ಶಕ್ತಿಸೌಧದ ಮುಂದೆ ಸಾಮೂಹಿಕ ಸೂರ್ಯ ನಮಸ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Yoga--02

ಬೆಂಗಳೂರು, ಫೆ.10-ಆಯುಷ್ ಇಲಾಖೆ ವತಿಯಿಂದ ಇಂದು ವಿಧಾನಸೌಧ ಮುಂಭಾಗ ರಥಸಪ್ತಮಿ ಪ್ರಯುಕ್ತ ಸಾಮೂಹಿಕ ಸೂರ್ಯ ನಮಸ್ಕಾರ ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ 6ಗಂಟೆಯಿಂದ 8.30ರ ವರೆಗೆ ನೂರೂರು ಮಂದಿ ಪಾಲ್ಗೊಂಡು ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿ ಸಿದರು. ಸೂರ್ಯ ನಮಸ್ಕಾರದ ಜೊತೆಗೆ ಯೋಗ್ಯಾಭ್ಯಾಸವು ಕೂಡ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಗಂಗಾಂಬಿಕೆ ಅವರು ದಿನನಿತ್ಯ ವ್ಯಾಯಾಮದಿಂದ ಮತ್ತು ಸರಿಯಾದ ಜೀವನಶೈಲಿಯಿಂದ ಆರೋಗ್ಯವನ್ನ ಕಾಪಾಡಿಕೊಳ್ಳುವುದು ಇಂದಿನ ದಿನದಲ್ಲಿ ಅತ್ಯವಶ್ಯಕವಾಗಿದೆ.

ರೋಗ ಬರುವುದಕ್ಕೆ ಮುಂಚೆ ನಿಯಂತ್ರಿಸುವುದು ಸೂಕ್ತ. ಸೂರ್ಯನಮಸ್ಕಾರದಿಂದ ಮನಸ್ಸಿಗೆ ಶಾಂತಿ ಹಾಗೂ ದೇಹಕ್ಕೂ ಉತ್ತಮವಾದ ವ್ಯಾಯಮ ಸಿಗುತ್ತದೆ ಎಂದು ಹೇಳಿದರು.  ಅದ್ಯಮ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ವಿಧಾನಪರಿಷತ್ ಸದಸ್ಯ ಶರವಣ ಮತಿತ್ತರರು ಹಾಜರಿದ್ದರು.

Facebook Comments

Sri Raghav

Admin