನತ ಮಟ್ಟದ ಆಟಗಾರರನ್ನು ಉತ್ತೇಜಿಸುವ ಯಾವುದೇ ವ್ಯವಸ್ಥೆಯಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin